ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜನಮನ್ನಣೆ ಗಳಿಸಿರುವ ಕಾಂತಾರ ಸಿನಿಮಾ ಮೋಡಿ ಮತ್ತೆ ಮುಂದುವರೆದಿದ್ದು, ಸೂಪರ್ ಸ್ಟಾರ್ ರಜನಿಕಾಂತ್ Superstar Rajnikanth ಕಾಂತಾರ Kantara ಸಿನಿಮಾವನ್ನು ನೋಡಿ ಮೈರೋಮಾಂಚನವಾಯಿತು ಎಂದಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು, ಗೊತ್ತಿರುವುದಕ್ಕಿಂತ ಗೊತ್ತಿರದ ವಿಷಯಗಳೇ ಜಾಸ್ತಿ. ಆದರೆ ಕಾಂತಾರ ಸಿನೆಮಾದಲ್ಲಿ ಹೇಳಿರುವ ವಿಷಯಗಳನ್ನು ಮತ್ತೆ ಯಾರೂ ಈ ರೀತಿಯಾಗಿ ಯಾರೂ ಹೇಳುವುದಿಲ್ಲ. ಬರಹಗಾರನಾಗಿ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಅವರಿಗೆ ಹ್ಯಾಟ್ಸ್ ಆಫ್ ಹೇಳಿರುವ ರಜನಿಕಾಂತ್, ಹೊಂಬಾಳೆ ಫಿಲ್ಮ್ಸ್ ನಡಿ ಮೂಡಿಬಂದ ಕಾಂತಾರ ಚಿತ್ರ ನೋಡಿ ನನ್ನ ಮೈನವಿರೇಳಿತು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post