ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಂದಿನ ಹಾಲು ಹಾಗೂ ಮೊಸರಿನ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ CM Basavaraja Bommai ಅವರ ಸೂಚನೆ ಹಿನ್ನೆಲೆಯಲ್ಲಿ ಈ ಆದೇಶವನ್ನು ಕೆಎಂಎಫ್ ಹಿಂಪಡೆದಿದೆ.
ನಂದಿನ ಹಾಲು ಹಾಗೂ ಮೊಸರಿನ ಬೆಲೆಯನ್ನು ಪ್ರತಿ ಲೀಟರ್’ಗೆ ಮೂರು ರೂಪಾಯಿ ಏರಿಕೆ ಮಾಡಿ ಕೆಎಂಎಫ್ ನಿನ್ನೆ ಆದೇಶಿಸಿತ್ತು. ಅಲ್ಲದೇ, ಪರಿಷ್ಕೃತ ದರ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವುದಾಗಿ ಹೇಳಿತ್ತು.
ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಇದರಲ್ಲಿ ಮಧ್ಯಪ್ರವೇಶಿಸಿ, ದರ ಏರಿಕೆಯನ್ನು ಹಿಂಪಡೆಯುವAತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಹೊರಬಿದ್ದ ಆದೇಶವನ್ನು ಕೆಎಂಎಫ್ ಹಿಂಪಡೆದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















