ಕಲ್ಪ ಮೀಡಿಯಾ ಹೌಸ್
ದೇಶದಾದ್ಯಂತ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುವವರಿಗೆ ಭರ್ಜರಿ ಆಫರ್ ಪ್ರಕಟವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಒಂದು ಉಡುಗೊರೆ ಎಂದೇ ಹೇಳಲಾಗುತ್ತಿದೆ.
ಹೌದು, ಸೆ.16ರಂದು ದೇಶದ ಯಾವುದೇ ಮಲ್ಟಿಪ್ಲೆಕ್ಸ್‌ನಲ್ಲಿ ಕೇವಲ 75ರೂ.ಗೆ ಸಿನಿಮಾ ನೋಡುವ ಆಫರ್ ಘೋಷಿಸಲಾಗಿದೆ.
ಸೆ.16ರಂದು ರಾಷ್ಟ್ರೀಯ ಸಿನಿಮಾ ದಿನ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಕೇವಲ 75ರೂ.ಗಳಿಗೆ ಸಿನಿಮಾ ವೀಕ್ಷಿಸುವ ಆಫರ್ ನೀಡಲಾಗಿದೆ.
Also read: ಅರಣ್ಯ ಹುತಾತ್ಮರ ಪರಿಹಾರ ಮೊತ್ತ 50 ಲಕ್ಷ ರೂ.ಗಳಿಗೆ ಏರಿಕೆ: ಸಿಎಂ ಬೊಮ್ಮಾಯಿ ಘೋಷಣೆ
ಈ ಕುರಿತಂತೆ ಎಮ್‌ಎಐ ಅಧಿಕೃತ ಘೋಷಣೆ ಹೊರಡಿಸಿದ್ದು, PVR, INOX, CINEPOLIS, CARNIVAL, MIRAJ, CITYPRIDE, ASIAN, MUKTA A2, MOVIE TIME, WAVE, M2K, DELITE ಸೇರಿದಂತೆ ಒಟ್ಟು ಒಂದು ಸಾವಿರ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರದಲ್ಲಿ ಈ ಆಫರ್ ದೊರೆಯಲಿದೆ. ಈ ವಿಶೇಷ ಆಫರ್ ಹಾಗೂ ಪ್ರದರ್ಶನಗೊಳ್ಳುವ ಸಿನಿಮಾಗಳನ್ನು ಅತೀ ಶೀಘ್ರದಲ್ಲಿಯೇ ಘೋಷಿಸುವುದಾಗಿ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post