ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮುದಾಯ ಬಾನುಲಿ ರೇಡಿಯೋ ಶಿವಮೊಗ್ಗ 90.8 FM MHz ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರೊಂದಿಗೆ ಸಾರ್ವಜನಿಕರ ನೇರ ಸಂವಾದ (ಫೋನ್ ಇನ್ ) ಕಾರ್ಯಕ್ರಮ ಆಯೋಜಿಸಿದೆ.
ನ.17ರ ಗುರುವಾರದಂದು ಬೆಳಗ್ಗೆ 10 ಗಂಟೆಗೆ ಈ ನೇರಸಂವಾದವು ಬಾನುಲಿಯಲ್ಲಿ ಪ್ರಸಾರವಾಗಲಿದ್ದು, ಆರ್ ಜೆ ಅರ್ಪಿತಾ ನಡೆಸಿಕೊಡಲಿದ್ದಾರೆ. ಅಂದು ಆಸಕ್ತರು (ಮೊ: 9686096279) ಗೆ ಕರೆಮಾಡಿ ಎಸ್ ಪಿ ಅವರೊಂದಿಗೆ ನೇರವಾಗಿ ಮಾತನಾಡಬಹುದು.
ಇದರಲ್ಲಿ ಶಿವಮೊಗ್ಗ ಜಿಲ್ಲಾ ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳು, ಟ್ರಾಫಿಕ್ ಸಮಸ್ಯೆ ತಗ್ಗಿಸಲು ಜನರು ನೀಡಬಹುದಾದ ವಿಶೇಷ ಮಾರ್ಗೋಪಾಯಗಳನ್ನು ಹಂಚಿಕೊಳ್ಳಲು ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಪ್ರಶಂಸಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ.
Also read: ಭದ್ರಾವತಿ ಹಳೇನಗರ ರಾಯರ ಮಠದಲ್ಲಿ ಆಶ್ಲೇಷ ಬಲಿ ಸಂಪನ್ನ
ರೇಡಿಯೋ ಶಿವಮೊಗ್ಗ ( radioshivamogga) ಬಾನುಲಿಯ ಆ್ಯಪ್ ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಸ್ಟೋರ್ ನಲ್ಲಿ ಲಭ್ಯವಿದೆ. ಇದರಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ಮುಖಾಂತರ ಪ್ರಪಂಚದಾದ್ಯಂತ ಇದನ್ನು ಆಲಿಸಬಹುದಾಗಿದೆ ಎಂದು ನಿಲಯದ ನಿರ್ದೇಶಕರಾದ ಜಿ.ಎಲ್. ಜನಾರ್ದನ್ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post