ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕುಕ್ಕೆ ಸುಬ್ರಹ್ಮಣ್ಯ: ಪೂಜೆಗಾಗಿ ತೆರಳುತ್ತಿದ್ದ ಇಲ್ಲಿನ ಆದಿ ಸುಬ್ರಹ್ಮಣ್ಯ ದೇವಾಲಯದ ಅರ್ಚಕ ಶ್ರೀನಿವಾಸ್ ಎನ್ನುವವರ ಮೇಲೆ ಪೊಲೀಸ್ ಪೇದೆಯೊಬ್ಬರು ಲಾಠಿ ಪ್ರಹಾರ ನಡೆಸಿದ್ದು, ಘಟನೆ ಸಂಬಂಧ ತನಿಖೆಗೆ ಒತ್ತಾಯಿಸಲಾಗಿದೆ.
ಈ ವಿಚಾರವನ್ನು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು ತಮ್ಮ ಫೇಸ್’ಬುಕ್’ನಲ್ಲಿ ಹಂಚಿಕೊಂಡಿದ್ದು, ಆನಂತರ ಈ ಸುದ್ದಿ ವ್ಯಾಪಕವಾಗಿ ಹರಡಿದೆ.
ಆದಿ ಸುಬ್ರಹ್ಮಣ್ಯದ ಅರ್ಚಕರು ಶ್ರೀನಿವಾಸ್ ಇವರು ಶನಿವಾರ ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ದೇವಳದ ಕೀ ಸಹಿತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಶಂಕರ್ ಎನ್ನುವ ಕಾನ್ಸ್’ಟೇಬಲ್ ಅವರು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.
ಪ್ರಕಾಶ್ ಅಮ್ಮಣ್ಣಾಯ ಏನೆನ್ನುತ್ತಾರೆ?
ಸರಕಾರ ಒಂದೋ ದೇವಸ್ಥಾನಗಳಲ್ಲಿ ಈ ಸಂದಿಗ್ಧ ಸಮಯದಲ್ಲಿ ಪೂಜೆ ನಿಲ್ಲಿಸಲು ಆದೇಶ ನೀಡಬೇಕು. ಇಲ್ಲವೇ ಒಬ್ಬ ಅರ್ಚಕರಿಗೆ ಮಾತ್ರ ಸಂಕ್ಷಿಪ್ತ ಪೂಜೆ ಮಾಡಲು ಅವಕಾಶ ನೀಡಿ, ಭದ್ರತೆ ಕೊಡಬೇಕು.ಹೊಡೆಯುವುದು ಬಡಿಯುವುದು ಮಾಡುವುದರಿಂದ ಶಾಂತಿ ಭಂಗವೇ ಹೊರತು ಇನ್ನೇನಾಗಲ್ಲ.
ಅರ್ಚಕರನ್ನು ಬೈಯ್ದದಲ್ಲದೆ, ಅರ್ಚಕರು ತಾನು ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತ ಇರುವುದಾಗಿ ದೇವಳದ ಕೀಯನ್ನ ತೋರಿಸಿ ಹೇಳಿದರೂ ಬಿಡದ ಈ ಪೋಲೀಸ್ ಸಿಬ್ಬಂದಿ ಅರ್ಚಕರ ಮೇಲೆ ತನ್ನ ಕೈಯಲ್ಲಿದ್ದ ಕೋಲಿನಿಂದ ಬಾಸುಂಡೆ ಏಳುವಂತೆ ಹಲ್ಲೆ ನಡೆಸಿದ್ದಾರೆ.
ಜಿಲ್ಲೆಯ ಖ್ಯಾತ ದೇವಳದ ಮುಖ್ಯ ಅರ್ಚಕರು ತನ್ನ ದೈನಂದಿನ ಕಾರ್ಯ ನಡೆಸಲು ತೆರಳುವಾಗಲೂ ಈ ರೀತಿ ಅಮಾನುಷವಾಗಿ ಹಲ್ಲೆಗೈದ ಈ ಪೋಲೀಸ್ ಸಿಬ್ಬಂದಿ ಸ್ಥಳೀಯರೇ ಆಗಿದ್ದು ಗುರುತು ಇದ್ದರೂ ಈ ರೀತಿ ವರ್ತಿಸಿರುವ ಘಟನೆಯನ್ನ ವಿಪ್ರ ಸಂಘಟನೆ ಉಗ್ರವಾಗಿ ಖಂಡಿಸಿದೆ.
ಅನ್ಯಾಯವಾಗಿ ಹಲ್ಲೆ ನಡೆಸಿದ ಪೋಲೀಸ್ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡಬೇಕಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರನ್ನು ಮತ್ತು ಜಿಲ್ಲಾಧಿಕಾರಿಯವರಲ್ಲಿ ವಿಪ್ರ ಪರಿವಾರ ಆಗ್ರಹಿಸಿದೆ.
Get in Touch With Us info@kalpa.news Whatsapp: 9481252093
Discussion about this post