ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸಿಟಿ ಕ್ಲಬ್ ಪಕ್ಕದಲ್ಲಿ ಆ.7ರಂದು ಮೀಡಿಯಾ ಹೌಸ್ ಲೋಕಾರ್ಪಣೆಗೊಳ್ಳಲಿದ್ದು, ಶಾಸಕ ಈಶ್ವರಪ್ಪ MLA Eshwarappa ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ.ಶಿವಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುದ್ದಿಗೋಷ್ಠಿ, ಚರ್ಚೆ, ಸಂವಾದ ಹಾಗೂ ಇತರೆ ಕಾರ್ಯಕ್ರಮ ನಡೆಸಲು ಮೀಡಿಯಾ ಹೌಸ್ ಲಭ್ಯವಿದ್ದು, ಆ.7ರ ಭಾನುವಾರ ಬೆಳಿಗ್ಗೆ ಬೆಳಿಗ್ಗೆ 9 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ, MP Raghavendra ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಎಸ್. ಸುಂದರೇಶ್, ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್. ಆರ್. ಬಸವರಾಜಪ್ಪ, ಜೆಡಿಎಸ್ ಶ್ರೀಕಾಂತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
Also read: ಶಿವಮೊಗ್ಗ ವಿಮಾನ ನಿಲ್ದಾಣ ಬಾಕಿ ಕಾಮಗಾರಿ ಮುಕ್ತಾಯಕ್ಕೆ ಸಂಸದ ಬಿವೈಆರ್ ಮನವಿ
ವೈದ್ಯನಾಥ್ ಮಾತನಾಡಿ, ಸಮಾಜದಲ್ಲಿ ಗೊಂದಲ ಮೂಡಿಸಲು ಮೀಡಿಯಾ ಹೌಸ್ ಆರಂಭಿಸಲಾಗಿದೆ ಎಂದು ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಅಂತಹ ಯಾವ ಉದ್ದೇಶ ಮೀಡಿಯಾ ಹೌಸ್ ಆರಂಭಿಸುವ ಹಿಂದೆ ಇಲ್ಲ. ಸುದ್ದಿಗೋಷ್ಠಿಗಳಿಂದ ಪತ್ರಕರ್ತರಿಗೆ ವಂಚನೆ ಆಗದೆ ಇರಲಿ ಎನ್ನುವ ಕಾರಣಕ್ಕೆ ಮೀಡಿಯಾ ಹೌಸ್ ಆರಂಭಗೊಳ್ಳುತ್ತಿದೆ. ಎಂದರು.
ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಟೆಲೆಕ್ಸ್ ರವಿ ಮಾತನಾಡಿ, ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲದೆ, ಮಾಧ್ಯಮದವರಿಗೂ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಮೀಡಿಯಾ ಹೌಸ್ ಆರಂಭಿಸಲಾಗಿದೆ ಎಂದರು.
ಮೀಡಿಯಾ ಹೌಸ್ ನ ಲೆಕ್ಕ ಪತ್ರ ಸಾರ್ವಜನಿಕವಾಗಿರುತ್ತದೆ. ಔಪಚಾರಿಕವಾಗಿ ಭಾನುವಾರ ಉದ್ಘಾಟನೆಗೊಳ್ಳಲಿದೆ. ಎಲ್ಲಾ ಜನಪ್ರತಿನಿಧಿ, ಸಂಘ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















