Sunday, May 11, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಪ್ರಥಮ ಬಾರಿಗೆ ರಾಜ್ಯಸರ್ಕಾರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ: ಸಚಿವ ಅಶ್ವತ್ಥನಾರಾಯಣ

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಎನ್.ಆರ್. ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆ ಅವರಿಗೆ ಪ್ರಶಸ್ತಿ ಪ್ರದಾನ

June 29, 2022
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 5 minutes

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಬೆಂಗಳೂರನ್ನು ಜಾಗತಿಕ ತಾಣವನ್ನಾಗಿ ಪರಿವರ್ತಿಸಲು ಗಣ್ಯರು ನೀಡಿದ ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರವು ಪ್ರಪ್ರಥಮ ಬಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ನಗರವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಲು ಶ್ರಮಿಸಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲು ದೇಶದ ಯಾವುದೇ ರಾಜ್ಯ ಸರ್ಕಾರ ಆರಂಭಿಸಿದ ಇಂತಹ ಮೊದಲ ಪ್ರಶಸ್ತಿ ಇದಾಗಿದೆ ಎಂದು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು

ಸಮಾರಂಭದಲ್ಲಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ (ಆಡಳಿತ ಮತ್ತು ಸಾರ್ವಜನಿಕ ಸೇವೆ), Former CM S M Krishna ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ (ಉದ್ಯಮ) N R Narayana Murthy ಮತ್ತು ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ (ಸಾಮಾಜಿಕ ಮತ್ತು ಸಂಸ್ಕೃತಿ) Prakash Padukone ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನವಬೆಂಗಳೂರು ನಿರ್ಮಾತೃರಾದ ನಾಡಪ್ರಭು ಕೆಂಪೇಗೌಡರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಆರಂಭಿಸಲಾಗಿದೆ.

“ಶತಮಾನಗಳ ಹಿಂದೆಯೇ ನಮ್ಮ ನಾಡಪ್ರಭು ಕೆಂಪೇಗೌಡರು ಬೆಂಗಳೂರಿಗೆ ನಾಲ್ಕು ದಿಕ್ಕುಗಳ ಚೌಕಟ್ಟು ನಿರ್ಮಿಸುವ ಮೂಲಕ ನಗರಾಭಿವೃದ್ಧಿಗೆ ಸ್ಪಷ್ಟ ರೂಪುರೇಷೆ ಹಾಕಿದ್ದರು. ಬೆಂಗಳೂರು ನಗರವಾಗಿ ಹೇಗೆ ಬೆಳೆಯಬೇಕು ಎಂಬ ದೂರದೃಷ್ಟಿತ್ವ ಹಾಗೂ ಕ್ರಿಯಾಶೀಲತೆ ಅವರಲ್ಲಿತ್ತು. ಅಂದಿನಿಂದ, ಹಲವು ದಿಗ್ಗಜರು ಬೆಂಗಳೂರನ್ನು ಜಾಗತಿಕ ಭೂಪಟದಲ್ಲಿ ಗುರುತಿಸಲ್ಪಡುವ ನಗರವನ್ನಾಗಿ ಅಭಿವೃದ್ಧಿಪಡಿಸುವ ದೂರದೃಷ್ಟಿ ಮತ್ತು ಕ್ರಿಯಾಶೀಲತೆ ತೋರಿದ್ದಾರೆ. ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಪರಿವರ್ತಿಸುವ ಜತೆ ನಗರದ ಬೆಳವಣಿಗೆಗೆ ಕೊಡುಗೆ ನೀಡಿದ ಹಲವು ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದೊಂದಿಗೆ ಈ ವರ್ಷ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಆರಂಭಿಸಲಾಗಿದೆ.” ಎಂದು ಹೇಳಿದರು.
2018 ರಲ್ಲಿ, ಕರ್ನಾಟಕ ಸರ್ಕಾರವು ಬೆಂಗಳೂರಿನ ಅಭಿವೃದ್ಧಿಯ ಪಯಣಕ್ಕೆ ಭದ್ರ ಬುನಾದಿ ಹಾಕಿದ ಕೆಂಪೇಗೌಡರ ಪರಂಪರೆಯನ್ನು ರಕ್ಷಿಸಲು, ನಿರ್ವಹಿಸಲು ಮತ್ತು ಪ್ರದರ್ಶಿಸಲು ನಾಡಪ್ರಭು ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, 2018 ಅನ್ನು ಅಂಗೀಕರಿಸಿತು. ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ-2022, ಪ್ರಾಧಿಕಾರದ ಚಟುವಟಿಕೆಗಳಲ್ಲಿ ಒಂದಾಗಿದೆ. ಈ ವರ್ಷದ ಪ್ರಶಸ್ತಿ ಪುರಸ್ಕೃತರ ಆಯ್ಕೆಗಾಗಿ 5 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು.

ವಿವಿಧ ಕ್ಷೇತ್ರಗಳ ಸಾಧಕ ವ್ಯಕ್ತಿಗಳನ್ನೊಳಗೊಂಡ ತೀರ್ಪುಗಾರರ ಸಮಿತಿಯು ಸುದೀರ್ಘ ಚರ್ಚೆ ನಡೆಸಿ, ಜಾಗತಿಕ ಭೂಪಟದಲ್ಲಿ ಬೆಂಗಳೂರನ್ನು ಗುರುತಿಸುವಲ್ಲಿ ಕೊಡುಗೆ ನೀಡಿದ ಪ್ರಮುಖ ನಾಯಕರು ಎಂಬ ಪ್ರಾಥಮಿಕ ಮಾನದಂಡದ ಆಧಾರದ ಮೇಲೆ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.

“”ಸಾಧಕರು ಬೆಂಗಳೂರಿಗರಾಗಿರಬೇಕಾಗಿಲ್ಲವಾದರೂ, ಅವರ ಅವಿಶ್ರಾಂತ ಪ್ರಯತ್ನಗಳು, ಉತ್ಸಾಹ ಮತ್ತು ಸಾಧನೆಗಳು ಬೆಂಗಳೂರನ್ನು ಜಾಗತಿಕವಾಗಿ ಗುರುತಿಸಲ್ಪಟ್ಟ ಭಾರತದ ‘ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ’ವನ್ನಾಗಿಸಲು ನೆರವಾಗಿದೆ. ನಿಸ್ಸಂದೇಹವಾಗಿ, ಅವರು ಬೆಂಗಳೂರನ್ನು ಜಾಗತಿಕ ಭೂಪಟದಲ್ಲಿ ಅಗ್ರಪಂಕ್ತಿಗೆ ಕೊಂಡಿಯ್ದಿದ್ದಾರೆ”,” ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು, ಎಕ್ಸೆಲ್ ಇಂಡಿಯಾದ ಸಹ-ಸಂಸ್ಥಾಪಕ ಮತ್ತು ಪಾಲುದಾರರಾದ ಪ್ರಶಾಂತ್ ಪ್ರಕಾಶ್ ಹೇಳಿದರು.
ಪ್ರಶಾಂತ್ ಪ್ರಕಾಶ್ ಅವರ ಜತೆ ಆಯ್ಕೆ ಸಮಿತಿಯು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಟಿ.ವಿ. ಮೋಹನದಾಸ್ ಪೈ, ವಿದ್ವಾಂಸರು ಮತ್ತು ವಕೀಲರಾದ ಡಾ.ರಾಮಸ್ವಾಮಿ ಬಾಲಸುಬ್ರಹ್ಮಣ್ಯಂ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ ಅವರನ್ನೊಳಗೊಂಡಿದೆ.

ಬೆಂಗಳೂರು ಯಾವಾಗಲೂ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಮತ್ತು ಜಾಗತಿಕ ನಗರವಾಗಿದೆ. ಇಂದು ಅತ್ಯುತ್ಕೃಷ್ಟ ನವೋದ್ಯಮ ಪರಿಸರ ವ್ಯವಸ್ಥೆ ಹೊಂದಿರುವ ಜಗತ್ತಿನ ಟಾಪ್ 10 ನಗರಗಳಲ್ಲಿ ಸ್ಥಾನ ಪಡೆದಿದೆ ಮತ್ತು ಭಾರತದ ಮೊದಲ ನಗರವಾಗಿದೆ.

ಇಸ್ರೇಲ್ ಮೂಲದ ಸ್ಟಾರ್ಟ್ಅಪ್ಬ್ಲಿಂಕ್ನ ಗ್ಲೋಬಲ್ ಸ್ಟಾರ್ಟ್ಅಪ್ ಇಕೋಸಿಸ್ಟಮ್ ಇಂಡೆಕ್ಸ್, ಬೆಂಗಳೂರು “ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಭಾರತದಲ್ಲಿ ಅಗ್ರ ಸ್ಥಾನದಲ್ಲಿರುವ ನಗರ” ಹಾಗೂ ಜಾಗತಿಕವಾಗಿ 8ನೇ ಸ್ಥಾನದಲ್ಲಿರುವ ನಗರ ಎಂದು ಹೇಳುತ್ತದೆ, ಆದರೆ ನೀತಿ ಸಲಹಾ ಮತ್ತು ಸಂಶೋಧನಾ ಸಂಸ್ಥೆ ಸ್ಟಾರ್ಟ್ಅಪ್ ಜಿನೋಮ್ ಬಿಡುಗಡೆ ಮಾಡಿದ ಮತ್ತೊಂದು ವರದಿಯು ಬೆಂಗಳೂರಿನ ಟೆಕ್ ಇಕೋಸಿಸ್ಟಮ್ ಮೌಲ್ಯವನ್ನು $105 ಶತಕೋಟಿಗಿಂತ ಹೆಚ್ಚು ಎಂದು ಹೇಳಿದೆ. ಇದು ಸಿಂಗಾಪುರದ ಟೆಕ್ ಇಕೋಸಿಸ್ಟಮ್ ಮೌಲ್ಯ $89 ಶತಕೋಟಿ ಮತ್ತು ಟೋಕಿಯೋ ಟೆಕ್ ಇಕೋಸಿಸ್ಟಮ್ ಮೌಲ್ಯ $62 ಶತಕೋಟಿಗಿಂತ ಅಧಿಕವಾಗಿದೆ.
ಪ್ರಶಸ್ತಿ ಪುರಸ್ಕೃತರ ವಿವರ:

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ
ಅನುಕರಣೀಯ ಮುಖ್ಯಮಂತ್ರಿ ಎಂದು ಪರಿಗಣಿಸಲ್ಪಟ್ಟ ಅವರು, ಬೆಂಗಳೂರನ್ನು ಆರ್ಥಿಕ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದರು, ನಂತರ ಬಂದ ಇತರ ಮುಖ್ಯಮಂತ್ರಿಗಳು ಅವರ ಮಾದರಿಯನ್ನನುಸರಿಸಿದರು.

ನಮ್ಮ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಕಾರ್ಯತಂತ್ರವನ್ನು ರೂಪಿಸುವಲ್ಲಿ ಅವರು ಉದ್ಯಮ ಮತ್ತು ಸರ್ಕಾರದ ಭಾಗವಹಿಸುವಿಕೆಗೆ ಒತ್ತುನೀಡಿದರು. ಖಾಸಗಿ ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಒಳಗೊಂಡಿರುವ ಬೆಂಗಳೂರು ಅಡ್ವಾನ್ಸ್ಡ್ ಟಾಸ್ಕ್ ಫೋರ್ಸ್ ಅನ್ನು ಯಾರು ಮರೆಯಲು ಸಾಧ್ಯವಿಲ್ಲ, ಅವರು ಮೊದಲ ಬಾರಿಗೆ ಜಾಗತಿಕ ನಗರವಾಗಿ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಿದರು.

1999 ರಿಂದ 2004ರ ವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿದ್ದ ಅವರು ಕೇವಲ 5 ವರ್ಷಗಳ ಅವಧಿಯಲ್ಲಿ ನಮ್ಮ ಬೆಂಗಳೂರಿನ ದೃಷ್ಟಿಕೋನವನ್ನೇ ಬದಲಾಯಿಸಿದರು! ನಗರಾಭಿವೃದ್ಧಿ ಪರವಾದ ಹಾಗೂ ಅತ್ಯುತ್ಸಾಹಿ ಮುಖ್ಯಮಂತ್ರಿಯಾಗಿ ಅವರು ಬೆಂಗಳೂರನ್ನು ಜಾಗತಿಕ ನಗರ ಮತ್ತು ಭಾರತದ ಐಟಿ ರಾಜಧಾನಿಯಾಗಿ ಗುರುತಿಸಿಕೊಳ್ಳುವಲ್ಲಿ ಶ್ರಮಿಸಿದರು. ಎಸ್ಕಾಂಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಪ್ರಾರಂಭಿಸಿದರು ಮತ್ತು BHOOMI ಯೋಜನೆಯ ಮೂಲಕ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದರು. ಫ್ಲೈಓವರ್ಗಳನ್ನು ನಿರ್ಮಿಸುವ ಮೂಲಕ ಸಾರಿಗೆ ದಟ್ಟಣೆಯನ್ನು ಸುಗಮಗೊಳಿಸಲು ಪ್ರಯತ್ನಿಸಿದರು. ಭಾರತದ ಅತಿ ಉದ್ದದ ಫ್ಲೈಓವರ್ಗಳಲ್ಲಿ ಒಂದಾದ ಹೆಬ್ಬಾಳ ಫ್ಲೈಓವರ್ ಅನ್ನು ಅವರ ಆಡಳಿತದಲ್ಲಿ ನಿರ್ಮಿಸಲಾಯಿತು.
ಬರಗಾಲದ ಪರಿಸ್ಥಿತಿಯನ್ನು ನಿವಾರಿಸಲು ಅವರು ಮೋಡ ಬಿತ್ತನೆ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಪ್ರಯತ್ನಿಸಿದರು. ಆರಂಭಿಕ ಮಾತುಕತೆ ಮತ್ತು ಚರ್ಚೆಗಳನ್ನು ನಡೆಸುವ ಮೂಲಕ ಬೆಂಗಳೂರು ಮೆಟ್ರೋದ ನೀಲನಕ್ಷೆಯನ್ನು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕದ ಸುಸ್ಥಿರ ಆರ್ಥಿಕಾಭಿವೃದ್ಧಿಯು 2002ರಿಂದ ಆರಂಭವಾಯಿತು. ಇದು ನಮ್ಮ ಹೆಮ್ಮೆಯ ನಾಯಕ ಶ್ರೀ ಎಸ್.ಎಂ. ಕೃಷ್ಣ ಅವರ ದೂರದೃಷ್ಟಿ ಮತ್ತು ಕ್ರಿಯಾಶೀಲತೆಯನ್ನು ತೋರಿಸುತ್ತದೆ.
ಇನ್ಫೋಸಿಸ್ ಸಹ ಸಂಸ್ಥಾಪಕ ನಾಗವಾರ ರಾಮರಾವ್ ನಾರಾಯಣ ಮೂರ್ತಿ
ಎನ್‌ಆರ್‌ಎನ್ ಎಂದೇ ಜಗತ್ತಿಗೆ ಚಿರಪರಿಚಿತರು. ಪುಟ್ಟದಾಗಿ ಆರಂಭಿಸಿ ಭಾರತದ ಅತ್ಯಂತ ಯಶಸ್ವಿ IT ಕಂಪನಿಗಳಲ್ಲಿ ಒಂದನ್ನು ಸ್ಥಾಪಿಸುವವರೆಗೆ, ನಾರಾಯಣ ಮೂರ್ತಿ ಅವರು ಬೆಂಗಳೂರನ್ನು ಜಾಗತಿಕ ಭೂಪಟದಲ್ಲಿ ಅಗ್ರಪಂಕ್ತಿಗೆ ಕೊಂಡೊಯ್ದಿದ್ದಾರೆ. ಇಂದು ನಮ್ಮ ನಗರ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುತ್ತಿದ್ದರೆ, ಆ ಶ್ರೇಯಸ್ಸಿನ ದೈತ್ಯ ಪಾಲು ಇನ್ಫೋಸಿಸ್ ಮತ್ತು ಅದರ ಸಂಸ್ಥಾಪಕ ಶ್ರೀ ನಾರಾಯಣ ಮೂರ್ತಿಯವರಿಗೆ ಸಲ್ಲಬೇಕು. ದೊಡ್ಡ ಕನಸುಗಳನ್ನು ಕಾಣುವ ಮತ್ತು ತನ್ನ ಕನಸನ್ನು ನನಸಾಗಿಸುವ ದೂರದೃಷ್ಟಿ, ಆತ್ಮವಿಶ್ವಾಸ ಮತ್ತು ಉತ್ಸಾಹ ಅವರಲ್ಲಿತ್ತು.

Also read: ರಾಜ್ಯದಲ್ಲೇ ಉತ್ತಮ ತಾಯಿ, ಮಕ್ಕಳ ಆಸ್ಪತ್ರೆ ಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡ ಸರ್ಜಿ ಹಾಸ್ಪಿಟಲ್

ಈ ಪ್ರಕ್ರಿಯೆಯಲ್ಲಿ, ಬೆಂಗಳೂರು ಮತ್ತು ನಾರಾಯಣ ಮೂರ್ತಿ ಅವರು ಜತೆ ಜತೆಯಲ್ಲೇ ಬೆಳೆಯುವಂತಾಯಿತು. ಈ ಬಹು ಅಪರೂಪದ ಬೆಸುಗೆ ಮತ್ತು ಬಾಂಧವ್ಯದ ಕುರಿತು ಇಡಿ ನಾಡೇ ಮಾತನಾಡುತ್ತಿದೆ. ಅವರು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ 20 ಆಗಸ್ಟ್ 1946 ರಂದು ಜನಿಸಿದರು. ಅವರ ಸಮರ್ಪಣೆ, ಮೌಲ್ಯ ಮತ್ತು ತತ್ವಗಳು ಅತ್ಯಂತ ಸರಳ ಮತ್ತು ತೀರಾ ಸ್ನೇಹಮಯಿ ವ್ಯಕ್ತಿತ್ವ ಅವರದ್ದು.
ಜಗತ್ತು ನಮ್ಮನ್ನು ನೋಡುವ ರೀತಿಯನ್ನು ಬದಲಿಸಿದ ಯಶಸ್ಸಿನ ಕಥೆಯ ಭಾಗವಾಗಿ ನಾರಾಯಣಮೂರ್ತಿ ಹಾಗೂ ಇನ್ಫೋಸಿಸ್ ಭಾರತೀಯ ವ್ಯಾಪಾರ ಶೈಲಿಯ ಬೆಳವಣಿಗೆಯನ್ನು ಪ್ರತಿನಿಧಿಸಿದ್ದಾರೆ.ಭಾರತವನ್ನು ಜ್ಞಾನ ಆರ್ಥಿಕತೆಯಾಗಿ ನಿರ್ಮಿಸುವಲ್ಲಿ ಮತ್ತು ಭಾರತೀಯ ಮಿಲಿಯನೇರ್ಗಳ ಸೈನ್ಯ ಬೆಳೆಸುವಲ್ಲಿ ಮೂರ್ತಿಯವರ ಪಾತ್ರ ಅದ್ಭುತವಾಗಿದೆ. ನಾರಾಯಣಮೂರ್ತಿ, ಇನ್ಫೋಸಿಸ್ ಮತ್ತು ಬೆಂಗಳೂರು, ಇದು ಶಾಶ್ವತವಾಗಿ ಉಳಿಯುವ ಬಂಧವಾಗಿದೆ.

ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ
1980ರ ದಶಕದ ಅವಧಿಯಲ್ಲಿ ಭಾರತದಲ್ಲಿ ಕೆಲವೇ ಜನರಿಗೆ ತಿಳಿದಿದ್ದ ಕ್ರೀಡೆಯೊಂದರಲ್ಲಿ ವಿಶ್ವ ನಂ. 1 ಆಗಿರುವುದು ಸಣ್ಣ ಮಾತಲ್ಲ. ಈ ಸಾಧನೆ ಮಾಡಿದ್ದು ನಮ್ಮ ಬೆಂಗಳೂರು ಹುಡುಗನಾಗಿದ್ದ ಪ್ರಕಾಶ್ ಪಡುಕೋಣೆ! ಅವರು ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರರಾದಾಗ ಜಗತ್ತು ಗಮನಿಸಿತು. ಇದು ಚೀನಾ ಆಗಿರಲಿಲ್ಲ ಅಥವಾ ಇಂಡೋನೇಷ್ಯಾ ಅಲ್ಲ, ಏಷ್ಯಾದ ಇನ್ಯಾವುದೋ ರಾಷ್ಟ್ರವಾಗಿರಲಿಲ್ಲ ಬದಲಾಗಿ ಅದು ಭಾರತವಾಗಿತ್ತು ಎಂಬುದು ಜಗತ್ತಿಗೇ ತಿಳಿಯಿತು! ಅಂದಿನಿಂದ ಇಂದಿನವರೆಗೆ ಬ್ಯಾಡ್ಮಿಂಟನ್‌ನಲ್ಲಿ ನಮ್ಮೆಲ್ಲರ ಸಾಧನೆಗೆ ಪ್ರಕಾಶ್ ಅವರು ನಾಂದಿ ಹಾಡಿದ್ದಾರೆ.

1955ರ ಜೂನ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಪ್ರಕಾಶ್ ಬೆಂಗಳೂರಿನ ಅಪ್ರತಿಮ ಹುಡುಗನಾಗಿದ್ದರು. ಆಲ್-ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದಾಗ ಅವರು ವಿಶ್ವದ ನಂ 1 ಬ್ಯಾಡ್ಮಿಂಟನ್ ಆಟಗಾರರಾದರು. ಅವರು ಕೇವಲ 16 ವರ್ಷದವರಾಗಿದ್ದಾಗ 1971 ರಲ್ಲಿ ರಾಷ್ಟ್ರೀಯ ಸೀನಿಯರ್ ಚಾಂಪಿಯನ್ಶಿಪ್ ಗೆದ್ದರು. ಇದು ಅವರನ್ನು ಅಂತಹ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರನನ್ನಾಗಿ ಮಾಡಿತು. ಅವರ ವೃತ್ತಿಜೀವನದಲ್ಲಿ, ಅವರು ಸತತವಾಗಿ ಒಂಬತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ನಿರ್ಮಿಸಿದರು.
1996 ರಲ್ಲಿ ಬೆಂಗಳೂರಿನಲ್ಲಿ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಸ್ಥಾಪಿಸಲು ಅವರ ಕೊಡುಗೆ ಗುರುತರವಾಗಿದೆ. ಅವರ ಅಕಾಡೆಮಿ ಪುಯೆಲ್ಲಾ ಗೋಪಿಚಂದ್ ಮತ್ತು ಅಪರ್ಣಾ ಪೋಪಟ್ರಂತಹ ರಾಷ್ಟ್ರೀಯ ಚಾಂಪಿಯನ್ಗಳನ್ನು ಸಜ್ಜುಗೊಳಿಸಿದೆ. ಅವರು ಮತ್ತು ಅವರ ಸಾಧನೆಗಳು ಇಲ್ಲದಿದ್ದರೆ, ನಗರದ ಪ್ರತಿಯೊಂದು ದೊಡ್ಡ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಇಂದು ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ಇರುತ್ತಿರಲಿಲ್ಲ. ಕೆಲವು ವರ್ಷಗಳ ಹಿಂದೆ, ಅವರು ನಮ್ಮ ಬೆಂಗಳೂರಿನಲ್ಲಿ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರು 1991 ರಲ್ಲಿ ಸ್ಪರ್ಧಾತ್ಮಕ ಕ್ರೀಡೆಗಳಿಂದ ನಿವೃತ್ತರಾದ ನಂತರ, ಪಡುಕೋಣೆ ಅವರು ಅಲ್ಪಾವಧಿಯವರೆಗೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು 1993 ರಿಂದ 1996ರ ವರೆಗೆ ಭಾರತೀಯ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದರು. ಅವರು ಭಾರತದಲ್ಲಿ ಒಲಿಂಪಿಕ್ ಕ್ರೀಡೆಗಳನ್ನು ಉತ್ತೇಜಿಸಲು ಮೀಸಲಾದ ಪ್ರತಿಷ್ಠಾನವಾದ ಗೀತ್ ಸೇಥಿ ಅವರೊಂದಿಗೆ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಅನ್ನು ಸಹ-ಸ್ಥಾಪಿಸಿದರು.

ಜಗತ್ತು ಅವರನ್ನು ನಟಿ ದೀಪಿಕಾ ಪಡುಕೋಣೆ ಅವರ ತಂದೆ ಎಂದು ಹೆಚ್ಚು ತಿಳಿದಿರಬಹುದಾದರೂ, ಬೆಂಗಳೂರಿಗರಿಗೆ ಅವರು ಚಿರಪರಿಚಿತರು ಮತ್ತು ದೀಪಿಕಾ ಪಡುಕೋಣೆಯವರ ತಂದೆಯಾಗಿರುವ ಪ್ರಕಾಶ್ ಪಡುಕೋಣೆ ಓರ್ವ ಜಗದ್ವಿಖ್ಯಾತ ಬ್ಯಾಡ್ಮಿಂಟನ್ ಲೆಜೆಂಡ್ ಎಂಬ ಅಭಿಮಾನ ಹೊಂದಿದ್ದಾರೆ ಮತ್ತು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Former CM S M KrishnaKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaN R Narayana MurthyNewsinKannadaNewsKannadaPrakash PadukoneState Newsಎನ್.ಆರ್. ನಾರಾಯಣ ಮೂರ್ತಿಪ್ರಕಾಶ್ ಪಡುಕೋಣೆಬೆಂಗಳೂರುಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ
Previous Post

ಮೈಸೂರು: ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ!

Next Post

ಭದ್ರಾವತಿ: ಕಾರೇಹಳ್ಳಿ ಕೆರೆಗೆ ಶಾಸಕ ಸಂಗಮೇಶ್ವರ್ ಬಾಗಿನ ಅರ್ಪಣೆ…

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿ: ಕಾರೇಹಳ್ಳಿ ಕೆರೆಗೆ ಶಾಸಕ ಸಂಗಮೇಶ್ವರ್ ಬಾಗಿನ ಅರ್ಪಣೆ...

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಾರತ – ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ | ವಿದೇಶಾಂಗ ಸಚಿವ ಎಸ್. ಜೈಶಂಕರ್‌

May 10, 2025

ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ

May 10, 2025

ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳವಣಿಗೆಯಾಗಬೇಕು: ಎನ್. ರಮೇಶ್ 

May 10, 2025

ಇದು ನವ ಭಾರತ… ಆಂತರಿಕ ರಕ್ಷಣೆಯ ವಿಚಾರಕ್ಕೆ ಬಂದರೆ ಯಾರ ಮಾತೂ ಕೇಳುವುದಿಲ್ಲ

May 10, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಾರತ – ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ | ವಿದೇಶಾಂಗ ಸಚಿವ ಎಸ್. ಜೈಶಂಕರ್‌

May 10, 2025

ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ

May 10, 2025

ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳವಣಿಗೆಯಾಗಬೇಕು: ಎನ್. ರಮೇಶ್ 

May 10, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!