ಕಲ್ಪ ಮೀಡಿಯಾ ಹೌಸ್ | ಅರಸೀಕೆರೆ/ಶಿವಮೊಗ್ಗ |
ಸುರಿಯುತ್ತಿರುವ ಮಳೆಯಲ್ಲಿ ಟಾರ್ಪಲ್ ಹೊದಿಸದೇ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಅರಸೀಕೆರೆಯಿಂದ ಕುರುವಂಕ ಸೊಸೈಟಿಗೆ ಪಡಿರಿತರ ಅಕ್ಕಿಯನ್ನು ಸಾಗಿಸುತ್ತಿದ್ದು, ಮಳೆ ಸುರಿಯುತ್ತಿದ್ದರೂ ಟಾರ್ಪಲ್ ಹೊದಿಸಿರಲಿಲ್ಲ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಿಂದ ಶಿವಮೊಗ್ಗಕ್ಕೆ ಹಿಂತಿರುತ್ತಿದ್ದ ಪವಿತ್ರಾ ರಾಮಯ್ಯ ಅವರು ಇದನ್ನು ಗಮನಿಸಿ, ತತಕ್ಷಣ ಲಾರಿಯನ್ನು ತಡೆದು ನಿಲ್ಲಿಸಿ, ಪರಿಶೀಲನೆ ನಡೆಸಿದ್ದಾರೆ. ಸುರಿಯುತ್ತಿರುವ ಮಳೆಯಲ್ಲಿ ಟಾರ್ಪಲ್ ಹೊದಿಸದೇ ಅಕ್ಕಿ ಸಾಗಿಸುತ್ತಿದುದಕ್ಕೆ ಲಾರಿ ಚಾಲಕನನ್ನು ಹಾಗೂ ದಲ್ಲಾಳಿಯನ್ನು ತರಾಟೆಗೆ ತೆಗೆದುಕೊಂಡರು. ತೆರೆದ ಅಕ್ಕಿ ಲಾರಿಗೆ ಟಾರ್ಪಲ್ ಹೊದಿಸಲು ಸೂಚಿಸಿದರು.
ತತಕ್ಷಣವೇ ಹಾಸನ ಜಿಲ್ಲಾಧಿಕಾರಿಗಳಿಗೆ ಘಟನೆ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿ, ಸೂಕ್ತ ಕ್ರಮಕೈಗೊಳ್ಳಲು ತಿಳಿಸಿದರು.
ಈ ವೇಳೆ ಮಾತನಾಡಿದ ಪವಿತ್ರಾ ರಾಮಯ್ಯ, ರೈತರು ವರ್ಷವಿಡೀ ಕಷ್ಟ ಪಟ್ಟು ದುಡಿದು ದೇಶದ ಹಸಿವು ನೀಗಿಸುವ ಸಲುವಾಗಿ ತನಗೆ ದೊರೆಯುವ ಲಾಭ ನಷ್ಟದ ಕುರಿತು ಯೋಚಿಸದೆ ಬೆಳೆದ ಬೆಳೆಯನ್ನು ಮಾರಾಟ ಮಾಡುತ್ತಾರೆ. ಆದರೆ ಅದನ್ನು ಸರಿಯಾದ ಕ್ರಮದಲ್ಲಿ ಸಂಸ್ಕರಣೆ ಮಾಡಿ ಸೊಸೈಟಿಗೆ ತಲುಪಿಸುವ ದಲ್ಲಾಳಿಗಳನಿರ್ಲಕ್ಷ್ಯತನ ಸುರಿವ ಮಳೆಗೆ ಹಸಿಯಾಗಿದ್ದು, ಈ ರೀತಿಯ ನಿರ್ಲಕ್ಷ ದ ಘಟನೆಗಳು ದೇಶದ ರೈತರಿಗೆ ಮಾಡುವ ಅವಮಾನ ಹಾಗೂ ಸರ್ಕಾರಕ್ಕೆ ಮಾಡುವ ಮೋಸ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post