ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ನಾಡನ್ನು ಕಟ್ಟುವಲ್ಲಿ ನಮ್ಮ ಹಿರಿಯರು ಹೇಗೆಲ್ಲಾ ಶ್ರಮಿಸಿದ್ದಾರೆ ಎಂಬುದರ ತ್ಯಾಗವನ್ನು ಪ್ರತಿಯೊಬ್ಬರ ವಿದ್ಯಾರ್ಥಿಯೂ ಅರಿತು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ ಹೇಳಿದರು.
ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕವನ್ನು ಏಕೀಕರಣಗೊಳಿಸುವಲ್ಲಿ ಹಲವು ಪ್ರಮುಖರ ಪಾತ್ರ ಮಹತ್ವದ್ದಾಗಿದ್ದು, ಇವರುಗಳ ಶ್ರಮ ಹಾಗೂ ತ್ಯಾಗವನ್ನು ಎಲ್ಲರೂ ಅರಿಯಬೇಕು. ಕರ್ನಾಟಕದ ಏಕೀಕರಣ ಮತ್ತು ಕನ್ನಡನಾಡಿನ ವೈಭವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ಕನ್ನಡದ ಉಳಿವಿಗಾಗಿ ಹೋರಾಡಬೇಕು, ಕರ್ನಾಟಕದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದು ಹೆಮ್ಮೆಯಿಂದ ಹೇಳಿದರು.

ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಬಗ್ಗೆ ವೇಷಭೂಷಣ ಧರಿಸಿ ಅವರ ಬಗ್ಗೆ ಮಾಹಿತಿಯನ್ನು ನೀಡಿದ್ದು, ವಿಶೇಷವಾಗಿತ್ತು. ಅಲ್ಲದೇ, ಜಾನಪದ ನೃತ್ಯಗಳನ್ನು ಮತ್ತು ಕನ್ನಡ ಹಿರಿಮೆಯ ನಾಟಕವನ್ನು ಅದ್ಭುತವಾಗಿ ಮಾಡಿದರು. ಇದರಿಂದ ವಿದ್ಯಾರ್ಥಿಗಳಿಗೆ ನಮ್ಮ ನಾಡು ಜಾನಪದ, ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯ ಬಿಡು ಎಂದು ವಿಶೇಷವಾಗಿ ಸಾರಲಾಗಿತ್ತು.
Also read: ಬಿಲ್ಡ್ ಫಾರ್ ದ ವರ್ಲ್ಡ್: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ಮೋದಿ ಚಾಲನೆ
ಶಾಲಾ ಸಂಯೋಜಕಿ ದಿವ್ಯಾ ಶೆಟ್ಟಿ, ಶಾಲೆಯ ಸಿಒಒ ಸುಮಂತ್, ಸೌಲಭ್ಯ ವ್ಯವಸ್ಥಾಪಕ ಅಧಿಕಾರಿ ವಿಜಯ್ ಕುಮಾರ್, ಶಿP್ಷÀಕರು ವಿದ್ಯಾರ್ಥಿಗಳು ಆಡಳಿತ ಮತ್ತು ಆಡಳಿತೇತರ ವರ್ಗದವರು ಉಪಸ್ಥಿತರಿದ್ದರು.











Discussion about this post