ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎನ್‌ಎಸ್‌ಎಸ್ ಸಂಸ್ಥಾಪನಾ ದಿನದ ಅಂಗವಾಗಿ ಕೃಷಾ ಫೌಂಡೇಷನ್ ಎನ್‌ಎಸ್‌ಎಸ್ ಸ್ವಯಂಸೇವಕ/ಸೇವಕಿಯರಿಗೆ ಕೊಡಮಾಡುವ ರಾಷ್ಟ್ರೀಯ ಎನ್‌ಎಸ್‌ಎಸ್ ಯುವ ಯೋಧ ಪ್ರಶಸ್ತಿಗೆ ಶಿವಮೊಗ್ಗದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಬಿ.ಎ. ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಎನ್. ನಾಗವೇಣಿ ಮತ್ತು ಬಿ. ಸತ್ಯವತಿ ಭಾಜನರಾಗಿದ್ದಾರೆ.
ಈ ಸ್ವಯಂಸೇವಕಿಯರು ಸಾಮಾಜಿಕ ಸೇವಾ ಸಂಸ್ಥೆಗಳಾದ ಪರೋಪಕಾರಂ, ಚೆನ್ನುಡಿ ಬಳಗ, ಪರ್ಯಾವರಣ ಸಂರಕ್ಷಣಾ ಟ್ರಸ್ಟ್, ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ, ಓನ್ಲಿ ಒನ್ ಅರ್ಥ್ ಮತ್ತಿತರ ಸಂಘಟನೆಗಳ ಜತೆ ಸಕ್ರಿಯವಾಗಿ ಭಾಗವಹಿಸಿ ಅನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಎನ್‌ಎಸ್‌ಎಸ್ ಸಂಸ್ಥಾಪನಾ ದಿನವಾದ ಸೆಪ್ಟೆಂಬರ್ 24ರಂದು ವರ್ಚುವಲ್ ಪ್ರೊಗ್ರಾಮ್ ಮೂಲಕ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.
ಪ್ರಾಚಾರ್ಯರಾದ ಡಾ.ಎಚ್.ಎಸ್. ನಾಗಭೂಷಣ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಬಾಲಕೃಷ್ಣ ಹೆಗಡೆ, ದೀಪಿಕಾ, ಎನ್.ಇ.ಎಸ್. ಆಡಳಿತ ಮಂಡಳಿಯವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ.
Also read: ಅಮೃತ ಕಾಲಕ್ಕೆ ಭಾರತವು ಸಮೃದ್ಧ ಮತ್ತು ಸದೃಢ ರಾಷ್ಟ್ರವಾಗಲಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post