ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉದ್ಯಾನ ನಗರಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ Krishna Janmashtami ಸಂಭ್ರಮ ಮನೆ ಮಾಡಿದ್ದು, ವಿಶೇಷ ಉಡುಗೆ ತೊಡುಗೆಯಲ್ಲಿ ಮಕ್ಕಳು ಕಂಗೊಳಿಸುತ್ತಿದ್ದಾರೆ.
ಹಿಂದೂಗಳ ಪವಿತ್ರ ಹಬ್ಬವಾದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ಮತ್ತು ರಾಧೆಯ ದೇವಾಲಯಗಳಲ್ಲಿ ನಗರದ ಇಸ್ಕಾನ್ ದೇವಾಲಯದಲ್ಲಿ ವಿಶೇಷವಾದ ಪೂಜೆ ನಡೆದಿದೆ.

ಸುಧೀಂದ್ರ ದೇಸಾಯಿ ಅವರ ಸಹಕಾರದೊಂದಿಗೆ ಕಾರ್ಯಕ್ರಮವು ವಿದುಷಿ- ನಾಗಶ್ರೀ ಸಾತ್ವಿಕ್ ನಿರ್ದೇಶನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ವೇಷ ಧರಿಸಿ ಸಣ್ಣ ಬಾಲಕ ನಿಂತಿದ್ದರೆ – ಅವನ ಸುತ್ತ ಪುಟ್ಟಪುಟ್ಟ ಮಕ್ಕಳು ಭರತನಾಟ್ಯ ಮಾಡುವ ಮೂಲಕ ಗಮನ ಸೆಳೆದರು.

Also read: ಸರಕಾರಿ ಶಾಲೆ ಮಕ್ಕಳಿಗೆ ಉಚಿತಾ ಟೈಪಾಯಿಡ್ ಲಸಿಕೆ ಹಾಗೂ ಶ್ರಮದಾನ ಕಾರ್ಯಕ್ರಮ
ಇನ್ನು, ನಗರದ ಬಹಳಷ್ಟು ಬಡಾವಣೆಗಳಲ್ಲಿ ಕೃಷ್ಣ ಹಾಗೂ ರಾಧೆಯ ವೇಷ ತೊಟ್ಟ ಮಕ್ಕಳು ಗಮನ ಸೆಳೆಯುತ್ತಿದ್ದು, ವಿವಿಧ ಸ್ಪರ್ಧೆಗಳು ಕೂಡ ನಡೆಯುತ್ತಿವೆ.
ನಗರದ ಬನಶಂಕರಿ 3ನೆಯ ಹಂತದ ಮಹಿಮಾ ಅಜಯ್ ಬಾಯರಿ ಹಾಗೂ ಅಜಯ್ ಗಣಪಯ್ಯ ಬಾಯರಿ ದಂಪತಿ ಸುಪುತ್ರ ಅಭಿರಾಮ್(2.5 ವರ್ಷ) ಬಾಲ ಕೃಷ್ಣನ ವೇಷ ಧರಿಸಿ ಮಂದಹಾಸ ಬೀರಿದ್ದು ಹೀಗೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post