ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೂತ್ರ ವಿಸರ್ಜನೆಗೆಂದು ಹೋದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ನಿನ್ನೆ ರಾತ್ರಿ ನಗರದಲ್ಲಿ ನಡೆದಿದೆ.
ಕಾಂತರಾಜು (27) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ರಾಜೀವ್ ಗಾಂಧಿ ಬಡಾವಣೆಯ ಮೊದಲನೇ ತಿರುವಿನಲ್ಲಿರುವ ಮನೆಯಿಂದ ಹೊರ ಬಂದು ಮೂತ್ರ ವಿಸರ್ಜನೆ ಮಾಡುವಾಗ ಹಿಂಬದಿಯಿಂದ ಬಂದ ನಾಲ್ಕೈದು ಜನ ಮಚ್ಚು ಮತ್ತು ಬ್ಯಾಟ್ ನಿಂದ ದಾಳಿ ನಡೆಸಿದ್ದಾರೆ.
ಯುವಕ ಸಿನಿಮೀಯ ರೀತಿಯಲ್ಲಿ ಅವರ ಆಯುಧಗಳನ್ನೇ ಕಸಿದುಕೊಂಡು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನ ಕರೆಯಿಸಿಕೊಂಡ ಹಿನ್ನೆಲೆಯಲ್ಲಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
Also read: ಆ.28ರಂದು ಯೋಗಥಾನ್: 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಯೋಗ ಮಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಾಣ
ದಾಳಿ ನಡೆಸಿದವರು ಅನ್ಯಕೋಮಿನ ಹುಡುಗರು ಎಂದು ಹೇಳಲಾಗುತ್ತಿದ್ದು, ದಾಳಿ ವೇಳೆ ಕಾಂತರಾಜುವಿನ ಬಲಗೈಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post