ಕಲ್ಪ ಮೀಡಿಯಾ ಹೌಸ್ | ಅರಸೀಕೆರೆ |
ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಘಾತವೊಂದರಲ್ಲಿ 9 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅರಸೀಕೆರೆ ಬಳಿಯ ಬಾಣಾವರದಲ್ಲಿ ಹಾಲಿನ ಟ್ಯಾಂಕರ್, ಬಸ್ ನಡುವೆ ಟಿ ಟಿ ವಚನ ಸಿಲುಕಿ ಅಪಘಾತ ಸಂಭವಿಸಿದೆ. ಟಿ ಟಿಯಲ್ಲಿದ್ದ 10 ಮಂದಿಯಲ್ಲಿ ನಾಲ್ವರು ಮಕ್ಕಳೂ ಸೇರಿ ಒಂಬತ್ತು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಸರ್ಕಾರಿ ಬಸ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಗುತ್ತಿತ್ತು. ಹಾಲಿನ ಟ್ಯಾಂಕರ್ ಶಿವಮೊಗ್ಗದಿಂದ ಚನ್ನರಾಯಪಟ್ಟಣಕ್ಕೆ ಹೋಗುತ್ತಿತ್ತು. ಧರ್ಮಸ್ಥಳ, ಸುಬ್ರಮಣ್ಯ ಯಾತ್ರೆ ಮುಗಿಸಿ ಪ್ರಯಾಣಿಕರು ಟಿ ಟಿ ಯಲ್ಲಿ ಬೆಂಗಳೂರಿಗೆ ಹಿಂತಿರುಗುತ್ತಿದ್ದರು.
ಸ್ಥಳಕ್ಕೆ ಬಾಣಾವರ ಪೊಲೀಸರು ಭೇಟಿ ನೀಡಿದ್ದಾರೆ.









Discussion about this post