ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅತ್ಯಂತ ಕಠಿಣ ಶಿಕ್ಷೆಯನ್ನು ಅನುಭವಿಸಿದವರು ಸಾವರ್ಕರ್ ಅಂತಹ ಮಹಾ ಪುರುಷನ ಬಗ್ಗೆ ಹೀನಾಯವಾಗಿ ಮಾತನಾಡುವ ಸಿದ್ಧರಾಮಯ್ಯ ರಾಷ್ಟ್ರದ್ರೋಹಿ. ರಾಷ್ಟ್ರದ್ರೋಹಿಗಳ ಕೈಲಿ ಕಾಂಗ್ರೆಸ್ ಪಕ್ಷ ಸಿಲುಕಿಕೊಂಡಿದೆ ಎಂದು ಶಾಸಕ ಈಶ್ವರಪ್ಪ MLA Eshwarappa ಆಕ್ರೋಶ ವ್ಯಕ್ತಪಡಿಸಿದರು.
ಅನ್ಯಕೋಮಿನ ವ್ಯಕ್ತಿಯಿಂದ ಹಲ್ಲೆಗೊಳಗಾಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀಲ್ ಅವರ ಆರೋಗ್ಯ ವಿಚಾರಣೆ ನಡೆಸಿ ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು.
ಹಲ್ಲೆಗೊಳಗಾಗಿ ಗಾಯಾಳುವಾರುವ ಸುನಿಲ್‌ನ ಮೂಗಿನ ಮೂಳೆ ಮುರಿತವಾಗಿದೆ. ಈಗಾಗಲೇ ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಶಿವಮೊಗ್ಗ ಅಥವಾ ಬೆಂಗಳೂರಿಗೆ ಕಳುಹಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ಇಡೀ ದೇಶ ಹಿಂದೂಸ್ಥಾನದ ಜಾಗ. ಒಂದಿಂಚೂ ಕೂಡ ಮುಸಲ್ಮಾನರ ಜಾಗವಿಲ್ಲ. ಮುಸಲ್ಮಾರ ಜಾಗದಲ್ಲಿ ಏಕೆ ಸಾವರ್ಕರ್ ಭಾವಚಿತ್ರ ಹಾಕಿದ್ದರು ಎಂದು ಹೇಳಿರುವುದು ರಾಷ್ಟ್ರದ್ರೋಹದ ಹೇಳಿಕೆ. ಇದನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ಖಂಡಿಸಬೇಕು. ಹಾಗೂ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ಹಿಂದೂ ಸಮಾಜ ದುರ್ಬಲವಲ್ಲ, ಶಕ್ತಿಶಾಲಿಯಾಗಿದೆ. ಹಿಂದೂಗಳು ಶಾಂತಿ ಪ್ರಿಯರು, ಅವರು ಸಿಡಿದೆದ್ದು ನಿಂತರೆ ಈ ಮುಸಲ್ಮಾನ ಗೂಂಡಾಗಳು ಉಳಿಯುವ ಪ್ರಶ್ನೆಯೇ ಇಲ್ಲ. ಈ ರೀತಿ ಹಿಂದೂ ಯುವಕರ ಕೊಲೆ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ನಾವು ಅಧಿಕಾರದಲ್ಲಿದ್ದೂ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡಲು ಆಗುತ್ತಿಲ್ಲವಲ್ಲ ಎಂದು ಶಾಸಕ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿದ್ದಾಗ 32 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾದ ಸಂದರ್ಭದಲ್ಲಿ ಅವರ ಬಂಧನವಾಗುವುದು ದೂರದ ಮಾತಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹರ್ಷ, ಪ್ರವೀಣ್ ಹತ್ಯೆಗೈದವರನ್ನು 24 ಗಂಟೆಗಳಲ್ಲಿ ಬಂಧಿಸಲಾಗಿದೆ. ಹಾಗೂ ಪ್ರೇಮ್ ಸಿಂಗ್‌ಗೆ ಚಾಕು ಇರಿದ ಕಿಡಿಗೇಡಿಗಳನ್ನು ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯೆಯ ಪತಿ ಎಸ್‌ಡಿಪಿಐ ಕಾರ್ಯಕರ್ತ ಆತನೇ ಸಾವರ್ಕರ್ ಭಾವಚಿತ್ರ ಹರಿದು ಹಾಕಲು ಮುಂದಾಗಿದ್ದು ಇಷ್ಟೆಲ್ಲಾ ಘಟನೆಗೆ ಕಾರಣವಾಗಿದೆ. ಆದರೆ ಎಸ್‌ಡಿಪಿಐಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ ಎಂದು ಸಿದ್ಧರಾಮಯ್ಯ ಹೇಳಿಕೆ ನೀಡುತ್ತಿದ್ದಾರೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮುಸಲ್ಮಾನ ಗೂಂಡಾಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ವಹಿಸುತ್ತಿದೆ. ಅದಕ್ಕೆ ನಿನ್ನೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕಿಡಿಗೇಡಿ ಮೇಲೆ ಫೈರಿಂಗ್ ಆಗಿರುವುದು ಒಂದು ಸಣ್ಣ ಉದಾಹರಣೆ. ಮುಂದೆ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಕಾದು ನೋಡಿ ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















