ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಾಲಿಕೆಗೆ ಸೇರಿದ ಜಾಗ ತೆರವು ಮಾಡುವ ವೇಳೆ ಭೂಮಿಯಲ್ಲಿ ಗಣೇಶ ಹಾಗೂ ನಾಗದೇವರ ವಿಗ್ರಹ ಪತ್ತೆಯಾಗಿದ್ದು, ನಗರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸೀಗೆಹಟ್ಟಿಯಲ್ಲಿ ಪಾಲಿಕೆಗೆ ಸೇರಿದ ಜಾಗವನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ವೇಳೆ ಭೂಮಿಯಲ್ಲಿ ಗಣೇಶ ಹಾಗೂ ನಾಗದೇವರ ವಿಗ್ರಹ ಪತ್ತೆಯಾಗಿದೆ.
ಇಲ್ಲಿನ ಅಂತರಘಟ್ಟಮ್ಮ ದೇವರ ನಾಗದೇವರ ವಿಗ್ರಹ ಇದಾಗಿದೆ. ದೇವರ ವಿಗ್ರಹ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿಯೇ ದೇವಾಲಯ ನಿರ್ಮಾಣವಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಸ್ಥಳದಲ್ಲಿ ಕಾಂಪ್ಲೆಕ್ಸ್ ನಿರ್ಮಿಸುವ ಉದ್ದೇಶವಿದ್ದು, ಇದರೊಂದಿಗೆ ಇಲ್ಲಿಯೇ ದೇವಾಲಯ ನಿರ್ಮಾಣವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನು, ಸ್ಥಳಕ್ಕೆ ಉಪಮೇಯರ್ ಲಕ್ಷ್ಮೀಶಂಕರ್ ನಾಯ್ಕ್, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ, ದೀಪಕ್ ಸಿಂಗ್ ಕನ್ನಡ ಕಾರ್ಮಿಕರ ಸಂಘದ ಅಧ್ಯಕ್ಷ ವಾಟಾಳ್ ಮಂಜು ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಗ್ರಹ ದೊರೆತಿರುವ ಸ್ಥಳದಲ್ಲಿ ಕಾಷನ್ ರಿಬ್ಬನ್ ಹಾಕಿ ಸಂರಕ್ಷಿಸಲಾಗಿದ್ದು, ಪಾಲಿಕೆಯ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post