ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಚಿವರು ಖಾತೆಗಾಗಿ ಕ್ಯಾತೆ ತೆಗೆದಿರುವುದು ಸರ್ಕಾರ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ C T Ravi ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಇನ್ನು ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ಆಗಿಲ್ಲ. ಈಗಲೇ ಅಸಮಾಧಾನ ಉಂಟಾದರೆ ಪೂರ್ಣ ಪ್ರಮಾಣದ ಸಂಪುಟದ ನಂತರ ಪರಿಣಾಮ ಏನು ಆಗಬಹುದು. ಇದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಇವರನ್ನು ಸಂಭಾಳಿಸುವುದನ್ನು ಬಿಟ್ಟು ಸಿಎಂಗೆ ಬೇರೆ ಕೆಲಸ ಮಾಡಲು ಆಗುವುದಿಲ್ಲ ಎಂದರು.
1,34,000 ಕೋಟಿ ರೂ. ಸಾಲ ಮಾಡಬೇಕಾಗುತ್ತದೆ ಎಂದು ಬಜೆಟ್ ಪೂರ್ವ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಡಿಕೆಶಿ ಕೂಡ ಮತ್ತಷ್ಟು ಘೋಷಣೆ ಮಾಡಿದ್ದಾರೆ. ಇದು ಕೇಳಲು ಮತ್ತಷ್ಟು ಚಂದ. ಉಚಿತ ಬಸ್ ಪಾಸ್ ಎಂದರೆ ಇನ್ನಷ್ಟು ಸಾಲ ಮಾಡ ಬೇಕಾಗುತ್ತೆ. ಜನರ ಮೇಲೆ ತೆರಿಗೆ ಹಾಕಬೇಕಾಗುತ್ತದೆ ಎಂದರು.
ಡಿಕೆಶಿ ಅನುಭವ ಹೊಂದಿರುವ ಮುಖ್ಯಮಂತ್ರಿ ಆಗಿರಬಹುದು. ಆದರೆ, ರಾಜ್ಯವನ್ನು ಅಭಿವೃದ್ಧಿಪಡಿಸುವ ಇಚ್ಛಾ ಶಕ್ತಿಯ ಕೊರತೆ ಇದೆ. ಸಿದ್ದರಾಮಯ್ಯ ಈಗಲೂ ಕೂಡ ಪವರ್ ಫುಲ್. ಸಿದ್ದರಾಮಯ್ಯನವರನ್ನು ಕಡೆಗಣಿಸಿ ರಾಜಕಾರಣ ಮಾಡುವುದು ಅಷ್ಟು ಸುಲಭ ಅಲ್ಲ. ಮಾಸ್ ಲೀಡರ್ಸ್ ಅಧಿಕಾರದಲ್ಲಿರಲಿ, ಇಲ್ಲದಿರಲಿ ಅವರ ಪ್ರಭಾವ ಇರುತ್ತದೆ ಎಂದರು.
Also read: ಶಿವಮೊಗ್ಗ | ಕ್ರೇನ್’ಗೆ ಸಿಲುಕಿ ಬೆಳ್ತಂಗಡಿ ಮೂಲದ ಕಾರ್ಮಿಕ ದಾರುಣ ಸಾವು
ದನಗಳಿಗೆ ಹಾಕುವುದು ಬೇರೆಯವರ ಹೊಲಗಳಿಗೆ ನುಗ್ಗಬಾರದು ಎಂದು. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರಿಗೂ ತೊಂಡಿ ಹಾಕಲಾಗಿದೆ. ಡಿಕೆಶಿ ಬೇರೆ ಖಾತೆಗಳಿಗೆ ಕೈ ಹಾಕಬಾರದು ಎಂದು ತೊಂಡಿ ಹಾಕುವ ಕೆಲಸ ಮಾಡಿದ್ದಾರೆ. ಒಬ್ಬರಿಗೆ ಹೆಚ್ಚುವರಿ ಜವಾಬ್ದಾರಿ ಕೊಟ್ಟಿದ್ದಕ್ಕೆ ಸಚಿವರು ಮುನಿಸಿಕೊಂಡಿದ್ದಾರೆ. ಹಿರಿತನಕ್ಕೆ ತಕ್ಕ ಖಾತೆ ಕೊಟ್ಟಿಲ್ಲ ಎಂದು ಮತ್ತೊಬ್ಬರು ಮುನಿಸಿಕೊಂಡಿದ್ದಾರೆ ಎಂದರು.
ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕು ಎಂದು ರಾಮಲಿಂಗಾರೆಡ್ಡಿ ಮುನಿಸಿಕೊಂಡ ವಿಚಾರದ ಬಗ್ಗೆ ಮಾತನಾಡಿ, ಬೆಂಗಳೂರಿನಲ್ಲಿ ಅತಿವೃಷ್ಟಿಯಲ್ಲಿ ಲಾಭ ಇದೆ. ಬರದಲ್ಲೂ ಲಾಭ ಇದೆ. ಬೆಂಗಳೂರಿನಲ್ಲಿ ಮಳೆಗೂ ಬೆಳೆಗೂ ಏನು ಸಂಬಂಧ ಇಲ್ಲ. ಬೆಂಗಳೂರಿನಲ್ಲಿ ಮಳೆ ಜಾಸ್ತಿ ಬಂದರೂ ಬರದಿದ್ದರೂ ಬೆಳೆ ಇರುತ್ತದೆ ಎಂದರು.
ರಾಜ್ಯದ ಮೂರು ವರ್ಷದ ಸರ್ಕಾರದ ಅವಲೋಕನ ಮಾಡಿದಾಗ ಭ್ರಷ್ಟಾಚಾರ ರಹಿತ ಆಡಳಿತ ಕೊಡಬಹುದು ಅನಿಸುತ್ತಿಲ್ಲ. ಡಿಕೆಶಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಬರಲಿ ಎಂದು ನಿರೀಕ್ಷೆ ಮಾಡುತ್ತೇವೆ. ಡಿಕೆಶಿ ಆದಾಯದಷ್ಟೇ ರಾಜ್ಯದ ಆದಾಯವೂ ಅದೇ ರೀತಿ ಏರಿಕೆ ಆಗಲಿ. ನವ ಕರ್ನಾಟಕದ ನಿರ್ಮಾತೃ ಎಂಬ ಬಿರುದು ನಿಮಗೆ ಸಿಗುವಂತೆ ಆಗಲಿ. ಒಂದು ಕಡೆ ಆಲೂಗಡ್ಡೆ ಹಾಕಿ ಚಿನ್ನದ ಬೆಳೆ ತೆಗೆಯುವಂತೆ ರಾಜ್ಯದ ದೃಷ್ಟಿಯಿಂದಲೂ ಆಗಲಿ. ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ವಿದ್ಯೆ ಗೊತ್ತಿರುವ ಕಲಾವಿದರು ಇದ್ದಾರೆ. ಅದು ರಾಜ್ಯಕ್ಕೆ ಬಳಕೆ ಆಗಲಿ ಎಂದರು.
ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಅಣ್ಣಾಮಲೈ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ನಾನು ಅನ್ನುವುದಿಲ್ಲ. ಅಣ್ಣಾಮಲೈ ಮಹತ್ವಾಕಾಂಕ್ಷಿ ಒಳ್ಳೆಯ ಮನುಷ್ಯ. ಮನುಷ್ಯನ ಸಮರ್ಪಿಕ ಜೀವನದಿಂದ ಸಾರ್ಥಕತೆ ಬರುತ್ತದೆ ಅದೇ ರೀತಿ ಇದ್ದಾರೆ. ತಮಿಳುನಾಡಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕಿಲ್ಲ. ನಾವು ಲಾಭವನ್ನು ಗಳಿಸಿಲ್ಲ ಎಂದರೆ ನಷ್ಟದ ಲೆಕ್ಕ ಹೇಗೆ? ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಮತ ಗಳಿಕೆ ಆಯ್ತು ಈ ಹಿಂದೆ ಎಷ್ಟಾಗಿದೆ ಎಂಬ ವಿಮರ್ಶೆಗೆ ಹೋಗಲ್ಲ. ಅಣ್ಣಾಮಲೈಯ ಮೂಲಕ ದೇಶಕ್ಕೆ ರಾಜ್ಯಕ್ಕೆ ಒಳ್ಳೆದಾಗಲಿ. ದೇಶಭಕ್ತಿಯನ್ನು ಉಳಿಸಿಕೊಂಡು ರಾಜಕಾರಣ ಮಾಡುವುದಾದರೆ ನಾನು ಯಾಕೆ ಬೇಡ ಎನ್ನಲಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Comments 1