ಕಲ್ಪ ಮೀಡಿಯಾ ಹೌಸ್
ದೇಶದಾದ್ಯಂತ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುವವರಿಗೆ ಭರ್ಜರಿ ಆಫರ್ ಪ್ರಕಟವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಒಂದು ಉಡುಗೊರೆ ಎಂದೇ ಹೇಳಲಾಗುತ್ತಿದೆ.
ಹೌದು, ಸೆ.16ರಂದು ದೇಶದ ಯಾವುದೇ ಮಲ್ಟಿಪ್ಲೆಕ್ಸ್‌ನಲ್ಲಿ ಕೇವಲ 75ರೂ.ಗೆ ಸಿನಿಮಾ ನೋಡುವ ಆಫರ್ ಘೋಷಿಸಲಾಗಿದೆ.

Also read: ಅರಣ್ಯ ಹುತಾತ್ಮರ ಪರಿಹಾರ ಮೊತ್ತ 50 ಲಕ್ಷ ರೂ.ಗಳಿಗೆ ಏರಿಕೆ: ಸಿಎಂ ಬೊಮ್ಮಾಯಿ ಘೋಷಣೆ
ಈ ಕುರಿತಂತೆ ಎಮ್‌ಎಐ ಅಧಿಕೃತ ಘೋಷಣೆ ಹೊರಡಿಸಿದ್ದು, PVR, INOX, CINEPOLIS, CARNIVAL, MIRAJ, CITYPRIDE, ASIAN, MUKTA A2, MOVIE TIME, WAVE, M2K, DELITE ಸೇರಿದಂತೆ ಒಟ್ಟು ಒಂದು ಸಾವಿರ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರದಲ್ಲಿ ಈ ಆಫರ್ ದೊರೆಯಲಿದೆ. ಈ ವಿಶೇಷ ಆಫರ್ ಹಾಗೂ ಪ್ರದರ್ಶನಗೊಳ್ಳುವ ಸಿನಿಮಾಗಳನ್ನು ಅತೀ ಶೀಘ್ರದಲ್ಲಿಯೇ ಘೋಷಿಸುವುದಾಗಿ ಪ್ರಕಟಣೆ ತಿಳಿಸಿದೆ.










Discussion about this post