ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಜನರಿಗೆ ಬಿಗ್ ಶಾಕ್ ನೀಡಿರುವ ಸರ್ಕಾರ ನಂದಿನಿ Nadini Product ಹಾಲು ಹಾಗೂ ಮೊಸರಿನ ಬೆಲೆಯಲ್ಲಿ ಏರಿಕೆ ಮಾಡಿದ್ದು, ಇದು ಇಂದು ರಾತ್ರಿಯಿಂದಲೇ ಜಾರಿಗೆ ಬರಲಿದೆ.
ಕೆಎಂಎಫ್ ಈ ನಿರ್ಧಾರ ಕೈಗೊಂಡಿದ್ದು, ನಂದಿನಿ ಹಾಗೂ ಮೊಸರಿನ ಪ್ರತಿ ಒಂದು ಲೀಟರ್ ಮೇಲೆ ಮೂರು ರೂ. ಏರಿಕೆ ಮಾಡಲಾಗಿದೆ. ಪರಿಷ್ಕೃತ ದರ ಇಂದು ರಾತ್ರಿಯಿಂದಲೇ ಜಾರಿಗೆ ಬರಲಿದೆ.
ಕಳೆದೊಂದು ವರ್ಷದಿಂದ ಹಾಲಿನ ದರದ ಏರಿಕೆ ಮಾಡುವ ಕುರಿತು ಚರ್ಚೆ ಮಾಡುತ್ತಾ ಬಂದಿದ್ದ ಒಕ್ಕೂಟವು ಈಗ ಬೆಲೆಯುನ್ನು ಹೆಚ್ಚಳ ಮಾಡಿದೆ. ಪ್ರಸ್ತುತ ಹಾಲಿನ ದರ ಪ್ರತಿ ಲೀ.ಗೆ 37 ರೂ. ಇದ್ದು, ಇದಕ್ಕೆ 3 ರೂ. ಹೆಚ್ಚಳದ ನಂತರ 40ರೂ.ಗೆ ಏರಿಕೆಯಾಗಲಿದೆ. ರಾಜ್ಯದಲ್ಲಿ ಈ ಹಿಂದೆ 2020ರ ಫೆಬ್ರವರಿಯಲ್ಲಿ 2 ರೂ. ಹೆಚ್ಚಳ ಮಾಡಲಾಗಿತ್ತು.
ಹೊಟೇಲ್’ಗಳಲ್ಲಿ ಬೆಲೆ ಏರಿಕೆಯಿಲ್ಲ!
ಇನ್ನು, ನಂದಿನಿ ಹಾಲಿನ ಬೆಲೆ ಏರಿಕೆಯಾಗಿದ್ದರೂ ಬೆಂಗಳೂರಿನ ಹೊಟೇಲ್’ಗಳಲ್ಲಿ ಕಾಫಿ ಹಾಗೂ ಟೀ ಬೆಲೆಯಲ್ಲಿ ಏರಿಕೆ ಮಾಡುವುದಿಲ್ಲ ಎಂದು ವರದಿಯಾಗಿದೆ.
ಈ ಕುರಿತಂತೆ ಹೊಟೇಲ್ ಮಾಲೀಕರ ಸಂಘದ ಪ್ರಮುಖರು ಚರ್ಚೆ ನಡೆಸುತ್ತಿದ್ದು, ಹಾಲಿನ ಬೆಲೆ ಏರಿಕೆಯಾದರೂ ರಾಜಧಾನಿಯಲ್ಲಿ ಕಾಫಿ, ಟೀ ಬೆಲೆಯಲ್ಲಿ ಏರಿಕೆ ಮಾಡದಿದರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದ್ದು, ಈ ಕುರಿತಂತೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post