Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಟ್ರೇಡ್ ಲೈಸೆನ್ಸ್ ಅನ್ನು 5 ವರ್ಷಕ್ಕೆ ತೆಗೆದುಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ D S Arun ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಡಿ.ಎಸ್. ಅರುಣ್ ಪಶ್ನೋತ್ತರ ವೇಳೆಯಲ್ಲಿ ಪ್ರಶ್ನೆ ಕೇಳಿದ್ದರು. ಟ್ರೇಡ್ ಲೈಸನ್ಸ್ ಅವಶ್ಯಕತೆ ಮತ್ತು ಸರ್ಕಾರಕ್ಕೆ ಟ್ರೇಡ್ ಲೈಸನ್ಸ್ ನಿಂದ ಆದಾಯ ಮತ್ತು ಅದರಿಂದ ಆಗುವ ಉಪಯೋಗಗಳು ಮತ್ತು ಅದು ಸರಳೀಕರಣ ಆಗಬೇಕು, ಅದನ್ನ ರದ್ದು ಮಾಡಬೇಕು ಅನ್ನುವುದರ ಬಗ್ಗೆ ಶಾಸಕರು ಉಲ್ಲೇಖ ಮಾಡಿದ್ದರು.
ಅದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ ಸಚಿವರು ಗರಿಷ್ಠ ಐದು ವರ್ಷಕ್ಕೆ ತೆಗೆದುಕೊಳ್ಳಬಹುದು ಎಂದು ಇಂದು ಆದೇಶ ಹೊರಡಿಸಿದ್ದಾರೆ.
ಒಂದು ವರ್ಷಕ್ಕೂ ತೆಗೆದುಕೊಳ್ಳಬಹುದು, ಎರಡು ವರ್ಷಕ್ಕೂ ತೆಗೆದುಕೊಳ್ಳಬಹುದು, ಹಾಗೆ ಗರಿಷ್ಠ ಐದು ವರ್ಷಕ್ಕೆ ವ್ಯಾಪಾರ ಪರವಾನಿಗೆ ತೆಗೆದುಕೊಳ್ಳುವುದರ ಮೂಲಕ ಸಾಕಷ್ಟು ತೊಂದರೆಗಳನ್ನು ವ್ಯಾಪಾರಸ್ಥರು ಅನುಭವಿಸುತ್ತಿದ್ದರು. ಪ್ರತಿವರ್ಷ ತೆಗೆದುಕೊಳ್ಳಲು ನಿರ್ಧಾರ ತಪ್ಪಿದಂತಾಗಿದೆ. ಐದು ವರ್ಷಕ್ಕೊಮ್ಮೆ ಅವರು ಹಣ ಸಂದಾಯ ಮಾಡಿ ಮಾಡಬಹುದು.
ದಯಮಾಡಿ ಸರ್ಕಾರ ಮತ್ತೊಮ್ಮೆ ಪರಿಗಣಿಸಿ ಟ್ರೇಡ್ ಲೈಸನ್ಸ್ ರದ್ದು ಮಾಡಬೇಕು ಅದರಿಂದ ಅನುಕೂಲ ಕಿಂತ ಅನಾನುಕೂಲ ಹೆಚ್ಚಾಗಿದೆ. ಇಲ್ಲಿ ಆಗುತ್ತಿರುವ ಭ್ರಷ್ಟಚಾರ, ಆದ್ದರಿಂದ ಆದರ ಅವಶ್ಯಕತೆ ರಾಜ್ಯದಲ್ಲಿ ಟ್ರೇಡ್ ಲೈಸನ್ಸ್ ನಿಂದ ಒಟ್ಟು ಸಂದಾಯ ಆಗುವುದು 20 ರಿಂದ 22 ಕೋಟಿ ಆದ್ದರಿಂದ ಅನುಭವಿಸುತ್ತಿರುವ ವ್ಯಾಪಾರಸ್ಥರು ಲಕ್ಷಾಂತರ ಜನ, ಶಿವಮೊಗ್ಗ ಜಿಲ್ಲೆಯಲ್ಲೆ 20 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು ಇದ್ದಾರೆ.
ಅವರು ಯಾರು ತೆಗೆದುಕೊಳ್ಳುವುದಕ್ಕೆ ಮುಂದೆ ಬರುವುದಿಲ್ಲ ಏಕೆ ಅಂದ್ರೆ ಅದರಿಂದ ಆಗುತ್ತಿರುವ ಸಮಸ್ಯೆಗಳು ಹಾಗಾಗಿ ಇದನ್ನ ರದ್ದು ಮಾಡಬೇಕು ಅನ್ನುವ ಕೂಗು ಇಂದಿಗೂ ಇದೆ. ಹಾಗಾಗಿ ಇಂದು ಐದು ವರ್ಷಕ್ಕೊಮ್ಮೆ ಪರವಾನಿಗೆ ತೆಗೆದುಕೊಳ್ಳುವ ಆದೇಶ ಮಾಡಿರುವುದರಿಂದ ತುಂಬಾ ಜನ ವ್ಯಾಪಾರಸ್ಥರಿಗೆ ಅನುಕೂಲ ಆಗುತ್ತದೆ. ಮನವಿಗೆ ಸ್ಪಂದಿಸಿದ ಸಿಎಂ, ಸಚಿವರುಗಳಿಗೆ ಅರುಣ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post