ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಬೌದ್ಧಿಕ ಪ್ರಮುಖ ದಿನೇಶ್ ಪೈ(62) ಇಂದು ನಿಧನರಾಗಿದ್ದಾರೆ.
ಎಲ್.ಐ.ಸಿ. ನಿವೃತ್ತ ನೌಕರರಾಗಿದ್ದ ದಿನೇಶ್ ಪೈ , ವಿಕಾಸ ಟ್ರಸ್ಟ್ ಪದಾಧಿಕಾರಿಗಳು, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರು, ರಾಮನಾಥಿ ದೇವಸ್ಥಾನದ ಕುಳಾವಿಗಳ ಸಂಘಟನೆಯ ಪ್ರಮುಖರಾಗಿದ್ದರು.
ಓಟಿ ರಸ್ತೆ ನಿವಾಸಿಯಾದ ದಿನೇಶ್ ಅವರು ಪತ್ನಿ ಮತ್ತು ಓರ್ವ ಪುತ್ರ ಅಪಾರ ಬಂಧು ಬಳಗ ಅಗಲಿದ್ದಾರೆ.
ಗಣ್ಯರ ಸಂತಾಪ:
ದಿನೇಶ್ ಪೈ ಅವರ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಆರ್.ಎಸ್.ಎಸ್. ಪ್ರಮುಖ ಪಟ್ಟಾಭಿರಾಂ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್, ಶಿವಮೊಗ್ಗ ಜಿಲ್ಲಾ ಗೌಡ ಸಾರಸ್ವತ ಬ್ರಾಹ್ಮಣ ಸಂಘ ಸಂತಾಪ ಸೂಚಿಸಿದೆ.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















