ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರೋಪಕಾರಂ ಮತ್ತು ಕಣಾದ ಯೋಗ ಪೌಂಡೇಷನ್ ಹಾಗೂ ಪರಿಸರ ಪ್ರೇಮಿಗಳ ಸಹಕಾರದೊಂದಿಗೆ ಮಳೆ ನಡಿಗೆ ಎಂಬ ಅಪರೂಪದ ಟ್ರಿಪ್‌ನ್ನು ಸಾಗರ ತಾಲೂಕಿನ ಚಿಪ್ಪಳಿ ಹಾಗೂ ಕಾರ್ಗಲ್ ರಸ್ತೆಯ ಭೀಮೇಶ್ವರ ಪಾಲ್ಸ್‌ಗೆ ಹಮ್ಮಿಕೊಳ್ಳಲಾಗಿತ್ತು.
ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಕುಟುಂಬ ಸದಸ್ಯರೆಲ್ಲರೂ ಪ್ರಕೃತಿ ಜೊತೆಗೆ ಮಿಲನಗೊಂಡು ಪ್ರವಾಸಿಗರಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು.
ನಗರದ ಗುಂಡಪ್ಪ ಶೆಡ್ ಮಾಸ್ತಾಂಬಿಕಾ ದೇವಸ್ಥಾನ, ಫ್ರೀಡಂ ಪಾರ್ಕ್‌ನಿಂದ ಸೇರಿಕೊಂಡು ಜಿಲ್ಲೆಯ ಜೀವನದಿಗಳಾದ ತುಂಗಾ , ಭದ್ರಾ, ಶರಾವತಿ, ಕುಮುದ್ವತಿ ಹೆಸರಿನ ಬಸ್‌ಗಳಲ್ಲಿ ಹೊರಡಲಾಗಿತ್ತು. ಸಾಗರ ಸಮೀಪದ ನಿಪ್ಪಳಿ ಪಾಲ್ಸ್, ಚಂಡಿಕಾಂಬಾ ದೇವಸ್ಥಾನ, ಕಾರ್ಗಲ್ ರಸ್ತೆಯ ಭೀಮೇಶ್ವರ ಪಾಲ್ಸ್ ನ ಅತ್ಯಂತ ಕಠಿಣ ದಾರಿಯಲ್ಲಿ 200 ಮಂದಿ ಸದಸ್ಯರು 2. 5 ಕಿ. ಮೀ. ದೂರ ನಡೆದುಕೊಂಡೇ ಪ್ರಕೃತಿಯನ್ನು ಸವಿಯುತ್ತಾ ಹಾಗೂ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸ್ತುತಾ ಪ್ರವಾಸಿಗರಲ್ಲಿ ಪರಿಸರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು.
ಪ್ರವಾಸದಲ್ಲಿ ಹಲವು ಮನೋರಂಜನಾ ಕಾರ್ಯಕ್ರಮ ಹಾಗೂ ಪ್ರತಿಭೆ ಅನಾವರಣಕ್ಕಾಗಿ ರಸಪ್ರಶ್ನೆ, ‘ಥಟ್ ಅಂತ ಹೇಳಿ’ , ಹಾಡು, ನೃತ್ಯ, ಭಜನೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಹುಮಾನವನ್ನು ನೀಡಲಾಯಿತು. ಅಲ್ಲದೇ ಪ್ರವಾಸಿಗರನ್ನು ಕರೆದುಕೊಂಡು ಹೋದ ಬಸ್ ಚಾಲಕರನ್ನು ಗೌರವಿಸಲಾಯಿತು.
ಈ ಸಂದರ್ಭ ಪರಿಸರ ಪ್ರೇಮಿಗಳಾದ ಡಾ. ಧನಂಜಯ ಸರ್ಜಿ, ನಮಿತಾ ಸರ್ಜಿ, ಪರೋಪಕಾರಂ ಶ್ರೀಧರ್, ತ್ಯಾಗರಾಜ್, ಜಗದೀಶ್, ಮಂಜುನಾಥ್, ಡಾ. ಬಾಲಕೃಷ್ಣ ಹೆಗಡೆ, ಅನಿಲ್ ಕುಮಾರ್ ಶೆಟ್ಟರ್, ಬೆಲಗೂರು ಮಂಜನಾಥ್ ಮತ್ತಿರರು ನೇತೃತ್ವ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















