ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಲಿತರು ಮತ್ತು ಹಿಂದುಳಿದ ವರ್ಗದವರನ್ನ ಸೋಲಿಸಿದ್ದೇ ಕಾಂಗ್ರೆಸ್‌ನವರು. ಸ್ವಾತಂತ್ರ್ಯ ಭಾರತದ ನಂತರ ಇಲ್ಲಿಯವರೆಗೆ ಎಷ್ಟು ಜನ ಕಾಂಗ್ರೆಸ್‌ನವರು ಪ್ರಧಾನಿಮಂತ್ರಿಗಳಾಗಿದ್ದಾರೆ ಎಂದು ಶಾಸಕ ಈಶ್ವರಪ್ಪ MLA Eshwarappa ಹೇಳಿದರು.
ಬಿಜೆಪಿಗೆ ಹಿಂದುಳಿದ ವರ್ಗದ ಮೇಲೆ ಪ್ರೀತಿಯಿದ್ರೆ ಈಶ್ವರಪ್ಪ ಅವರನ್ನು ಸಿಎಂ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಇದ್ದಕ್ಕಿದ್ದ ಹಾಗೆ ನನ್ನ ಮೇಲೆ ಅವರಿಗೇನು ಪ್ರೀತಿ ಹುಟ್ಟಿದ್ದು, ತಮ್ಮ ಮೇಲಿನ ಅವರ ಕಳಕಳಿಗೆ ಅಭಿನಂದನೆ ಹಾಗೂ ಸಿದ್ಧರಾಮಯ್ಯ ಈ ಜನ್ಮದಲ್ಲಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕುಹಕವಾಡಿದರು.
ದೇಶದ ಪ್ರಧಾನಮಂತ್ರಿ ಯಾರು? ಹಿಂದುಳಿದವರಲ್ವ? ನಮ್ಮ ಹೆಮ್ಮೆಯ ರಾಷ್ಟ್ರನಾಯಕ ಮೋದಿಯವರು ಹಿಂದುಳಿದ ವರ್ಗದವರಾಗಿದ್ದರೂ ಅವರು ಯಾವುದೇ ಜಾತಿಗೆ ಸೀಮಿತವಾಗಿಲ್ಲ ಎಂದರು.
ಕಲ್ಬುರ್ಗಿಯಲ್ಲಿ ಹಿಂದುಳಿದ ವರ್ಗದ ಸಮಾವೇಶ ಯಶಸ್ವಿಯಾಗಿದೆ ಇದಕ್ಕೆ ಸಹಕರಿಸಿದ ಹಿಂದುಳಿದ ವರ್ಗದ ಎಲ್ಲಾ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು. ಕಾಂಗ್ರೆಸ್ ಏನೇ ಸರ್ಕಸ್ ಮಾಡಿದರೂ ಬಿಜೆಪಿ ಹಿಂದುಳಿದ ಸಮಾಜಕ್ಕೆ ನೀಡಿದ ಕೊಡುಗೆ ಫಲಿಸಿದೆ. ಹಿಂದಿನ ಸರ್ಕಾರಗಳು ಯಾವುದೇ ಅಭಿವೃದ್ಧಿ ಮಾಡಿರಲಿಲ್ಲ. ಬಿಜೆಪಿ ಹಿಂದಿನ ಸರ್ಕಾರಗಳು ನೀಡಿದ ಅನುದಾನಕ್ಕಿಂತ ಹೆಚ್ಚು ಅನುದಾನ ನೀಡಿದೆ. ಮುಂದೆ ಬೇರೆ ಬೇರೆ ಸಮಾಜಗಳ ಸಮಾವೇಶ ವಿವಿಧೆಡೆ ನಡೆಯಲಿದೆ. ನ.10ರಂದು ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶ ನಡೆಯಲಿದೆ ಎಂದು ವಿವರಿಸಿದರು.
ತಮ್ಮನ್ನು ಸೇರಿದಂತೆ ಬಲಿಷ್ಠ ಮುಖಂಡರುಗಳಾದ ನರೇಂದ್ರ ಮೋದಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಹೇಳಿಕೆ ನೀಡಿ ತಮ್ಮ ಪಕ್ಷಕ್ಕೆ ಏಟು ಕೊಟಬಹುದು ಎಂಬ ಭ್ರಮೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂಬುದು ಅಮಿತ್ ಷಾ ಅವರ ನಿಲುವಾಗಿದ್ದು, ವರದಿಯಾಧರಿಸಿ ಮೀಸಲಾಗಿ ಘೋಷಿಸಲಾಗಿದೆ. ಉಳಿದ ಸಮಾಜಗಳು ಮೀಸಲಾತಿ ಕೇಳುತ್ತಿದ್ದು, ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್‌ನವರು ದಾಖಲೆ ರಹಿತ ಭ್ರಷಾಚಾರದ ಆರೋಪ ಮಾಡುತ್ತಾರೆ. ಆದರೆ ಬಿಜೆಪಿ ಆರೋಪ ಮಾಡಬೇಕಾದರೆ ದಾಖಲೆ ಸಮೇತ ಹೇಳುತ್ತೇವೆ. ರಮೇಶ್ ಅವರು ಸಿದ್ಧರಾಮಯ್ಯ ವಿರುದ್ಧ 1.30ಲಕ್ಷ ರೂ. ಲಂಚ ಪಡೆದ ಬಗ್ಗೆ ಆರೋಪ ಮಾಡಿದ್ದು, ಸಿದ್ದರಾಮಯ್ಯ ವಿರುದ್ಧ ದಾಖಲೆ ಸಮೇತ ದೂರು ದಾಖಲಾಗಿದೆ. ಇನ್ನು ಮುಂದಿನ ದಿನಗಳಲ್ಲೂ ಸಹ ಇನ್ನೂ ಹೆಚ್ಚಿನ ಭ್ರಷ್ಟಾಚಾರವನ್ನು ಬಯಲಿಗೆಳೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















