ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಗ್ನಿವೀರ್ #Agniveer ಪ್ಯಾರಾ ಮಿಲಿಟರಿ ಹಾಗೂ ಪೊಲೀಸ್ ಇಲಾಖೆ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗಾಗಿ ಸಿಗಂಧೂರಿನಲ್ಲಿ ಉಚಿತ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಅಗ್ನಿವೀರ್, ಪ್ಯಾರಾ ಮಿಲಿಟರಿ ಮತ್ತು ಪೋಲಿಸ್ #Police ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ಹಾಗೂ ಅರ್ಜಿ ಸಲ್ಲಿಸ ಬಯಸುವವರಿಗೆ ಶ್ರೀ ಸಿಗಂಧೂರು ಚೌಡೇಶ್ವರಿ ಎಜುಕೇಶನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮೇ 13ರಿಂದ 28ರವರೆಗೆ ಉಚಿತ ತರಬೇತಿ ಶಿಬಿರ ನಡೆಯಲಿದೆ.
Also Read>> ಭದ್ರಾವತಿ | ಆರು ಪೌರ ಕಾರ್ಮಿಕರಿಗೆ ಮಧು ಲ್ಯಾಬ್ ವತಿಯಿಂದ ಸನ್ಮಾನ
ಆನಂದಪುರಂನ ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್’ನ ನುರಿತ ತರಬೇತುದಾರರಾದ ಯೋಧರಿಂದ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಉಚಿತ ಊಟ ವಸತಿ ಹಾಗೂ ದೈಹಿಕ ಮತ್ತು ಲಿಖಿತ ತರಬೇತಿಗಳು ಮತ್ತು ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿದೆ.
ಈ ತರಬೇತಿಗೆ ಹತ್ತನೇ ತರಗತಿ ಉತ್ತೀರ್ಣ ಹೊಂದಿದ 25 ವರ್ಷ ವಯೋಮಿತಿಯೊಳಗಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸೇರಿಕೊಳ್ಳಬಹುದು. ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ರಾಜ್ಯದ ಎಲ್ಲಾ ಆಸಕ್ತ ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ದೂ. ಸಂ. 7019776749/ 7406212345/ 9448954052/ 9740980992 ಗಳನ್ನು, https//malnadsoldiercoching.rf.gd ನ್ನು ಸಂಪರ್ಕಿಸಿ ತಮ್ಮ ಹೆಸರು ಮತ್ತು ಸ್ವವಿವರ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.
ಮಲ್ನಾಡ್ ಸೋರ್ಲ್ಡ ಕೋಚಿಂಗ್ ಸೆಂಟರ್ ಎಂದು ಇನ್ಸ್ಟಾಗ್ರಾಂ, ಫೇಸ್ ಬುಕ್ ಹಾಗೂ ಯೂಟ್ಯೂಬ್’ಗಳಲ್ಲಿ ಕೂಡ ಹೆಚ್ಚಿನ ಮಾಹಿತಿಗಳನ್ನು ನೋಡಬಹುದು.
ತರಬೇತಿಗೆ ಹಾಜರಾಗುವವರು ಮೇ 13 ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಸಿಗಂಧೂರು ಶ್ರೀ ಚೌಡಮ್ಮ ದೇವಸ್ಥಾನದ ಆವರಣದಲ್ಲಿ ಕನಿಷ್ಟ ಒಬ್ಬರು ಪೋಷಕರೊಂದಿಗೆ ಹಾಜರಿರುವುದು.
ನಂತರದ ದಿನಗಳಲ್ಲಿ ಬರುವವರಿಗೆ ಅವಕಾಶವಿಲ್ಲ. ದೂರವಾಣಿ ಮೂಲಕ ಹೆಸರು ನೊಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















