ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಶ್ವ ಕಾರ್ಮಿಕರ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದ ನಗರದ ಮಧು ಲ್ಯಾಬ್ ವತಿಯಿಂದ ಆರು ಪೌರ ಕಾರ್ಮಿಕರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಮಧು ಲ್ಯಾಬ್ ಮಾಲೀಕರು ಹಾಗೂ ಸಮಾಜ ಸೇವಕರಾದ ಎಸ್.ಆರ್. ಜಗದೀಶ್ ಅವರು ಪ್ರತಿ ವರ್ಷವೂ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ವಿನೂತನವಾಗಿ ಆಚರಿಸುತ್ತಾರೆ.
Also Read>> Impressive concert by Smt. Surabhi Sheshadri
ಅದೇ ರೀತಿಯಲ್ಲಿ ಈ ವರ್ಷವೂ ಸಹ ಪೌರ ಕಾರ್ಮಿಕರನ್ನು ಗೌರವಿಸುವ ಮೂಲಕ ಅತ್ಯಂತ ವಿನೂತನವಾಗಿ ಆಚರಿಸಿದರು.
ರಂಗಪ್ಪ ಸರ್ಕಲ್ ಹಾಗೂ ಕೇಶವಪುರ ಬಡಾವಣೆಯಲ್ಲಿ ಕಾರ್ಯ ನಿರ್ವಹಿಸುವ ಆರು ಜನ ಪೌರ ಕಾರ್ಮಿಕರಾದ ಎಸ್. ಶರವಣ, ಲಿಂಗಮ್ಮ, ತಿರುಮಲ, ಲಕ್ಷ್ಮಮ್ಮ, ಲತೇಶ್, ತುಳಸಿ ಅವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಅವರು, ಜಗತ್ತು ಸುಖ ನಿದ್ದೆಯಲ್ಲಿದ್ದಾಗ ತಾವು ಎದ್ದು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಪೌರ ಕಾರ್ಮಿಕರ ಕಾರ್ಯ ಅಭಿನಂದನೀಯ ಎಂದರು.
ಸಮಾಜದ ಸ್ವಚ್ಛತೆಯನ್ನು, ಆರೋಗ್ಯವನ್ನು ಕಾಪಾಡುವ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಉತ್ತಮ ಗುಣಮಟ್ಟದ ಜೀವನ ನಡೆಸಬೇಕು. ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕು. ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕರೆ ನೀಡಿದರು.
Also Read>> ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ | ಮಮತಾ ಬ್ಯಾನರ್ಜಿ ಹೊಸ ವರಸೆ
ಸಮಾಜ ಕೂಡ ಎಲ್ಲಾ ಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಅವರ ಕಾನೂನುಬದ್ಧ ಬೇಡಿಕೆಗೆ ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಲೀಲಾವತಿ ಜಗದೀಶ್, ಲ್ಯಾಬ್’ನಲ್ಲಿ ಕೆಲಸ ಮಾಡುವ ಕುಮಾರಿ ಸಿಂಧೂ, ನಯನಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಕಾರ್ಮಿಕರಿಗೆ ಹಾಗೂ ನಾಗರಿಕರಿಗೆ ಸಿಹಿ ವಿತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















