ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಿಕ್ಕಬಳ್ಳಾಪುರ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಯಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬೈಕ್‌ಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳು ಚಿಕ್ಕಬಳ್ಳಾಪುರ ಮೂಲದ ಪವನ್ ಹಾಗೂ ಆಂಧ್ರಪ್ರದೇಶದ ಮೂಲದ ಸತೀಶ್ ಎಂದು ತಿಳಿದು ಬಂದಿದೆ.
ಇನ್ನೂ ಆರೋಪಿಗಳು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿದ್ದರು ಎಂದು ತಿಳಿದು ಬಂದಿದೆ.
Also read: ಭದ್ರಾವತಿ: ಹಳೆ ನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಆರಾಧನಾ ಮಹೋತ್ಸವ
ಆಪ್ತ ಸ್ನೇಹಿತರಾಗಿದ್ದ ಇಬ್ಬರು ಶೋಕಿಗೋಸ್ಕರ ಬೈಕ್ ಗಳನ್ನು ಕದಿಯೋ ಕೆಲಸಕ್ಕೆ ಕೈಹಾಕಿದ್ದರು. ಕರ್ನಾಟಕದಲ್ಲಿ ಬೈಕ್’ಗಳನ್ನ ಕದ್ದು ಆಂಧ್ರ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಮಾರಿದರೆ ಯಾರಿಗೂ ತಿಳಿಯುವುದಿಲ್ಲ. ಬಂದ ಹಣದಿಂದ ಬೆಂಗಳೂರಲ್ಲಿ ಶೋಕಿ ಮಾಡಬಹುದು ಎಂದು ಬೈಕ್ ಒಂದನ್ನು ಕದ್ದುಕೊಂಡು ಆಂಧ್ರಗೆ ಹೋಗುವಾಗ ಪೊಲೀಸರಿಗೆ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ 12 ರಾಯಲ್ ಎನ್‌ಫೀಲ್ಡ್ ಬೈಕ್, 2 ಡ್ಯೂಕ್, ಒಂದು ಪಲ್ಸಾರ್ ಎನ್ ಎಸ್, ಒಂದು ಡ್ಯೂಕ್ ಬೈಕ್‌ಗಳನ್ನು ಬಾಗೇಪಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















