ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತ್ಯಂತ ಪ್ರತಿಭಾನ್ವಿತ ಮಕ್ಕಳ ವೈದ್ಯ, ಸಾಧಕ, ಪ್ರಗತಿಪರರು, ಸರಳ ವ್ಯಕ್ತಿತ್ವವುಳ್ಳವರಾಗಿರುವ ಡಾ. ಧನಂಜಯ ಸರ್ಜಿ Dr. Dhananjaya Sarji ಅವರಿಗೆ ಆಚೀವರ್ ಆಫ್ ಕರ್ನಾಟಕ ಪ್ರಶಸ್ತಿ ಲಭಿಸಿರುವ ಹಿನ್ನೆಲೆ ಶ್ರೀನಿಧಿ ಟೆಕ್ಸ್‌ಟೈಲ್ಸ್ ವರ್ಲ್ಡ್ ಹಾಗೂ ಶ್ರೀನಿಧಿ ಸಿಲ್ಕ್ ಅಂಡ್ ಟೆಕ್ಸ್ ಟೈಲ್ಸ್‌ನ Shrinidhi textile Shivamogga ವೆಂಕಟೇಶಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.
ಡಾ. ಧನಂಜಯ ಸರ್ಜಿ ಅವರು 2007ರಲ್ಲಿ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿ ಇಷ್ಟು ವರ್ಷಗಳ ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಉತ್ಕೃಷ್ಟ ಗುಣಮಟ್ಟದಲ್ಲಿ ರಿಯಾಯಿತಿ ದರದಲ್ಲಿ ಸೇವೆ ನೀಡಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಣನೀಯ ಸೇವೆ ಸಲ್ಲಿಸಿದ್ದಾರೆ. ಉತ್ಕೃಷ್ಟ ಗುಣಮಟ್ಟದ ಸೇವೆಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೆಸರಾಗಿದ್ದು, ಮಲೆನಾಡಿನಲ್ಲೇ ಮನೆ ಮಾತಾಗಿದೆ. ಅತ್ಯಂತ ಕ್ರಿಯಾಶೀಲರಾಗಿರುವುದು ಧನಂಜಯ ಸರ್ಜಿ ಅವರ ಜೀವನದ ಸಾಧನೆಗೆ ಜೀವಂತ ಸಾಕ್ಷಿಯಾಗಿದೆ. 2014 ರಲ್ಲಿ ಜೀರೊ ಹಾಸಿಗೆಯಿಂದ ಪ್ರಾರಂಭವಾಗಿ ಕೇವಲ ೯ ವರ್ಷದಲ್ಲಿ ೨೫೬ ಬೆಡ್ ಇರುವ ಆಸ್ಪತ್ರೆಯಾಗಿ ಬೆಳೆದಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮನ್ನು ತಾವು ಆರ್ಪಿಸಿಕೊಂಡು ಸಲ್ಲಿಸಿದ ಅಪಾರವಾದ ಸೇವೆಯನ್ನು ಗುರುತಿಸಿ ನೀಡುವ ಅಚೀವರ್ ಆಫ್ ಕರ್ನಾಟಕ ಪ್ರಶಸ್ತಿಯನ್ನು ಧನಂಜಯ ಸರ್ಜಿ ಅವರಿಗೆ ನೀಡಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ. ಹಾಗೂ ಇದು ಶಿವಮೊಗ್ಗ ಜಿಲ್ಲೆಯೇ ಹೆಮ್ಮೆ ಪಡುವ ವಿಷಯ ಎಂದಿದ್ದಾರೆ.
ಸರ್ಜಿಯವರ ಮುಂದಿನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿ, ಹಾಗೂ ಸೇವಾ ಸಾಧನೆಗೆ ಇನ್ನೂ ಹೆಚ್ಚಿನ ಉನ್ನತವಾದ ಗೌರವ ಸ್ಥಾನ ದೊರೆಯಲಿ, ಅವರ ಸಕಲ ಆಶೋತ್ತರಗಳು ಸಾಕಾರಗೊಳ್ಳಲಿ. ಧನಂಜಯ ಸರ್ಜಿ ಅವರ ಪ್ರೇರಣಾಶಕ್ತಿ, ಕಾರ್ಯ ತತ್ಪರತೆ, ಸಮರ್ಪಣಾ ಮನೋಭಾವ, ಮುಂದೆಯೂ ಹೀಗೆಯೇ ಇದ್ದು, ಮುಂದಿನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿ ಎಂದು ಪ್ರಕಟಣೆಯಲ್ಲಿ ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post