No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Saturday, July 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಹುಬ್ಬಳ್ಳಿ-ಧಾರವಾಡ

ಕೌಲ್ಯಾಭಿವೃದ್ದಿ ತರಬೇತಿ ಯುವ ಸಮೂಹದಿಂದ ಉತ್ತಮ ಸ್ಪಂದನೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

kalpa News by kalpa News
November 17, 2022
in ಹುಬ್ಬಳ್ಳಿ-ಧಾರವಾಡ
0
ಕೌಲ್ಯಾಭಿವೃದ್ದಿ ತರಬೇತಿ ಯುವ ಸಮೂಹದಿಂದ ಉತ್ತಮ ಸ್ಪಂದನೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಧಾರವಾಡ  |

ಜಿಲ್ಲಾ ಕೌಶಲ್ಯಾಭಿವೃದ್ಧಿ ಘಟಕ ಹಾಗೂ ಇತರ ಇಲಾಖೆಗಳಿಂದ ವಿವಿಧ ವಿಷಯಗಳಲ್ಲಿ ಕಳೆದ ಎರಡು ವರ್ಷದಲ್ಲಿ 20,181 ಜನರಿಗೆ ಕೌಲ್ಯಾಭಿವೃದ್ದಿ ತರಬೇತಿಯನ್ನು ನೀಡಲಾಗಿದ್ದು, ಯುವ ಸಮೂಹದಿಂದ ಉತ್ತಮ ಸ್ಪಂದನೆಯಿದ್ದು, ಉದ್ಯೋಗಾಕಾಂಕ್ಷಿಗಳ ನೊಂದಾಯಿತ ಸಂಖ್ಯೆ ಹೆಚ್ಚಿದೆ ಎಂದು ಜಿಲ್ಲಾ ಕೌಶಲ್ಯ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಅಗತ್ಯವಿರುವ ಜನರಿಗೆ ಕೌಶಲ್ಯ ತರಬೇತಿ, ಉದ್ಯೋಗ ನೀಡಲು ವಿವಿಧ ಇಲಾಖೆಗಳ ಸಮನ್ವಯದಲ್ಲಿ ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಉಪಸಮಿತಿಗಳಿಗೆ ಮುಖ್ಯಸ್ಥರಾಗಿರುವ ಅಧಿಕಾರಿಗಳು ಆದ್ಯತೆ ನೀಡಿ, ಸಮಿತಿ ಕಾರ್ಯಗಳನ್ನು ನಿಗಧಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಈ ಕುರಿತ ಕ್ರಿಯಾಯೋಜನೆ, ವರದಿಗಳನ್ನು ಜಿಲ್ಲಾ ಕೌಶಲ್ಯ ಸಮಿತಿಗೆ ಎರಡು ವಾರದಲ್ಲಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸರಕಾರದ ಮುಖ್ಯಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ 5,085 ಮತ್ತು ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ 654, ಆರೋಗ್ಯ ಕ್ಷೇತ್ರದಲ್ಲಿ 270 ಸೇರಿ 6009 ಜನರಿಗೆ ಹಾಗೂ ಕೈಮಗ್ಗ ಜವಳಿ, ಎಟಿಡಿಸಿ, ಜಿಟಿಟಿಸಿ, ಲೀಡಕರ್, ಮಹಿಳಾ ಮಕ್ಕಳ ಇಲಾಖೆ, ರುಡಸೆಟ್, ಸಿಡಾಕ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಡಢ-ನಲ್ಮ್ ಯೋಜನೆಯಡಿ 14,172 ಜನರಿಗೆ ಕೌಶಲ್ಯ ಅಭಿವೃದ್ಧಿಗಾಗಿ ಜಿಲ್ಲೆಯ ಒಟ್ಟು 20,181 ಜನರಿಗೆ 39 ವಿಷಯಗಳಲ್ಲಿ ಕೌಶಲ್ಯ ತರಬೇತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರಾಜ್ಯ ಸರಕಾರದಿಂದ 2018 ರಲ್ಲಿ ಆರಂಭಿಸಿರುವ kaushalkar.com ವೆಬ್ ಸೈಟ್ ಮೂಲಕ ಇಲ್ಲಿಯವರೆಗೆ ಜಿಲ್ಲೆಯ 80,097 ಒಟ್ಟು ಜನ ವಿವಿಧ ತರಬೇತಿಗಳಿಗಾಗಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ನಾಲ್ಕು ಉದ್ಯೋಗ ಮೇಳ ಆಯೋಜಿಸಲಾಗಿದ್ದು, 412 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ತರಬೇತಿ ಪಡೆದ ಶೇ.60ರಷ್ಟು ಯುವಕರು ಖಾಸಗಿ ಕೈಗಾರಿಕೆ, ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ತರಬೇತಿ ನೀಡಿದ ಸಂಸ್ಥೆಗಳು ವರದಿ ನೀಡಿವೆ. ಸಂಬಂದಿಸಿದ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ, ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ರಾಜ್ಯ ಸರಕಾರವು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಧಾರವಾಡ ತಾಲೂಕಿನ ರಾಯಾಪುರದಲ್ಲಿ ಅಂತರಾಷ್ಟ್ರೀಯ ವಲಸೆ ಕೇಂದ್ರದ ವಿಭಾಗೀಯ ಕಚೇರಿಯನ್ನು ಕಳೆದ ಎಪ್ರಿಲ್ ತಿಂಗಳಿಂದ ಆರಂಭಿಸಿದೆ. ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಈ ವಿಭಾಗೀಯ ಕಚೇರಿ ಹೊಂದಿದೆ.
ಹೊರ ದೇಶಗಳಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವ ಸುಮಾರು 194 ಜನರು ಈ ಕೇಂದ್ರದಲ್ಲಿ ಈಗಾಗಲೇ ನೋಂದಣಿ ಆಗಿದ್ದು, ಕೃಷಿ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಆಸಕ್ತ 20 ಜನರಿಗೆ ಜಪಾನ್ ಮತ್ತು ರೊಮೇನಿಯಾ ದೇಶಗಳ ಉದ್ಯಮಿಗಳಿಂದ ಸಂದರ್ಶನಕ್ಕೆ ಆಯ್ಕೆ ಆಗಿದ್ದಾರೆ. ವಿದೇಶಗಳಲ್ಲಿ ಮನೆಗೆಲಸ, ಮಕ್ಕಳ ಪಾಲನೆ, ಪೆÇೀಷಣೆ ಕೆಲಸಕ್ಕೆ ಅನೇಕರು ಆಸಕ್ತಿ ವ್ಯಕ್ತಪಡಿಸಿ, ಹೆಸರು ನೋಂದಾಯಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರಿಗೆ ಈ ಕೇಂದ್ರದಿಂದ ಹೊರ ದೇಶಗಳಲ್ಲಿ ಉದ್ಯೋಗ ಕಲ್ಪಿಸಲು ಜಿಲ್ಲಾ ಕೌಶಲ್ಯ ಸಮಿತಿ ವಿಶೇಷ ಕ್ರಿಯಾ ಯೋಜನೆ ರೂಪಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಕೈಗಾರಿಕಾ ಸಂಪರ್ಕ ಕೋಶದಿಂದ ವಿವಿಧ ಕೈಗಾರಿಕೆಗಳಲ್ಲಿ ಯುವಕರಿಗೆ ತರಬೇತಿ ಅಥವಾ ಈಗಾಗಲೇ ಉದ್ಯೋಗ ನಿರತರ ಕೌಶಲ್ಯ ಉನ್ನತಿಕರಣಕ್ಕೆ ಅಗತ್ಯ ತರಬೇತಿ ನೀಡಲು 650 ಜನರ ಗುರಿ ನೀಡಲಾಗಿದ್ದು, ಈಗಾಗಲೇ 490 ಜನರನ್ನು ಗುರುತಿಸಿ, ಅಗತ್ಯ ತರಬೇತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಸ್ವಯಂಉದ್ಯೋಗಕ್ಕೆ ಹೆಚ್ಚು ಒತ್ತು ನೀಡಬೇಕು. ಪಿಯು ಮತ್ತು ಡಿಗ್ರಿ ಕಾಲೇಜುಗಳಲ್ಲಿ ಉದ್ಯೋಗ ಪರಿಚಯ ಕಾರ್ಯಕ್ರಮಗಳನ್ಬು ಆಯೋಜಿಸಬೇಕು. ಹುಬ್ಬಳ್ಳಿ-ಧಾರವಾಡ ಮತ್ತು ಧಾರವಾಡ ಸುತ್ತಲಿನ ಜಿಲ್ಲೆಗಳಿಗೆ ಹೊಂದುವ, ಅಗತ್ಯವಿರುವ ಉದ್ಯೋಗಗಳನ್ನು ಕೇಂದ್ರೀಕರಿಸಿ, ತರಬೇತಿ ಮಾದರಿಗಳನ್ನು ತಯಾರಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು ತರಬೇತಿಗೆ ಆಯ್ಕೆ ಮಾಡುವಾಗ ಅರ್ಹರಿಗೆ ಆದ್ಯತೆ ನೀಡಬೇಕು ಮತ್ತು ಆಯ್ಕೆ ಮಾಡಿದ ಅಭ್ಯರ್ಥಿಗಳು ಪಡೆಯುವ ತರಬೇತಿಯನ್ನು ನಿರಂತರ ನಿಗಾವಹಿಸಿ, ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಕೌಶಲ್ಯ ಅಧಿಕಾರಿ ಡಾ.ಚಂದ್ರಪ್ಪ ಎಂ.ಎಸ್. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶ್ರವಣಕುಮಾರ, ಸಿಡಾಕ್ ನ ಮೌನೇಶ ಬಡಿಗೇರ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಸ್.ಲಕ್ಷ್ಮೀಪತಿ, ಕೆಎಂಡಿಸಿ ಅಧಿಕಾರಿ ಮೆಘಾ ನವಲೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್. ಕುಕನೂರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಾಂಖ್ಯಿಕ ಅಧಿಕಾರಿ ಅಕ್ಕಮಹಾದೇವಿ ಶೆಟ್ಟರ್, ಅಭಿಯಾನ ವ್ಯವಸ್ಥಾಪಕ ಡಾ.ರವಿ ಮುನವಳ್ಳಿ, ಜಿಲ್ಲಾ ಸಂಯೋಜಕ ವಿಕ್ರಮ ರಾಜ್ ವಾಲ್ಮೀಕಿ, ಐಎಂಸಿಕೆ ಸಮಾಲೋಚಕಿ ಶುಭಶ್ರಿ ಕಮಲಾಪುರ, ಜಿಲ್ಲಾ ಎನ್‍ಐಸಿ ಅಧಿಕಾರಿ ಮೀನಾಕುಮಾರಿ, ಐಟಿಐ, ವಿವಿಧ ಸರಕಾರಿ ಇಲಾಖೆಗಳ, ತರಬೇತಿ ಕೇಂದ್ರಗಳ, ಟಾಟಾ ಹಿಟಾಚಿ ಸೇರಿ ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: DharwadaKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಧಾರವಾಡ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನ.19, 20ರಂದು ಪಿಜಿ ಸಿಇಟಿ ಮತ್ತು ಡಿಸಿಇಟಿ ಪರೀಕ್ಷೆ: ವ್ಯವಸ್ಥಿತ ಸಿದ್ಧತೆಗೆ ಎಡಿಸಿ ಸೂಚನೆ

Next Post

ನ.20ರಂದು ನಮ್ಮಲ್ಲೆ ಮೊದಲು, ಅಂತರ್ವೀಕ್ಷಣೆ ಕೃತಿಗಳ ಲೋಕಾರ್ಪಣೆ

kalpa News

kalpa News

Next Post
ನ.20ರಂದು ನಮ್ಮಲ್ಲೆ ಮೊದಲು, ಅಂತರ್ವೀಕ್ಷಣೆ ಕೃತಿಗಳ ಲೋಕಾರ್ಪಣೆ

ನ.20ರಂದು ನಮ್ಮಲ್ಲೆ ಮೊದಲು, ಅಂತರ್ವೀಕ್ಷಣೆ ಕೃತಿಗಳ ಲೋಕಾರ್ಪಣೆ

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL