ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಾಲರಾಜ ಅರಸ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ನಲ್ಲಿ ಇಂದು ಕೆನರಾ ಬ್ಯಾಂಕ್ Canara Bank ಶಾಖಾ ಮುಖ್ಯಸ್ಥರ 2022 -23 ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕೆನರಾ ಹೋಂ ಲೋನ್ ಸೆಕ್ಯೂರ್ ಬಗ್ಗೆ ಬ್ಯಾಂಕ್ ಶಾಖಾ ಪ್ರಬಂಧಕರಿಗೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಖಾಸಗಿ ಶಾಲೆಯಲ್ಲಿ ಉಪನ್ಯಾಸಕರಾಗಿದ್ದ ಮೊಹಮ್ಮದ್ ರಫೀಕ್ ಶೇಷಾದ್ರಿಪುರಂ ಶಾಖೆಯಲ್ಲಿ ಮನೆ ನಿರ್ಮಿಸಲು 30 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಇದರಿಂದ ಅವರ ಕುಟುಂಬ ಕಂಗಾಲಾಗಿದ್ದು, ಇಬ್ಬರು ಮಕ್ಕಳ ಶಿಕ್ಷಣಕ್ಕೆ ಮತ್ತು ಕುಟುಂಬ ನಿರ್ವಹಣೆಗೆ ತೊಂದರೆಯಾಗಿತ್ತು. ಕೆನರಾ ಹೋಂ ಲೋನ್ ಸೆಕ್ಯೂರ್ ಮೂಲಕ ರಫೀಕ್ ಮಾಡಿದ ಸಾಲಕ್ಕೆ ವಿಮೆ ಮಾಡಿಸಿದ್ದರಿಂದ ಅವರ ನಿಧನದ ನಂತರ ಸಂಪೂರ್ಣ ಸಾಲದ ಮೊತ್ತವನ್ನು ಕೆನರಾ ಹೋಂ ಲೋನ್ ಸೆಕ್ಯೂರ್ ನಿಂದ ಭರಿಸಲಾಗಿದೆ. ಮೊದಲೇ ಕಟ್ಟಲಾಗಿದ್ದ 3 ಲಕ್ಷ ರೂ.ಗಳನ್ನು ಬ್ಯಾಂಕ್ ನಿಂದ ಕುಟುಂಬದವರಿಗೆ ಮರುಪಾವತಿಸಲಾಗಿದೆ ಎಂದು ಬ್ಯಾಂಕ್ ನ ಜನರಲ್ ಮ್ಯಾನೇಜರ್ ರಾಮಾನಾಯ್ಕ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮೊಹಮ್ಮದ್ ರಫೀಕ್ ಅವರ ಪತ್ನಿಗೆ ಚೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಫೀಕ್ ಅವರ ಪತ್ನಿ, ಬ್ಯಾಂಕ್ ನವರು ನಾನು ಜೀವನದಲ್ಲಿ ಮರೆಯಲಾಗದಂತೆ ಮಾನವೀಯತೆ ಮೆರೆದು ನನ್ನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ನಾನು ಕೆನರಾ ಬ್ಯಾಂಕ್ ಗೆ ಚಿರಋಣಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಡಿಜಿಎಂ ಸಂದೀಪ್ ರಾವ್, ಎಜಿಎಂ ಪ್ರದೀಪ್ ಝಾ ಕೆನರಾ ಬ್ಯಾಂಕ್ ನ ವಿವಿಧ ಶಾಖೆಗಳ ಅಧಿಕಾರಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post