ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪವರ್ ಸ್ಟಾರ್ ಪುನೀತ್ ರಾಜಕುಮಾರ್ Puneeth Rajkumar ಅವರ ಮೊದಲ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ 2 ಲಕ್ಷ ಅಭಿಮಾನಿಗಳಿಗೆ ಡಾ.ರಾಜ್ ಕುಟುಂಬಸ್ಥರಿಂದ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ.
ಅಪ್ಪು ಅಗಲಿ ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯ ಮೂಲೆ ಮೂಲೆಗಳಿಂದ ಅಪ್ಪು ಸಮಾಧಿ ದರ್ಶಣಕ್ಕೆ ಲಕ್ಷಾಂತರ ಮಂದಿ ನಿನ್ನೆ ರಾತ್ರಿಯಿಂದಲೇ ಆಗಮಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋ ಬಳಿಯಲ್ಲಿ ಲಕ್ಷಾಂತರ ಮಂದಿ ಸಾಲುಗಟ್ಟಿ ನಿಂತಿದ್ದು, ಒಂದು ರೀತಿಯ ಜಾತ್ರೆಗೆ ವಾತಾವರಣ ಅಲ್ಲಿ ನಿರ್ಮಾಣವಾಗಿದೆ.
ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿರುವ ಡಾ. ರಾಜ್ ಕುಟುಂಬಸ್ಥರು ಈ ಸಂದರ್ಭದಲ್ಲಿ 2 ಲಕ್ಷ ಮಂದಿಗೆ ಅನ್ನದಾನದ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ನಿನ್ನೆಯಿಂದಲೇ ನೂರಾರು ಮಂದಿ ಅಡುಗೆ ಭಟ್ಟರು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಬೆಳಗ್ಗೆಯಿಂದಲೇ ಅನ್ನದಾನ ಆರಂಭವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post