ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡದ ರಾಜರತ್ನ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ Puneeth Rajkumar ಅವರ ಕೊನೆಯ ಚಿತ್ರ ಗಂಧದ ಗುಡಿಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ B S Yadiyurappa ಅವರು ಕುಟುಂಬ ಸಹಿತ ವೀಕ್ಷಿಸಿದರು.
ನಗರದ ಶಿವಪ್ಪನಾಯಕ ಮಾಲ್’ನ ಭಾರತ್ ಸಿನಿಮಾಸ್’ನಲ್ಲಿ ನಿನ್ನೆ ಕುಟುಂಬ ಸಹಿತ ಚಿತ್ರ ವೀಕ್ಷಿಸಿದ ಯಡಿಯೂರಪ್ಪ, ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಯಡಿಯೂರಪ್ಪ, ಪುನೀತ್ ಅವರಿಗೆ ಇದ್ದ ಪ್ರಕೃತಿ ಕುರಿತಾಗಿನ ಆಸಕ್ತಿಗೆ ತಕ್ಕಂತೆ ಅದ್ಬುತವಾದ ಸಿನಿಮಾ ಮಾಡಿದ್ದಾರೆ. ಇದು ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರವಾಗಿದ್ದು, ಇದರಲ್ಲಿನ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸೆಲ್ಫಿಗಾಗಿ ಮುಗಿಬಿದ್ದ ಯುವಜನತೆ
ಇನ್ನು, ಗಂಧದಗುಡಿ ಚಿತ್ರ ವೀಕ್ಷಣೆಗಾಗಿ ಮಾಲ್’ಗೆ ಆಗಮಿಸಿದ ಯಡಿಯೂರಪ್ಪ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಮಾಲ್’ಗೆ ಆಗಮಿಸಿದ ವೇಳೆ ಬಹಳಷ್ಟು ಮಕ್ಕಳು ಬಿಎಸ್’ವೈಗೆ ಕೈ ಕುಲುಕಿ ಸಂಭ್ರಮಿಸಿದರು. ಚಿತ್ರ ವೀಕ್ಷಿಸಿ ಹೊರಬಂದ ವೇಳೆ ಯುವಜನತೆ ಮಾಜಿ ಸಿಎಂ ಅವರನ್ನು ಮಾತನಾಡಿಸಿ, ಸೆಲ್ಫಿ ತೆಗೆದುಕೊಂಡರು.
ಯಡಿಯೂರಪ್ಪ ಅವರೊಂದಿಗೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅವರ ಪತ್ನಿ ತೇಜಸ್ವಿನಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post