ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಸವಕೇಂದ್ರ ಶಿವಮೊಗ್ಗದ ವತಿಯಿಂದ 16 ನೇ ವರ್ಷದ ಚಿಂತನಾ ಕಾರ್ತಿಕ -2022 ಕಾರ್ಯಕ್ರಮವನ್ನು ನಗರ ಮತ್ತು ವಿವಿಧ ಕಡೆಗಳಲ್ಲಿ ಅ.29ರಿಂದ ನ. 27 ರವರೆಗೆ ಆಯೋಜಿಸಲಾಗಿದೆ ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಅವರು ಇಂದು ಬಸವಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಣರ ತತ್ವಗಳನ್ನು ಪಸರಿಸುವ ನಿಟ್ಟಿನಲ್ಲಿ ಕಳೆದ 16 ವರ್ಷಗಳಿಂದ ಚಿಂತನಾ ಕಾರ್ತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಈ ಬಾರಿಯೂ ಒಂದು ತಿಂಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮ ಅ. 29 ರಂದು ಸಂಜೆ 6.30 ಕ್ಕೆ ಬಸವಕೇಂದ್ರದಲ್ಲಿ ನಡೆಯಲಿದೆ ಎಂದರು.
ಗದಗದ ಮಾಜಿ ಸಚಿವ ಎಸ್.ಎಸ್. ಪಾಟೀಲ್ ಚಿಂತನಾ ಕಾರ್ತಿಕ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಚಾಲನೆ ನೀಡುವರು. ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಉಪಾಧ್ಯಕ್ಷ ಹೆಚ್.ಎಲ್ ಷಡಾಕ್ಷರಿ, ಅಕ್ಕನ ಬಳಗದ ಅಧ್ಯಕ್ಷ ಜಯಮ್ಮ ಕುಬಸದ್ ವಹಿಸಲಿದ್ದಾರೆ.
ಅ. 30 ರಂದು ಬೆಳಗ್ಗೆ 11 ಗಂಟೆಗೆ ಮಡಿಕೆ ಚೀಲೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಂಗಕರ್ಮಿ ಗಣೇಶ್ ಆರ್. ಕೆಂಚನಾಲ ಉಪನ್ಯಾಸ ನೀಡುವರು. ಅ. 30 ರಂದು ಸಂಜೆ 6.30 ಕ್ಕೆ ಯಲವಟ್ಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಂ. ವಿರೂಪಾಕ್ಷಪ್ಪ ಉಪನ್ಯಾಸ ನೀಡುವರು. ನ. 7 ರಂದು ಮಲ್ಲೇಶ್ವರ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಗನೂರು ಶ್ರೀ ಶಿವಬಸವ ಮಹಾಸ್ವಾಮಿ ಕುರಿತು ಉಪನ್ಯಾಸಕ ಕಲೀಂ ವುಲ್ಲಾ ಉಪನ್ಯಾಸ ನೀಡುವರು. ನ. 8 ರಂದು ಸವಳಂಗ ರಸ್ತೆಯ ಕೃಷಿ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಾಣೂರು ಚನ್ನಪ್ಪ ಉಪನ್ಯಾಸ ನೀಡುವರು ಎಂದರು.
ನ. 9 ರಂದು ದೇವಕಾತಿಕೊಪ್ಪದಲ್ಲಿ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಕೆ.ಜಿ. ವೆಂಕಟೇಶ್ ಉಪನ್ಯಾಸ ನೀಡುವರು. ನ. 10 ರಂದು ಸೋಮಿನಕೊಪ್ಪದಲ್ಲಿ ಡಾ. ಶಂಭು ಬಳಿಗಾರ ಉಪನ್ಯಾಸ ನೀಡುವರು. ನ. 11 ರಂದು ಗೋಪಾಲಗೌಡ ಬಡಾವಣೆಯಲ್ಲಿ ಉಪನ್ಯಾಸಕ ಚನ್ನಯ್ಯ ಬಿ. ಮಾರವಳ್ಳಿ, ನ. 12 ರಂದು ಕೆ.ಹೆಚ್.ಬಿ. ಕಾಲೋನಿಯಲ್ಲಿ ಬಾರಂದೂರು ಪ್ರಕಾಶ್ ಅವರು ಉಪನ್ಯಾಸ ನೀಡುವರು ಎಂದರು.
ನ. 19 ರಂದು ಶರಾವತಿ ನಗರದಲ್ಲಿ ಶೀಲಾ ಸುರೇಶ್, 20 ರಂದು ಬಸವಕೇಂದ್ರದಲ್ಲಿ ಡಾ.ಬಿ.ಜಿ. ಧನಂಜಯ, 21 ರಂದು ಅಬ್ಬಲಗೆರೆ ರತ್ನಗಿರಿ ಲೇಔಟ್ ನಲ್ಲಿ ಶ್ರೀರಂಜಿನಿ ದತ್ತಾತ್ರಿ, ನ. 23 ರಂದು ವಿನೋಬ ನಗರದಲ್ಲಿ ಅನಿತಾ ಜವಳಿ, 24 ರಂದು ತೇವರಚಟ್ನಹಳ್ಳಿಯಲ್ಲಿ ಡಾ. ಎಂ. ಬಸವರಾಜಪ್ಪ, 25 ರಂದು ಜಯದೇವ ಬಡಾವಣೆಯಲ್ಲಿ ಡಾ. ಡಿ.ಬಿ. ಶಿವರುದ್ರಪ್ಪ ಉಪನ್ಯಾಸ ನೀಡುವರು ಎಂದರು.
ಈ ಎಲ್ಲಾ ಉಪನ್ಯಾಸಗಳು ಪ್ರತಿದಿನ ಸಂಜೆ 6.30 ಕ್ಕೆ ನಡೆಯಲಿದ್ದು, ಆಯಾ ಬಡಾವಣೆಯ ಪ್ರಮುಖರು ಆತಿಥ್ಯ ವಹಿಸಲಿದ್ದು, ಎಲ್ಲರೂ ಭಾಗವಹಿಸಬೇಕು ಎಂದ ಅವರು, ನ. 26 ರಂದು ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ, ಪ್ರಮುಖರಾದ ಪ್ರೊ. ಚಂದ್ರಶೇಖರ್, ಹೆಚ್.ಎನ್. ಮಹಾರುದ್ರ, ರುದ್ರಮುನಿ ಸಜ್ಜನ್, ಜಯಮ್ಮ ಕುಬಸದ್, ಚಂದ್ರಶೇಖರ ತಳಗಿಹಾಳ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post