ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನ Karnataka Ratna ನೀಡಿ ಗೌರವಿಸಲಾಗುತ್ತಿದ್ದು, 1992ರಿಂದ ಇಲ್ಲಿಯವರೆಗೆ 9 ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಸ್ತುತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ Power Star Puneeth Rajkumar ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ:
1992: ಕುವೆಂಪು (ಸಾಹಿತ್ಯ), ರಾಜಕುಮಾರ್ (ಚಲನಚಿತ್ರ)
1999: ಎಸ್. ನಿಜಲಿಂಗಪ್ಪ (ರಾಜಕೀಯ)
2000: ಸಿ. ಎನ್. ಆರ್. ರಾವ್ (ವಿಜ್ಞಾನ)
2001: ದೇವಿಪ್ರಸಾದ್ ಶೆಟ್ಟಿ (ವೈದ್ಯಕೀಯ)
2005: ಭೀಮಸೇನ ಜೋಷಿ (ಸಂಗೀತ)
2007: ಶ್ರೀ ಶಿವಕುಮಾರ ಸ್ವಾಮಿಗಳು (ಸಾಮಾಜಿಕ ಸೇವೆ)
2008: ದೇ. ಜವರೇಗೌಡ (ಸಾಹಿತ್ಯ)
2009: ಡಿ. ವೀರೇಂದ್ರ ಹೆಗ್ಗಡೆ (ಸಾಮಾಜಿಕ ಸೇವೆ)
2021: ಪುನೀತ್ ರಾಜಕುಮಾರ್ (ಸಿನಿಮಾ ಹಾಗೂ ಸಾಮಾಜಿಕ ಸೇವೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post