ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾಪುರುಷರ ಜಯಂತಿಗಳು ಕಾಟಾಚಾರಕ್ಕೆ ಅರ್ಥಹೀನ ಆಚರಣೆ ಆಗಬಾರದು. ಅದರ ಮಹತ್ವ ಅರಿಯುವ ಕೆಲಸ ಆಗಬೇಕು. ಇಂದಿನ ಪೀಳಿಗೆಗೆ ಮಹಾಪುರುಷರ ತ್ಯಾಗ ಬಲಿದಾನ ಮತ್ತು ಅದರ ಮಹತ್ವವನ್ನು ತಿಳಿಸುವ ಕೆಲಸ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ D.S. Arun ಹೇಳಿದ್ದಾರೆ.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜಿಲ್ಲಾಡಳಿತ. ಜಿಲ್ಲಾ ಪಂಚಾಯತ್ . ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ದಿನಾಚರಣೆ 20 22 ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಒಟ್ಟು 45 ಜಯಂತಿಗಳನ್ನು ಆಚರಿಸುತ್ತಿದ್ದು, ಆ ದಿನಗಳಲ್ಲಿ ಜಯಂತಿಯ ಅಂಗವಾಗಿ ರಜೆ ನೀಡದೆ ಒಂದು ಗಂಟೆ ಹೆಚ್ಚು ವರೆಯಾಗಿ ಕೆಲಸ ಮಾಡಿ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಬಂದ ನಂತರ ಏಳು ವರ್ಷ ಗಳಿಂದ ಧನ್ವಂತರಿ ಜಯಂತಿಯನ್ನು ಆಚರಿಸುತ್ತಿದ್ದಾರೆ. ವಿಶ್ವಕ್ಕೆ ಆಯುರ್ವೇದ ಜ್ಞಾನ ನೀಡಿದ ಭಾರತ ನಮ್ಮದು. ಮನೆ ಮದ್ದು ಹಾಗೂ ನಮ್ಮ ಪೂರ್ವಜರ ಆಹಾರ ಪದ್ಧತಿ. ಆಯುರ್ವೇದ ಗಿಡ ಮೂಲಿಕೆಗಳ ಅರಿವು ಮತ್ತು ಆಯುರ್ವೇದದ ಜ್ಞಾನದ ತಿಳುವಳಿಕೆ ಇಂದಿನ ಪೀಳಿಗೆಗೆ ಅತ್ಯವಶ್ಯವಾಗಿದೆ ಎಂದರು.
ಜಯಂತಿಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲರೂ ಅದರಲ್ಲಿ ಪಾಲ್ಗೊಳ್ಳಬೇಕು. ವಿಶೇಷ ಉಪನ್ಯಾಸ ಏರ್ಪಡಿಸಿ ಮಕ್ಕಳಲ್ಲಿ ಮಹಾತ್ಮರ ಚಿಂತನೆ ಆದರ್ಶ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಆರೋಗ್ಯ ಕಾಪಾಡಲು ಆಯುರ್ವೇದ ಅವಶ್ಯಕತೆ ಇದೆ ಎಂದು ಹೇಳಿದರು.
ಶಿವಮೊಗ್ಗ ಆಯುಷ್ ಹಬ್ ಆಗಿ ಪರಿವರ್ತನೆಯಾಗಲಿದ್ದು ಈಗಾಗಲೇ ನೂರು ಎಕರೆ ಜಾಗವನ್ನು ಆಯುರ್ವೇದ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ವಿಶೇಷ ನೊಡಲ್ ಅಧಿಕಾರಿಯನ್ನು ನೇಮಿಸಿ ಆದಷ್ಟು ಬೇಗ ಆಯುಷ್ ಯುನಿವರ್ಸಿಟಿ ಆಗಲು ನಾವೆಲ್ಲ ಪ್ರಯತ್ನಿಸುತ್ತೇವೆ ಎಂದರು.
ಆಯುರ್ವೇದಕ್ಕೆ ಮಹತ್ವದ ಕೊಡುಗೆ ನೀಡಬೇಕಾಗಿದೆ. ಮಾಹಿತಿ ಕೊರತೆಯಿಂದ ಸಮಸ್ಯೆಗಳು ಜಾಸ್ತಿ ಆಗುತ್ತಿದೆ. ಜಂಕ್ ಫುಡ್ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಬೇಕಿದೆ. ಪ್ರತಿದಿನ ಪ್ರತಿ ಮನೆಯಲ್ಲೂ ಆಯುರ್ವೇದ ಎಂಬ ಧ್ಯೇಯ ವಾಕ್ಯದೊಂದಿಗೆ ಇಂದು ಧನ್ವಂತರಿ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಎಲ್ಲರಿಗೂ ಧನ್ವಂತರಿ ದಿನಾಚರಣೆಯ ಮತ್ತು ಆಯುರ್ವೇದ ದಿನಾಚರಣೆಯ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಆಯುಷ್ ಇಲಾಖೆಯ ಅಧಿಕಾರಿಗಳಾದ ಡಾ. ಪುಷ್ಪ . ಟಿ ಎ ಹಿರೇಮಠ್ ವೈದ್ಯರಾದ ಡಾ. ಶ್ರೀನಿವಾಸ್ ರೆಡ್ಡಿ. ಡಾ. ಸಂತೋಷ್. ಡಾ ಸಂಜಯ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post