ಬಹುಶಃ ಇಂದು ಕರಾವಳಿ ಭಾಗದಲ್ಲಿ ಹಾಸ್ಯ ಎಂದಾಕ್ಷಣ ಗುರುತಿಸುವ ಸಾಲುಗಳಲ್ಲಿ ಎ.ಕೆ. ಶೆಟ್ಟಿ ನಡೂರು ಹೆಸರು ಕೇಳಿ ಬರುತ್ತದೆ. ಇವರ ಸಂಪೂರ್ಣ ಹೆಸರು ಇನ್ನು ಯಾರಿಗೂ ತಿಳಿದಿಲ್ಲ. ಅಕ್ಷಯ್ ಶೆಟ್ಟಿ ಅಂದರೆ ಯಾರು ಎನ್ನುತ್ತಾರೆ? ಅದೇ ಎ.ಕೆ. ಶೆಟ್ಟಿ ನಡೂರು ಅಂದರೇ ಹೋ ಕರಾವಳಿ ವಾಟ್ಸಾಪ್ ಹೀರೋ ಅಲ್ವ ಅಂತಾರೇ.
ಈತ ಚಿಕ್ಕ ವಯಸ್ಸಿನಲ್ಲಿಯೇ ಹಾಸ್ಯಪ್ರಜ್ಞೆಯನ್ನು ಮೈಗೂಡಿಸಿಕೊಂಡ ಹುಡುಗ. ಪ್ರಾರಂಭದಲ್ಲಿ ತಾನು ಕಲಿತ ಶಾಲೆಯಲ್ಲಿ ಮಿಮಿಕ್ರಿಯನ್ನು ಕಾರ್ಯಕ್ರಮ ನೀಡುತ್ತಾ ಬಂದು, ತನ್ನೂರ ಗಣೇಶ್ ಚತುರ್ಥಿ ಹೀಗೆ ಹಲವಾರು ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಿದ ಹುಡುಗ ಅದೇಗೇ ಜನಮೆಚ್ಚುಗೆಗೆ ಪಾತ್ರರಾದರು ಅನ್ನೊದೇ ನಿಜಕ್ಕೂ ಹೆಮ್ಮೆಯ ವಿಷಯ.
ತನ್ನ ಹನ್ನೆರಡನೆಯ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಕಂಗಾಲಾದ ಕುಟುಂಬವೊಂದರಲ್ಲಿ ಬೆಳೆದು ಬಂದು, ಶಾಲಾ ರಜೆಯಲ್ಲಿ ಹೊಟೇಲ್ ಕೆಲಸ, ಪೈಂಟಿಂಗ್ ಹೀಗೆ ತನ್ನ ಕಾಲೇಜು ಶಿಕ್ಷಣವನ್ನು ಮುಗಿಸಿದರು.
ಕಳೆದ ವರ್ಷ ಪ್ಲಾಸ್ಟಿಕ್ ಮುಕ್ತಕ್ಕಾಗಿ ಕಾರ್ಕಳ ಪಂಚಾಯ್ತಿಗೆ ಧ್ವನಿ ನೀಡಿದ ಇವರ ಧ್ವನಿ ರಾಜ್ಯ ಎಸ್’ಬಿಎಂ ಮಟ್ಟದ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಚುನಾವಣಾ ಜಾಗೃತಿಗೂ ಧ್ವನಿ ನೀಡಿದ್ದಾರೆ.
ಎಲ್ಲೇ ಯಾರೇ ಸಿಗಲಿ ಎಲ್ಲರನ್ನು ಪ್ರೀತಿಯಿಂದ ಮಾತಾನಾಡಿಸಿ, ಸೆಲ್ಫಿ ಕೇಳುವ ಅಭಿಮಾನಿಗಳಿಗೆ ಪೋಟೋ ನೀಡಿ, ಬಾಯ್ತುಂಬ ಮಾತಾನಾಡಿಸುವ ಮನೋಭಾವ ಇವರದ್ದು. ಅಲ್ಲದೆ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಗಳಲ್ಲಿ ಒಂದಿಷ್ಟು ಅಭಿಮಾನಿ ಬಳಗದ ಗ್ರೂಪ್’ಗಳನ್ನು ಇವರ ಅಭಿಮಾನಿಗಳು ಕಟ್ಟಿದ್ದಾರೆ. ಇಂತಹ ಮಗನಿಗೆ ಜನ್ಮನೀಡಿದ ತಂದೆ ದಿಪ್ರಶಾಂತ ಶೆಟ್ಟಿ, ತಾಯಿ ಕಸ್ತೂರಿ ಶೆಟ್ಟಿ ನಿಜಕ್ಕೂ ಧನ್ಯರು.
ಇವತ್ತು ಎಕೆ ಶೆಟ್ಟಿ ನಡೂರು ನೂರಾರು ಕಡೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಮಿಮಿಕ್ರಿ, ಹಾಸ್ಯ, ವೀಕ್ಷಕ ವಿವರಣೆ, ನಿರೂಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಇವರು ತಾನೇ ಕಷ್ಟಪಟ್ಟು ವೇದಿಕೆಯನ್ನು ರಚಿಸಿದವರು. ಪ್ರಾರಂಭದಲ್ಲಿ ಯಾವುದೇ ವ್ಯಕ್ತಿಗಳು ಸಹ ವೇದಿಕೆಯನ್ನು ನೀಡಿದವರಲ್ಲ. ಕೆಲವರು ಎಕೆ ಶೆಟ್ಟಿ ನಡೂರು ಕಲಾವಿದನನ್ನು ಬೆಳೆಸಿದ್ದು ನಾನೇ ಅನ್ನೋ ಸುಳ್ಳು ಮಾತುಗಳು ಕೇಳಿ ಬಂದಿದ್ದವು.
ಇಂದು ಎಕೆ ಶೆಟ್ಟಿ ನೂಡೂರು ಅನ್ನೋ ಪ್ರತಿಭೆ ಬೆಳೆದು ಮರವಾಗಿದ್ದಾರೆ. ಇತ್ತೀಚಿಗೆ ಇವರು ಮಾಡುತ್ತಿರುವ ಹೊತಾಪತಿಗೊಂದ್ ಮಾತ್ ಸಂಚಿಕೆ ಬಹಳಷ್ಟು ಪ್ರಸಿದ್ದಿ ಪಡೆಯುತ್ತಿದೆ. ಸಾಮಾಜಿಕ ಜಾಲತಾಣವಾದ ಯೂಟ್ಯೂಬ್, ಫೇಸ್’ಬುಕ್, ಇನ್ಟ್ರಾಗ್ರಾಂನಲ್ಲಿ ಅಓ ಖಛಿಠಿಠಿ ಘ್ಠ್ಟೆ ಅಂತ ಟೈಪ್ ಮಾಡಿದರೇ ಇವರ ವೀಡಿಯೋ ಹಾಗೂ ಕಾರ್ಯಕ್ರಮದ ಪೋಸ್ಟ್’ಗಳು ಕಾಣ ಸಿಗುತ್ತವೆ.
ಹ್ವಾಯ್ ನಾನ್ ಮರ್ರೆ ಎಕೆ ಶೆಟ್ಟಿ ನಡೂರು, ಹಿಂಗಾರೇ ಹೆಂಗೇ ಗಂಡ್ಸೇ ಇವರ ಹೆಸರಾಂತ ಸಿಗ್ನೇಚರ್ ಡೈಲಾಗ್’ಗಳು…
ಹ್ವಾಯ್ ನಾನ್ ಮರ್ರೆ ನಿಮ್ಮ ಕೊಂಗಾಟದ್ ಗಂಡ್ ಎಕೆ ಶೆಟ್ಟಿ ನಡೂರ್.
ಹೀಂಗಾರೆ ಹೆಂಗೆ ಗಂಡ್ಸೆ..
ಊರ್ಬದಿ ವಾರ್ತೆಗೆ ಸ್ವಾಗತ ನಾನಿದ್ದೇನೆ ಎಕೆ ಶೆಟ್ಟಿ ನಡೂರು..
ಹೀಗೆ ಮಾತು ಆರಂಬಿಸಿದರೆ ಶಿಳ್ಳೆ ಚಪ್ಪಾಳೆಗಳ ಸುರಿಮಳೆ ಆರಂಭವಾಗುತ್ತದೆ.
ವಿಶೇಷವಾಗಿ ಇವರ ಮಿಮಿಕ್ರಿ ನೋಡಿರುತ್ತೀರಿ ಹಲವಾರು ವ್ಯಕ್ತಿಗಳ ಧ್ವನಿಯನ್ನು ಅನುಕರಣೆ ಮಾಡಿ ಒಂದು ಕಾರ್ಯಕ್ರಮಕ್ಕೆ ತುಂಬಾ ಜನ ಗಣ್ಯವ್ಯಕ್ತಿಗಳು ಬಂದು ಮಾತನಾಡಿದಂತೆ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸುತ್ತಾರೆ.
ಅಲ್ಲದೆ ಹಾಸ್ಯದ ಹೊನಲಿನಲ್ಲಿ ಪ್ರೇಕ್ಷಕರನ್ನು ತೇಲಾಡಿಸುವ ಕಲಾವಿದರು ಇವರು. ಉದ್ಯೋಗಕ್ಕಾಗಿ ಈಗ ತಮ್ಮ ಊರಿನಲ್ಲಿಯೇ ಎಕೆ ಡಿಜಿಟಲ್ ರೆಕಾರ್ಡಿಂಗ್ ಸ್ಟುಡಿಯೋ ಆರಂಭಿಸಿ ಇನ್ನು ಹೆಚ್ಚು ನಿಮ್ಮನ್ನೆಲ್ಲ ರಂಜಿಸುತ್ತಾ, ಈವರೆಗೆ ಸುಮಾರು 400 ಕ್ಕೂ ಹೆಚ್ಚಿನ ಕಾರ್ಯಕ್ರಮಕ್ಕೆ ಧ್ವನಿಯಾಗಿದ್ದಾರೆ.
ಅಲ್ಲದೆ ಹಲವಾರು ವೇದಿಕೆಗಳಲ್ಲಿ ಭಾಗವಹಿಸಿ ಜನರನ್ನು ಮನರಂಜಿಸುತ್ತಾ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದವರು.
ಬಹುಮುಖ ಪ್ರತಿಭೆ ಎ.ಕೆ. ಶೆಟ್ಟಿ ನಡೂರು ಯಾವತ್ತಿದ್ರು ಕರಾವಳಿ ವಾಟ್ಸಾಪ್ ಹೀರೋನೇ.
ಇಲ್ಲಿದೇ ನೋಡಿ ಎ.ಕೆ. ಶೆಟ್ಟಿ ಅವರ ಸಾಧನೆಯ ಹಾದಿ…
1. ಇದುವರೆಗೆ 400ಕ್ಕೂ ಅಧಿಕ ಕಾರ್ಯಕ್ರಮಗಳಿಗೆ ಧ್ವನಿ ನೀಡಿದ ಹೆಮ್ಮೆಯ ಕಲಾವಿದ
2. ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ತನ್ನ ಅದ್ಬುತ ಶೈಲಿಯಲ್ಲಿ ವಿಭಿನ್ನ ರೀತಿಯಲ್ಲಿ ಧ್ವನಿ ನೀಡಿ ಜನರಿಗೆ ಯಕ್ಷಗಾನದ ಮಹತ್ವ ತಿಳಿಸಿದ ಕಲಾವಿದ
3. ಕ್ರಿಕೆಟ್ ಕಾಮೆಂಟರಿ ಸೇರಿದಂತೆ, ಇನ್ನಿತರ ಕಾಮೆಂಟರಿ ಜೊತೆ ಕ್ರೀಡಾ ವೀಕ್ಷಕ ವಿವರಣೆಗಾರ
4. ಅದ್ಭುತ ಮಿಮಿಕ್ರಿ ಕಲಾವಿದ ಜೊತೆಗೆ ಹಾಸ್ಯ ಕಲಾವಿದ
5. ಹೆಮ್ಮೆಯ ನಿರೂಪಣೆಗಾರ
6. ವಾಟ್ಸಾಪ್’ನಲ್ಲಿ ಕುಂದಾಪುರ ಕನ್ನಡದಲ್ಲೂ ನಮ್ಮನ್ನು ಇಂದಿಗೂ ನಗಿಸುತ್ತಿರುವ ಕಲಾವಿದ
7. ಅದೆಷ್ಟೋ ಸಮಾಜಮುಖಿ ಕಾರ್ಯಕ್ರಮಕ್ಕೆ ಉಚಿತವಾಗಿ ಧ್ವನಿ ನೀಡುತ್ತಿರುವ ಕಲಾ ಸೇವಕ
8. ಎಸ್’ಬಿಎಂನ ರಾಜ್ಯಮಟ್ಟದಲ್ಲಿ ನಮ್ಮ ಎ.ಕೆ. ಶೆಟ್ಟಿ ನಡೂರು ಧ್ವನಿ ಮೆಚ್ಚುಗೆಗೆ ಪಾತ್ರ
9. ಸರ್ಕಾರದ ಪ್ಲಾಸ್ಟಿಕ್ ನಿಷೇಧಕ್ಕೆ ಕರಾವಳಿಯಾದ್ಯಂತ ಧ್ವನಿ ನೀಡಿದ ಹೆಮ್ಮೆಯ ಕಲಾವಿದ
10. 2019ರ ಲೋಕಸಭಾ ಚುನಾವಣೆಗೆ ಧ್ವನಿ ನೀಡಿದ ಕಲಾವಿದ ಈ ಎ.ಕೆ. ಶೆಟ್ಟಿ ನಡೂರು
11. ತನ್ನ ಕಾರ್ಯಕ್ರಮದ ಸ್ವಲ್ಪ ಹಣವನ್ನು ಅನಾರೋಗ್ಯ ಪೀಡಿತರಿಗೆ ನೀಡುತ್ತಾ ಬಂದಿರುವ ಎ.ಕೆ. ಶೆಟ್ಟಿ ನಡೂರು, ಉಚಿತವಾಗಿ ಧ್ವನಿ ನೀಡುತ್ತಿರುತ್ತಾರೆ.
12. ಸನ್ಮಾನ, ಪುರಸ್ಕಾರ ಹೀಗೆ ಬಹಳಷ್ಟು ಮೆಚ್ಚುಗೆಗೆ ಪಾತ್ರವಾದ ಎಕೆ ಶೆಟ್ಟಿ ನಡೂರು ಯಾವತ್ತಿದ್ರೂ ಕರಾವಳಿ ವಾಟ್ಸಾಪ್ ಹೀರೋನೇ…
ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಇವರ ಜೊತೆ ಇರಲಿ. ಕಲೆಯನ್ನು ಕಲಾವಿದರನ್ನು ಪ್ರೋತ್ಸಾಹಿಸಿ ಗೌರವಿಸಿ
ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಕಲಾವಿದನ ಮಾಹಿತಿ, ಚಿತ್ರಕೃಪೆ, ವೀಡಿಯೋ ಕೃಪೆ: ಎ.ಕೆ. ಶೆಟ್ಟಿ ನಡೂರು ಹಿತೈಷಿಗಳು
Discussion about this post