ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಸವೇಶ್ವರ ಸಂಘದ ಚುನಾವಣೆಗೂ ಮುನ್ನ ನೀಡಿದ ಆಶ್ವಾಸಯಂತೆ ವೀರಶೈವ-ಲಿಂಗಾಯತ ಸಮುದಾಯದ ಅಭ್ಯುದಯ ಹಾಗೂ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತೇವೆ ಎಂದು ನೂತನ ನಿರ್ದೇಶಕ ಎಸ್. ಎಸ್. ಜ್ಯೋತಿಪ್ರಕಾಶ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಪ್ರಸಕ್ತ ಸಾಲಿನ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ನಮ್ಮ ತಂಡದ 8 ಮಂದಿ ಗೆಲುವು ಸಾಧಿಸಿದ್ದು, ಎಸ್.ಪಿ. ದಿನೇಶ್ ನೇತೃತ್ವದ ಬಸವಸೇನೆಯ 7 ಮಂದಿ ಜಯ ಗಳೀಸಿದ್ದಾರೆ. ಅವರೆಲ್ಲರಿಗೂ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಿಂದಿನ ಅವಧಿಯಲ್ಲಿ ಕಾರಣಾಂತರಗಳಿಂದ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಲಾಗಲಿಲ್ಲ. ಆದರೆ ಇನ್ನು ಮುಂದೆ ಬೈಲಾ ಪ್ರಕಾರ ನಡೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ವೀರಶೈವ ಧರ್ಮದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ವೀರಶೈವ ಸಮಾಜದಲ್ಲಿ ಪೌರೋಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ರಾಮಣಶ್ರೇಷ್ಟಿ ಪಾರ್ಕ್‌ನಲ್ಲಿರುವ ವೀರಶೈವ ಗದ್ದುಗೆಯಲ್ಲಿ ಸಂಸ್ಕೃತ ಪಾಠ ಶಾಲೆ ಆರಂಬಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಸಂಘಟನಾ ಶಕ್ತಿಯಿಂದ ಹೆಚ್ಚಿನ ಜನರ ನೋಂದಾಣಿ ಮಾಡಿಕೊಳ್ಳಲಾಗುತ್ತಿದೆ. ಹಾಗೂ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಕಾರ್ಯದ ಬಗ್ಗೆ ಹೆಚ್ಚಿನ ಗಮನ ಕೊಡಲಾಗುವುದು ಎಂದರು.
Also read: ಶಿವಮೊಗ್ಗ: ಮಹಿಳೆಯರೇ ನಿರ್ಮಿಸಿದ ಕೆರೆ, ಊರಿಗಾಯಿತು ಆಸರೆ
ಎರಡು ಬಣಗಳು ಚುನಾವಣೆಯಲ್ಲಿ ಸಮಾನಾಂತರ ಕಾಯ್ದುಕೊಂಡಿರುವುದರಿಂದ ಎಸ್.ಪಿ. ದಿನೇಶ್ ತಂಡದಲ್ಲಿರುವ ಜೆ.ಆರ್. ರತ್ನ ಒಂದು ವರ್ಷ ಅವಧಿಗೆ ನಿರ್ದೇಶಕರಾಗಿರುತ್ತಾರೆ. ನಂತರದ ಒಂದುವರೆ ವರ್ಷದ ಅವಧಿಗೆ ನಮ್ಮ ತಂಡದ ನಾಗರಾಜ್ ನಿರ್ದೇಶಕರಾಗಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನೂತನ ನಿರ್ದೇಶಕರಾದ ಎನ್.ಜೆ. ರಾಜಶೇಖರ್, ಟಿ.ಬಿ. ಜಗದೀಶ್, ಸಂತೋಷ್ ಬಳ್ಳೇಕೆರೆ, ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post