ಕಲ್ಪ ಮೀಡಿಯಾ ಹೌಸ್ | ಸೊರಬ |
ಭಾರತೀಯ ಧಾರ್ಮಿಕ ಪರಿಕಲ್ಪನೆ ಸೋಜಿಗ ಜೊತೆಗೆ ಅಧ್ಯಯನ ಪೂರಕ ಎಂದು ಅಮೇರಿಕಾ ಫ್ಲಾರಿಡಾದ ಧೃವಾಗೋರಿಕ್ ಹೇಳಿದರು.
ಕರ್ನಾಟಕ ರಾಜ್ಯದ ವಿಶೇಷವಾಗಿ ನರಸಿಂಹ ವಿಗ್ರಹಗಳ ಬಗ್ಗೆ ಕುತೂಹಲವಿರುವ ಅವರು ಬೇರೆಬೇರೆ ನೃಸಿಂಹ ಕ್ಷೇತ್ರಗಳಿಗೆ ಭೇಟಿ ನೀಡಿ ತಾಲ್ಲೂಕು ಕುಂಟಗಳಲೆ, ಕಮರೂರು ಗ್ರಾಮಗಳಿಗೆ ಭೇಟಿ ನೀಡಿ ಯಲಸಿ ಗ್ರಾಮದಲ್ಲಿ ಕೆಲಕಾಲ ಸಂಶೋಧಕ ಶ್ರೀ ಪಾದ ಬಿಚ್ಚುಗತ್ತಿ ಅವರ ಮನೆಯಲ್ಲಿ ನರಸಿಂಹ ಕಲ್ಪಗಳ ಕುರಿತು ಚರ್ಚಿಸಿದರು.

ಈ ಹಿಂದೆ ದೇಶದ ಹಲವು ನರಸಿಂಹ ದೇಗುಲಗಳಿಗೆ ಭೇಟಿ ನೀಡಿ ಅದರ ಕುರಿತು ಚಿತ್ರಸಹಿತದ ಕೃತಿ ರಚಿಸಿದ್ದನ್ನು ವಿವರಿಸಿದ ಅವರು ಮೊದಲ ಭಾಗದ ಕೃತಿಯನ್ನು ಕೊಡುಗೆಯನ್ನಾಗಿ ನೀಡಿದರು.
ವಿವಿಧ ರೂಪಗಳ ನರಸಿಂಹನನ್ನು ಅಧ್ಯಯನಿಸುತ್ತಿರುವ ಗೋರಿಕ್ ಪ್ರಸ್ತುತ ಯೋಗ ನರಸಿಂಹ ದೇವರ ಕುರಿತು ಶೋಧಕಾರ್ಯ ನಡೆಸಿದ್ದಾರೆ. ಪ್ರಸಕ್ತ ಭೇಟಿಯಲ್ಲಿ ವಿಶೇಷ ಸಿನೆಮಾಟೋಗ್ರಫಿ ತಜ್ಞರಾದ ವಿವೇಕ ಎಸ್. ಕೃಷ್ಣಾನಂದ್, ಬೆಂಗಳೂರು ರಾಮಪ್ರಸಾದ್, ವಸಿಷ್ಠ ಭಟ್ ಚಟ್ಣಳ್ಳಿ ಸಿದ್ದಾಪುರ ಅಭಯ್ ಡಿ.ಎಂ. ಚೀಲೂರು ದಾವಣಗೆರೆ ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post