ಕಲ್ಪ ಮೀಡಿಯಾ ಹೌಸ್ | ಧಾರವಾಡ |
ರೈತರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು, ಉತ್ತಮ ರೀತಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹೇಳಿದರು.
ವಾಲ್ಮಿ, ಧಾರವಾಡ ಆವರಣದಲ್ಲಿ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯ 37 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ವಾಲ್ಮಿ, ಧಾರವಾಡ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೆಲಂಗಾಣ ಜಲ ಸಂಪನ್ಮೂಲ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ವ್ಹಿ. ಪ್ರಕಾಶ್ ರಾವ್, ಮಲಪ್ರಭಾ ಯೋಜನಾ ಮಟ್ಟದ ನಿರ್ದೇಶಕರು, ನೀ.ಬ.ಸ.ಸಂ. ಗಳ ಮಹಾ ಮಂಡಳ, ನವೀಲು ತೀರ್ಥ ಸದಾಶಿವ ಗೌಡ ಪಾಟೀಲ ಮತ್ತು ಸಂಯೋಜಕರು, ಬಿ.ವೈ ಬಂಡಿವಡ್ಡರ ರವರು ಪ್ರಾಧ್ಯಾಪಕರು, ವಾಲ್ಮಿ ಧಾರವಾಡ ಮತ್ತು ವಾಲ್ಮಿ ಸಂಸ್ಥೆಯ ಸಿಬ್ಬಂದಿಗಳು, ವಿವಿಧ ಜಿಲ್ಲೆಯ ರೈತರು ಹಾಗೂ ರೈತ ಮುಖಂಡರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post