ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತಾಲೂಕು ಆಸ್ಪತ್ರೆಯಲ್ಲಿ ನಿರ್ಮಿಸಲಾದ 25 ಹಾಸಿಗೆಯ ತೀವ್ರ ನಿಗಾ ಘಕವನ್ನು, ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಇಡೀ ಆಸ್ಪತ್ರೆ ಕಟ್ಟಡಕ್ಕೆ ಪೂರ್ಣಗೊಂಡ ಮೇಲ್ಛಾವಣಿ ಅಳವಡಿಕೆಯ ಕಾಮಗಾರಿಯ ಉದ್ಘಾಟನೆ ನಡೆಸಿದರು.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶಬಾನಾ ಬೇಗಂ, ಹಿರಿಯ ವೈದ್ಯರಾದ ನಾರಾಯಣಸ್ವಾಮಿ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತ್ರಿಚಕ್ರ ವಾಹನ ವಿತರಣೆ
ಇನ್ನು, ಶಾಸಕರ ಕ್ಷೇತ್ರಭಿವೃದ್ಧಿ ಅನುದಾನದಲ್ಲಿ ಮಂಜೂರಾದ ತ್ರಿಚಕ್ರ ವಾಹನಗಳನ್ನು ಗೃಹ ಸಚಿವರು ಇಂದು ಫಲಾನುಭವಿಗಳಿಗೆ ವಿತರಿಸಿ, ಶುಭ ಹಾರೈಸಿದರು.
ಸುಮಾರು 16 ಲಕ್ಷ ಮೌಲ್ಯದ, ತ್ರಿಚಕ್ರ ವಾಹನಗಳನ್ನು 16 ಮಂದಿ ಅಂಗವಿಕಲ ಫಲಾನುಭವಿಗಳು ಸ್ವೀಕರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post