No Result
View All Result
From Complex Revisions to Robotic Spine Care: Narayana Health City Marks 10,000 Surgery Milestone
English Articles

From Complex Revisions to Robotic Spine Care: Narayana Health City Marks 10,000 Surgery Milestone

by ಕಲ್ಪ ನ್ಯೂಸ್
February 24, 2026
0

Kalpa Media House  |  Kalaburagi  | Narayana Health City announced successfully completion of 10,000 orthopaedic surgeries over the past three...

Read moreDetails
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
Samruddhi Kundapura: The Rising Pole Star of Coastal Talent

Samruddhi Kundapura: The Rising Pole Star of Coastal Talent

February 23, 2026
Bharat gen unveils ‘Sutra’ at India AI Impact Summit, an initiative to enhance News Accessibility

Bharat gen unveils ‘Sutra’ at India AI Impact Summit, an initiative to enhance News Accessibility

February 20, 2026
  • Advertise With Us
  • Grievances
  • About Us
  • Contact Us
Wednesday, February 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಆರೋಗ್ಯವಂತ ಸಮಾಜ ರಾಷ್ಟ್ರದ ಪ್ರಗತಿಗೆ ಪೂರಕ: ಸತ್ಯಾತ್ಮ ತೀರ್ಥ ಸ್ವಾಮೀಜಿ ಅಭಿಮತ

ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವದಲ್ಲಿ ಸನ್ನಿಧಿಯ ನೂತನ ವಿನ್ಯಾಸದ ಗೋಡೆ ಅನಾವರಣ | ರಾಜವಂಶಸ್ಥ ಯದುವೀರ ಭಾಗಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 30, 2023
in ಮೈಸೂರು
0
ಆರೋಗ್ಯವಂತ ಸಮಾಜ ರಾಷ್ಟ್ರದ ಪ್ರಗತಿಗೆ ಪೂರಕ: ಸತ್ಯಾತ್ಮ ತೀರ್ಥ ಸ್ವಾಮೀಜಿ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಆರೋಗ್ಯವಂತ ಸಮಾಜ ರಾಷ್ಟ್ರದ ಪ್ರಗತಿಗೆ ಪೂರಕ ಎಂದು ಉತ್ತರಾದಿ ಮಠಾಧೀಶ #UttaradiMutt ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ #SatyatmaThirthaSwamiji ಹೇಳಿದರು.

ನಗರದ ಅಗ್ರಹಾರದಲ್ಲಿರುವ ಉತ್ತರಾದಿಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ’ದ ಶುಭ ಸಂದರ್ಭದಲ್ಲಿ ಮಂಗಳವಾರ ದೇಗುಲದ ನೂತನ ವಿನ್ಯಾಸದ ಗೋಡೆ ಅನಾವರಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು #Health ಸುಸ್ಥಿತಿಯಲ್ಲಿ ಇಟ್ಟುಕೊಂಡವ ಮಾತ್ರ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ಕೊಡಲು ಸಾಧ್ಯ. ಇಂದು ಎಲ್ಲರಿಗೂ ಸಿರಿವಂತಿಕೆ ಇದೆ. ಆದರೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಇಡೀ ಸಮಾಜ ಆರೋಗ್ಯವಂತವಾಗಿ ಇರಬೇಕು ಎಂಬ ಕಾರಣಕ್ಕಾಗಿ ಇಲ್ಲಿ ಧನ್ವಂತಿ ನೆಲೆ ನಿಂತಿದ್ದಾನೆ. ಆತನ ಕೃಪೆಯಿಂದಲೇ ಸಮಾಜ ಮತ್ತು ನಮ್ಮ ನಾಡು ಅಭ್ಯುದಯ ಸಾಧಿಸಲಿ ಎಂದು ಅವರು ಆಶಿಸಿದರು.

ದೇವರ ಕೃಪೆ ಇಲ್ಲದೇ ಏನನ್ನೂ ಮಾಡಲಾಗದು. ಸಮಾಜದ ವಿವಿಧ ಸ್ತರದ ಜನರಿಗೆ ಇಂದು ಆರೋಗ್ಯ ಮತ್ತು ನೆಮ್ಮದಿಯ ಅಗತ್ಯತೆ ಬಹಳವಿದೆ. ಎಲ್ಲ ಸುಖಗಳನ್ನು ನಮ್ಮದಾಗಿಸಿಕೊಳ್ಳಬೇಕು ಎಂದರೆ ಮೊದಲು ದೇಹ ಮತ್ತು ಮನಸ್ಸುಗಳು ಸ್ವಾಸ್ಥವಾಗಿ ಇರಬೇಕು. ಅದಕ್ಕಾಗಿಯೇ ಧ್ಯಾನ, ಪೂಜೆ, ಭಕ್ತಿಯನ್ನು ನಮ್ಮದಾಗಿಸಿಕೊಳ್ಳಬೇಕು. ಮಠ, ಮಂದಿರ ಮತ್ತು ಗುರುಗಳ ವೃಂದಾವನ ಸನ್ನಿಧಾನಗಳು ಈ ರೀತಿಯ ಚಟುವಟಿಕೆಗಳಿಗೆ ಪ್ರೇರಣಾ ಕೇಂದ್ರಗಳಾಗಿರುವುದು ನಮ್ಮೆಲ್ಲರ ಸುಕೃತವೆಂದರು.

ಪ್ರಾದುರ್ಭಾವ ಉತ್ಸವದ ಅಂಗವಾಗಿ ಶ್ರೀಧನ್ವಂತರಿ ದೇವರಿಗೆ ಮಂಗಳವಾರ ವಿಶೇಷ ಅಲಂಕಾರ ಮಾಡಲಾಗಿತ್ತು.

ಗುರುಮನೆ- ಅರಮನೆ ಸಂಬಂಧ ಮುಖ್ಯ
ದೇಗುಲದ ನೂತನ ವಿನ್ಯಾಸದ ಗೋಡೆ ಅನಾವರಣಗೊಳಿಸಿದ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ #YaduveerKrishnadattaChamarajaWadiyar ಮಾತನಾಡಿ, ಗುರುಮನೆ- ಅರಮನೆ ಪವಿತ್ರ ಸಂಬಂಧ ಇದ್ದರೆ ನಾಡು ಸುಭಿಕ್ಷೆಯಾಗಿರುತ್ತದೆ ಎಂದರು.

ನಮ್ಮ ಪರಂಪರೆಯ ಎಲ್ಲ ರಾಜ ಮಹಾರಾಜರೂ ಉತ್ತರಾದಿ ಮಠದ ಗುರುಗಳಿಗೆ ಭಕ್ತಿ, ಗೌರವ ಮತ್ತು ವಿಧೇಯತೆಯನ್ನು ತೋರಿ ರಾಜ್ಯಭಾರ ಮಾಡಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೂ ಸಾಗುತ್ತಿದ್ದೇವೆ. ಉತ್ತರಾದಿ ಮಠದ ಯತಿಗಳ ಮಹಾಕೃಪೆ ನಮ್ಮ ವಂಶದ ಹಿರಿಯರಿಗೆ ವರವಾಗಿ ದೊರಕಿದೆ. ಮೈಸೂರಿನ ಧನ್ವಂತರಿ ಸನ್ನಿಧಿ ಕೃಪೆಯಿಂದ ಎಲ್ಲರಿಗೂ ಸಮಗ್ರ ಆರೋಗ್ಯ ಪ್ರಾಪ್ತಿಯಾಗಲಿ. ಇಲ್ಲಿನ ಧಾರ್ಮಿಕ ಚಟುವಟಿಕೆಗಳಿಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದರು.

ಆಡಳಿತ ವ್ಯವಸ್ಥೆಗೆ ಧರ್ಮದ ಸೂತ್ರಗಳನ್ನು ಅಳವಡಿಸಿಕೊಂಡರೆ ನಾಡು ಸುಭಿಕ್ಷವಾಗಿರುತ್ತದೆ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ನುಡಿದರು. ಮೈಸೂರು #Mysore ಅರಸರು ಈ ಬದ್ಧತೆಯನ್ನು ರೂಢಿಸಿಕೊಂಡ ಕಾರಣ ಇಡೀ ವಿಶ್ವಕ್ಕೆ ಮೈಸೂರು ಮಾದರಿ ರಾಜ್ಯವಾಗಿದೆ. ನಮ್ಮ ಸನಾತನ ಧರ್ಮ, ಸಂಸ್ಕೃತಿಯಲ್ಲಿರುವ ಆಚಾರ, ವಿಚಾರ ಮತ್ತು ಸಂಪ್ರದಾಯಗಳನ್ನು ಪ್ರತಿ ಕ್ಷಣವೂ ನಮ್ಮದಾಗಿಸಿಕೊಳ್ಳಲು ಯತ್ನ ಮಾಡಬೇಕು. ಸಾಮಾನ್ಯ ಪ್ರಜೆಯಿಂದ ಹಿಡಿದು ರಾಜನವರೆಗೆ ಈ ಅರಿವು ಇರಬೇಕು. ಧರ್ಮ ಮಾರ್ಗವನ್ನು ಮರೆತರೆ ನಮ್ಮ ಆರೋಗ್ಯ ಮಾತ್ರವಲ್ಲ, ನಾಡಿನ ಆರೋಗ್ಯವೂ ಕೆಡುತ್ತದೆ. ಧನ್ವಂತರಿ ದೇವನ ಆರಾಧನೆ ಮತ್ತು ಸ್ಮರಣೆಗಳು ನಮ್ಮಲ್ಲಿ ಸ್ವಾಸ್ಥ ಪಾಲನೆಗೆ ಪ್ರೇರಕ ಮತ್ತು ಪೂರಕವಾಗಿದೆ. ನಮ್ಮನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇಡುವ ಧನ್ವಂತರಿಯನ್ನು ಮರೆಯಬಾರದು ಎಂದು ಸ್ವಾಮೀಜಿ ಸಂದೇಶ ನೀಡಿದರು.

ಇದೇ ಸಂದರ್ಭ ಶ್ರೀಗಳು ಯದುವೀರ ಕೃಷ್ಣದತ್ತ ಅವರಿಗೆ ಸನ್ಮಾನಪತ್ರ ಸಮರ್ಪಣೆ ಮಾಡಿ, ಫಲ ಮಂತ್ರಾಕ್ಷತೆ ಇತ್ತು ಗೌರವಿಸಿದರು. ಮಠಕ್ಕೆ ಅನನ್ಯ ಸೇವೆ ಸಲ್ಲಿಸಿದವರಿಗೆ ಗೌರವಿಸಲಾಯಿತು.

ನಂತರ ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಪೂಜೆ, ಧನ್ವಂತರಿಗೆ ಮಹಾಪೂಜೆಯನ್ನು ಶ್ರೀಗಳು ನೆರವೇರಿಸಿದರು. ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಅಗ್ರಹಾರದಲ್ಲಿರುವ #Agrahara ಉತ್ತರಾದಿಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ’ದ ಸಂದರ್ಭದಲ್ಲಿ ಮಂಗಳವಾರ ದೇಗುಲದ ನೂತನ ವಿನ್ಯಾಸದ ಗೋಡೆಯನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣಗೊಳಿಸಿದರು. ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2023/05/VID-20230516-WA0005-1.mp4
Tags: Kannada News WebsiteLatest News KannadamysoreSri Satyasandha ThirtharuUttaradi MuttYaduveer Krishnadatta Chamaraja Wadiyarಅಗ್ರಹಾರಉತ್ತರಾದಿ ಮಠಮಹಾರಾಜಮೈಸೂರುಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಶ್ರೀ ಧನ್ವಂತ್ರಿ ಸನ್ನಿಧಾನಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
Share197Tweet123Send
Previous Post

ಟಿಟಿಡಿ ಮಾಸಪತ್ರಿಕೆ ಸಪ್ತಗಿರಿ ಸಂಪಾದಕೀಯ ಸಲಹಾ ಮಂಡಳಿಗೆ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಆಯ್ಕೆ

Next Post

ಮೇ 31ರಂದು ಎಸಿಪಿ ಡಾ. ಬಸವರಾಜು ಅವರಿಗೆ ಗೌರವಾಭಿನಂದನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮೇ 31ರಂದು ಎಸಿಪಿ ಡಾ. ಬಸವರಾಜು ಅವರಿಗೆ ಗೌರವಾಭಿನಂದನೆ

ಮೇ 31ರಂದು ಎಸಿಪಿ ಡಾ. ಬಸವರಾಜು ಅವರಿಗೆ ಗೌರವಾಭಿನಂದನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಮಾಜಿ ಸಿಎಂ ಯಡಿಯೂರಪ್ಪ ಜನ್ಮದಿನ | ಫೆ.27ರಂದು ಶಿಕಾರಿಪುರದಲ್ಲಿ ಹಲವು ಕಾರ್ಯಕ್ರಮ | ಗುರುಮೂರ್ತಿ

ಮಾಜಿ ಸಿಎಂ ಯಡಿಯೂರಪ್ಪ ಜನ್ಮದಿನ | ಫೆ.27ರಂದು ಶಿಕಾರಿಪುರದಲ್ಲಿ ಹಲವು ಕಾರ್ಯಕ್ರಮ | ಗುರುಮೂರ್ತಿ

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
ಪುರಾಣ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಪುರಾಣ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ

February 24, 2026
ಫೆ.28ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

ಫೆ.28ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

February 24, 2026
ಕಾಂಪ್ಲೆಕ್ಸ್ ರಿ-ಸರ್ಜರಿ ಟು ರೋಬೋಟಿಕ್ ಸ್ಪೈನಲ್ ಸರ್ಜರಿ | ನಾರಾಯಣ ಹೆಲ್ತ್ ಸಿಟಿಯಿಂದ 10 ಸಾವಿರ ಸರ್ಜರಿ

ಕಾಂಪ್ಲೆಕ್ಸ್ ರಿ-ಸರ್ಜರಿ ಟು ರೋಬೋಟಿಕ್ ಸ್ಪೈನಲ್ ಸರ್ಜರಿ | ನಾರಾಯಣ ಹೆಲ್ತ್ ಸಿಟಿಯಿಂದ 10 ಸಾವಿರ ಸರ್ಜರಿ

February 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL