ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಭಾರತೀಯ ಜನತಾ ಪಕ್ಷದ ಮೂಲ ಜನ ಸಂಘದ ಮೊದಲ ಅಧ್ಯಕ್ಷರಾಗಿ ಸೇವೆ ನಿರ್ವಹಿಸಿ ಏಕಾತ್ಮಕ ಮಾನವತವಾದವನ್ನು ಪ್ರತಿಪಾದಿಸಿದವರು ಪಂ.ದೀನ್ ದಯಾಳ್ ಉಪಾಧ್ಯಾಯ ಎಂದು ಸಂಸದ ಬಿ. ವೈ ರಾಘವೇಂದ್ರ ತಿಳಿಸಿದರು.
ಪ್ರಧಾನಿ ಮಂತ್ರಿ ನರೇಂದ್ರ ಮೋದಿರವರ “ಮನ್ ಕೀ ಮನ್ ಕೀ ಬಾತ್ ” ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಪುಷ್ಪ ನಮನವನ್ನು ಸಲ್ಲಿಸಿ ಅವರು ಮಾತನಾಡಿದರು.

ಪಂಡಿತ್ ದೀನ ದಯಾಳ್ ಉಪಾಧ್ಯಯ ಅವರ ಜನ್ಮದಿನದ ಅಂಗವಾಗಿ ಹಿರಿಯ ಸ್ವಯಂ ಸೇವಕರಾದ ಎಸ್ ಬಿ ಮಠದ್ ಅವರು ವಿಶೇಷ ಉಪನ್ಯಾಸ ನೀಡಿದರು.

ಪ್ರಧಾನಿ ನರೇಂದ್ರ ಅವರ ಜನುಮದಿನದ ಅಂಗವಾಗಿ ಶಿಕಾರಿಪುರ ನಗರದ ಕುಂಬಾರಗುಂಡಿ ಮತ್ತು ವಿನಾಯಕ ನಗರ ವಾರ್ಡ್ ನಲ್ಲಿ ಸಸಿಯನ್ನು ನೆಡುವ ಮೂಲಕ ಸೇವಾ ಪಾಕ್ಷಿಕವನ್ನು ವಿಶೇಷವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರು ಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಬಿಜೆಪಿ ನಗರ ಅಧ್ಯಕ್ಷ ಮೋಹನ್, ನಗರ ಪ್ರಧಾನ ಕಾರ್ಯದರ್ಶಿ ಗುರುರಾಜ್, ಪುರಸಭೆ ಅಧ್ಯಕ್ಷ ರೇಖಾ ಭಾಯಿ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ಬೆಣ್ಣೆ ಪ್ರವೀಣ್, ಸುಧೀರ್, ಪುರಸಭೆ ಸದಸ್ಯರು, ವಿವಿಧ ಮೋರ್ಚಾಗಳ ಕಾರ್ಯಕರ್ತರು ಉಪಸ್ಥಿತರಿದ್ದರು.











Discussion about this post