ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೋಣನಕುಂಟೆಯಲ್ಲಿ ಈ ಬಾರಿ ಶ್ರೀಮದ್ ರಾಘವೇಂದ್ರ ಗುರುರಾಜರ 25ನೆಯ ವರ್ಷದ ಆರಾಧನಾ ಮಹೋತ್ಸವ ಸಮಾರಂಭಕ್ಕೆ ಸಕಲ ಸಿದ್ದತೆ ನಡೆದಿದೆ.
ಕ್ಷೇತ್ರದ ಹಿನ್ನೆಲೆ
1990 ರ ಅವಧಿಯಲ್ಲಿ ಬೆಂಗಳೂರು ತನ್ನ ವಿಸ್ತೀರ್ಣವನ್ನು ಹಿರಿದು ಮಾಡಿಕೊಂಡ ಸಮಯ ಈ ಅವಧಿಯಲ್ಲಿ ಅನೇಕ ಹೊಸ ಬಡಾವಣೆಗಳು ಬೆಂಗಳೂರಿನಲ್ಲಿ ನಿರ್ಮಾಣಗೊಂಡವು. ಅಂತಹ ಬಡಾವಣೆಗಳಲ್ಲಿ ಕೋಣನ ಕುಂಟೆಯಲ್ಲಿ ಸಹ ಅನೇಕ ಬಡಾವಣೆಗಳ ನಿರ್ಮಾಣವಾಯಿತು.

2007ರ ಫೆ.7ರಂದು ಮಾಘ ಬಹುಳ ಪಂಚಮಿಯಂದು ನಡೆದಾಡುವ ರಾಯರು ಎಂದು ಬಿರುದಾಂಕಿತರಾಗಿದ್ದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಶಮೀಂದ್ರ ತೀರ್ಥರ ಅಮೃತ ಹಸ್ತದಿಂದ ರಾಯರ ಮೂಲ ಮೃತಿಕಾ ಬೃಂದಾವನದ ಪ್ರತಿಷ್ಠಾಪನೆ ಮಾಡಿಸಲಾಯಿತು.
ರಾಯರ ತತ್ವ ಜ್ಞಾನ ಪ್ರಸರಕ್ಕಾಗಿಯೇ ಮೀಸಲಿರುವ ಮಠ ಎಂಬ ಮಾತು ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಅನೇಕ ಮಂದಿ ಪೀಠಾಧಿಪತಿ ಗಳಿಂದ ನಾಡಿನ ಹೆಸರಾಂತ ವಿದ್ವನ್ಮಣಿಗಳಿಂದ ಅನೇಕ ವಿಚಾರಗಳ ಬಗ್ಗೆ ವಿದ್ವತ್ಪೂರ್ಣವಾದ ಪ್ರವಚನಗಳನ್ನು ಆಯೋಜಿಸಿದ ಕೀರ್ತಿ ಕೋಣನಕುಂಟೆ ರಾಯರ ಮಠಕ್ಕೆ ಸಲ್ಲುತ್ತದೆ.

ಬೆಂಗಳೂರಿನ ಕೋಣನಕುಂಟೆ ಯಲ್ಲಿ ಈ ಬಾರಿ ಶ್ರೀ ಮದ್ ರಾಘವೇಂದ್ರ ಗುರುರಾಜರ 25ನೆಯ ವರ್ಷದ ಆರಾಧನಾ ಮಹೋತ್ಸವ ಸಮಾರಂಭ ನಡೆಯಲಿದೆ ತತ್ ಸಂಬಂಧವಾಗಿ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಜ್ಞಾನ ಯಜ್ಞ ವನ್ನೂ ಹಮ್ಮಿಕೊಳಲಾಗಿದೆ ಎಂದು ಟ್ರಸ್ಟ್’ನ ಅಧ್ಯಕ್ಷರಾದ ಡಾ. ಅನಂತ ಪದ್ಮನಾಭ ರಾವ್ ಅವರು ತಿಳಿಸಿದ್ದಾರೆ.
ಆಗಸ್ಟ್ 11ರಂದು ಗುರುವಾರದಂದು ಸಂಜೆ 6.30ಕ್ಕೆ ಬೆಂಗಳೂರಿನ ಗಿರಿನಗರದ ಭಾಗವತ ಆಶ್ರಮದ ಸಂಸ್ಥಾಪಕರು, ಭಂಡಾರಿಕೇರಿ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ 1008 ಶ್ರೀ ವಿದ್ಯೇಶ ತೀರ್ಥ ಶ್ರೀಪಾದಂಗಳವರು ಕೋಣನ ಕುಂಟೆಯ ಕ್ಷೇತ್ರ ಸ್ವಾಮಿಯಾದ ಶ್ರೀ ಶ್ರೀನಿಧಿ ಶ್ರೀನಿವಾಸ ದೇವರ ಶೇಷ ವಸ್ತçವನ್ನ ಉತ್ಸವರಾಯರಿಗೆ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಟ್ರಸ್ಟ್’ನ ಕಾರ್ಯದರ್ಶಿ ಗಳಾದ ಪಿ. ಎನ್. ಫಣಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಡಿನ ಹೆಸರಾಂತ ಯುವ ಕಲಾವಿದರು ನಡೆಸಿ ಕೊಡಲಿದ್ದಾರೆ. ಆಗಸ್ಟ್ 12ರಂದು ಕುಮಾರಿ ಎಸ್.ಕೆ. ಹೇಮಾ ಅವರ ನೃತ್ಯ ಸೇವೆ, ಆ.13ರಂದು ಪ್ರವೀಣ್ ಪ್ರದೀಪ್ ಸಹೋದರರ ಸಂಗೀತ ಸೇವೆ ಹಾಗೂ ಆ.14ರಂದು ಶ್ರೀವತ್ಸ ಅವರು ವೀಣಾ ವಾದನ ಸೇವೆಯನ್ನು ಸಲ್ಲಿಸುವರು ಎಂದು ಖಜಾಂಚಿ ಗಳಾದ ವಿ.ಆರ್. ಹರಿ ಅವರು ತಿಳಿಸಿದ್ದಾರೆ.
ಈ ಎಲ್ಲಾ ಕಾರ್ಯಕ್ರ ಗಳಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತರು ಭಾಗವಹಿಸಿ ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀಮಠ ವಿನಂತಿಸಿದೆ.










Discussion about this post