ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರುನಾಡಿನ ಅಪ್ಪು, ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜಕುಮಾರ್ Puneeth Rajkumar ಅವರ ಪ್ರಥಮ ಪುಣ್ಯ ಸ್ಮರಣೆ ಇಂದು ನಡೆಯುತ್ತಿದ್ದು, ಡಾ.ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದರು.
ಪುನೀತ್ ಗತಿಸಿ ಇಂದಿಗೆ ಸರಿಯಾಗಿ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಡಾ. ರಾಜ್ ಕುಟುಂಬಸ್ಥರು ಹಾಗೂ ಬಂಧುಗಳು ಕಂಠೀರವ ಸ್ಟುಡಿಯೋಗೆ ಆಗಮಿಸಿ ಮೊದಲು ರಾಜ್ ಆನಂತರ ಪಾರ್ವತಮ್ಮ ಸಮಾಧಿಗೆ ಪೂಜೆ ಸಲ್ಲಿಸಿದರು. ಆನಂತರ ಪುನೀತ್ ರಾಜಕುಮಾರ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪುನೀತ್’ಗೆ ಇಷ್ಟವಾದ ಆಹಾರಗಳನ್ನು ಇರಿಸಿ, ಜ್ಯೋತಿ ಬೆಳಗಿ, ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿ, ನಮನ ಸಲ್ಲಿಸಿದರು. ಸಮಾಧಿಗೆ ಪೂಜೆ ಸಲ್ಲಿಸುವ ವೇಳೆ ಭಾವುಕರಾದ ಅಪ್ಪು ಪತ್ನಿ ಅಶ್ವಿನಿ Ashwini Puneeth Rajkumar ಪತಿಯನ್ನು ನೆನೆದು ಕಣ್ಣೀರು ಸುರಿಸಿದರು. ಮಾತ್ರವಲ್ಲ ಇಡಿಯ ರಾಜ್ ಕುಟುಂಬ ಅಪ್ಪು ನೆನೆದು ದುಃಖಿಸುತ್ತಿದ್ದ ರೀತಿ ಕರುಳು ಹಿಂಡುವಂತಿತ್ತು.
ರಾಘವೇಂದ್ರ ರಾಜಕುಮಾರ್, Raghavendra Rajkumar ಡಾ. ಶಿವರಾಜ ಕುಮಾರ್ Shiva Rajkumar ಸೇರಿದಂತೆ ರಾಜ್ ಕುಟುಂಬಸ್ಥದ ಎಲ್ಲ ಸದಸ್ಯರು, ಅವರ ನೆಂಟರುಗಳು ಈ ಸಂದರ್ಭದಲ್ಲಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post