No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Friday, October 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಂಗೀತಾಸಕ್ತ ರಸಿಕ ಮನಸುಗಳ ಬಾಲ್ಯ, ಯೌವನದ ಮಧುರ ಕ್ಷಣಗಳ ನೆನಪಿಸಿದ ಸಂಗೀತ ಸುಧೆ

kalpa News by kalpa News
February 12, 2025
in Special Articles
0
ಸಂಗೀತಾಸಕ್ತ ರಸಿಕ ಮನಸುಗಳ ಬಾಲ್ಯ, ಯೌವನದ ಮಧುರ ಕ್ಷಣಗಳ ನೆನಪಿಸಿದ ಸಂಗೀತ ಸುಧೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ವಿಶೇಷ ಲೇಖನ: ಮೈತ್ರೇಯಿ ಆದಿತ್ಯಪ್ರಸಾದ್  |

ಅಭಿರುಚಿಯ ರುಚಿಯೇ ಹಾಗೆ…. ವಿಭಿನ್ನವಾದ ಸಂಗತಿಗಳು, ಸಾಹಿತ್ಯ ಲೋಕದ ಅದ್ಭುತವಾದ ವಿಚಾರಗಳಲ್ಲಿ ಒಂದಾದ ಶ್ರೀ ಶ್ರೀಧರ ಭಗವಾನರ ದತ್ತರಾಜಸ್ತವವನ್ನು ನಮ್ಮೆದುರಿಗೆ ಮಹಾಮಹೋಪಾಧ್ಯಾಯ ಡಾ.ಎಸ್. ರಂಗನಾಥ್ ಅವರ ವಿದ್ವತ್ ಪೂರ್ಣ ನುಡಿಗಳಲ್ಲಿ ಕಳೆದ ಒಂದು ವಾರದಿಂದ ಕೇಳುವಂತೆ ಮಾಡಿದ್ದು ಒಂದೆಡೆಯಾದರೆ…ಮತ್ತೊಂದೆಡೆ ಸಂಗೀತ ಸುಧೆ ಹರಿಸಿ ಮನತಣಿಯುವಂತೆ ಮಾಡಿದುದು.

ನಿಜ…. ಮನಕ್ಕೆ ಮುದ ನೀಡುವ ವಿಷಯಗಳಲ್ಲಿ ಸಂಗೀತಕ್ಕೆ ಮೊದಲನೆಯ ಸ್ಥಾನ. ಅವು ಭಕ್ತಿ, ಭಾವ, ಚಿತ್ರ ಯಾವ ಗೀತೆಯಾದರೂ ಸರಿ ಎಲ್ಲವೂ ಅಮೃತದ ಸುಧೆ ಹರಿಸಿದಂತೆಯೇ…. ಇಷ್ಟೆಲ್ಲಾ ಬರೆಯಲು ಕಾರಣ ಏನೆಂದರೆ ಯಾವಾಗಲೂ ಕಾರ್ಯಕ್ರಮ ನೋಡಿದ ತಕ್ಷಣ ಕಲಾವಿದರನ್ನು ಮಾತಾಡಿಸಿ ಮನದ ಸಂತೋಷವನ್ನು ಅವರಲ್ಲಿಯೂ ವ್ಯಕ್ತಪಡಿಸಿ ಬರುತ್ತಿದ್ದ ನಾನು ಕಾರ್ಯದೊತ್ತಡದಿಂದ ನಿನ್ನೆ ರಂಗಮಂದಿರದಿಂದ ಹಾಗೇ ಬಂದುಬಿಟ್ಟೆ… ಆದರೆ ಮನಸು ಮಾತ್ರ ಕಾರ್ಯಕ್ರಮದ ಹಾಡುಗಳೇ ಗುನುಗುವಂತೆ ಮಾಡಿದ್ದವು. ನಿಜಕ್ಕೂ ಮನಸೊಂದು ಭಾವನಾ ಲೋಕದಲ್ಲಿ ವಿಹರಿಸುವಂತೆ ಮಾಡಿತ್ತು.Also Read>> Karnataka Energy Department Secures ₹3.43 Lakh Crore Investment in Renewable Energy Sector

ಕಾರ್ಯಕ್ರಮಕ್ಕೆ ಕಳೆಗಟ್ಟುವಂತೆ ಮಾಡಿದ್ದು ನಿಜಕ್ಕೂ ಆಯೋಜಕರೇ. ಏಕೆಂದರೆ ಯಾವುದೇ ಸಭಾಕಾರ್ಯಕ್ರಮಗಳಿಲ್ಲದೇ ನೇರವಾಗಿ ಸಂಗೀತ ಸುಧೆ ಹರಿಯುವಂತೆ ಮಾಡಿದ್ದು ಒಂದು ಕಾರಣವಾದರೆ ಮತ್ತೊಂದು ಅವರು ಆಯ್ಕೆ ಮಾಡಿಕೊಂಡ ವಿಷಯ “ಬೆಳ್ಳಿಮೋಡದ ಬಂಗಾರದ ಹಾಡು”.
ಅವುಗಳೆಂದರೆ ಕಾದಂಬರಿ ಆಧಾರಿತ ಹಾಗೂ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡಿ ಚಿತ್ರಬ್ರಹ್ಮನೆಂದೇ ಖ್ಯಾತಿಯಾದ ಪುಟ್ಟಣ್ಣ ಕಣಗಾಲ್ ಹಿಟ್ಸ್. ಇದಕ್ಕೆ ಸಾರಥ್ಯ ಖ್ಯಾತ ಸಂಗೀತ ಕಲಾವಿದ ಹಾಗೂ ಶಿವಮೊಗ್ಗದ ಹೆಮ್ಮೆಯ ಪ್ರತಿಭೆ ಶ್ರೀ ದೀಪಕ್ ಜಯಶೀಲನ್ ಅವರದಾಗಿತ್ತು. ಇನ್ನೂ ಹಾಡುಗಾರರಂತೂ ಶ್ರೀಮತಿ ಸುರೇಖಾ ಹೆಗಡೆ, ಶ್ರೀಮತಿ ಶ್ರುತಿ ರಾಘವೇಂದ್ರನ್, ಶ್ರೀ ಮನೋಜವಂ ಆತ್ರೇಯ ಹಾಗೂ ಶ್ರೀ ಪಾರ್ಥ ಚಿರಂತನ್ ನಮಗೆಲ್ಲಾ ಜೇನಸುಧೆ ಹರಿಸಿದವರೇ ಆದರು. ಇವರೆಲ್ಲರ ಹಾಡಿಗೆ ನವಿರಾದಂತಹ ನಿರೂಪಣೆ ಮಾಡಿ ಆ ಹಾಡಿನ ಒಟ್ಟು ಜೀವಾಳವನ್ನು ಪರಿಚಯಿಸುವಂತೆ ಮಾಡಿದ್ದು ನಮ್ಮ ವಿನಯಣ್ಣ. ನಿರ್ದೇಶಕರ ಪರಿಚಯ ಮಾಡಿಸುತ್ತಲೇ, ಹಾಡಿನ ಸೂಕ್ಷ್ಮತೆ, ಗಮನಿಸಬೇಕಾದ ಅಂಶಗಳು, ಆಗಿನ ಹೆಮ್ಮೆ, ಯಾವ ಕಾರಣಕ್ಕಾಗಿ ಆ ಹಾಡು ಶ್ರೇಷ್ಠ, ಅದರ ಅಂತರಂಗ ಎಲ್ಲವನ್ನೂ ಸವಿಸ್ತಾರವಾಗಿ ತಮ್ಮ ಪ್ರೌಢ ಚಿಂತನೆಯ ಸಾಹಿತ್ಯದ ಪರಿಭಾಷೆಯಲ್ಲಿ ಹೆಚ್ಚು ಅಲ್ಲದ ಕಡಿಮೆಯೂ ಎನಿಸದ ರೀತಿಯಲ್ಲಿ ಹಾಡಿನ ಜೀವಾಳವನ್ನು ಅದ್ಭುತವಾಗಿ ನಮಗೆ ಕಟ್ಟಿಕೊಟ್ಟಿದ್ದು ವಿನಯಣ್ಣನ ಹೆಚ್ಚುಗಾರಿಕೆಯೇ ಸರಿ. ವಿನಯ್ ಶಿವಮೊಗ್ಗ, ನಿಜಕ್ಕೂ ಮನೋಜವಂ ಹೇಳಿದಂತೆ ಅವರು ದಾರದಂತೆ ಕೆಲಸ ಮಾಡಿದ್ದಾರೆ. ಹೂ ಪೋಣಿಸಿದ ದಾರ ಮೇಲ್ನೋಟಕ್ಕೆ ಕಾಣಿಸದೇ ಹೋದರೂ ಹಾರಕ್ಕೆ ದಾರವೆಂಬಂತೆ ಸರಿಯಾದ ಸೂತ್ರಧಾರರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ಹಾಡುಗಳಿಗೆ ಸರಿಯಾಗಿ ಸಾಥ್ ನೀಡಿದವರು ಒಂದೆಡೆಯಾದರೆ ಅದರ ಇಂಪನ್ನು ಸರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಸೌಂಡ್ ಸಿಸ್ಟಮ್ ಎಫೆಕ್ಟ್ ಬಹುಮುಖ್ಯ. ಆ ತಂತ್ರಜ್ಞಾನ ಚೆನ್ನಾಗಿ ಅರಿತು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಚಿನ್ನು ಸೌಂಡ್ ಸಿಸ್ಟಮ್ ನ ದರ್ಶನ್. ಏಕೆಂದರೆ ಇಂಪಾಗಿ ಹಾಡಿದ್ದನ್ನು ಆ ಸ್ವರಗಳ ಏರಿಳಿತ ಎಲ್ಲವೂ ಅಷ್ಟೇ ನಿಖರವಾಗಿ ಕೇಳುಗರ ಕಿವಿ ತಲುಪಿತು. ಇಲ್ಲಿ ಇನ್ನೊಂದು ಮಾತು ಹೇಳಲೇಬೇಕು. ಹಾಡು ಹೇಳುವಾಗ ಹಾಡಿನ ಕೊಂಚ ತುಣುಕು ತೋರಿಸಿ ಉಳಿದಂತೆ ಸಾಹಿತ್ಯ ರಚನಕಾರರು, ಸಂಗೀತ ನಿರ್ದೇಶಕರು, ಹಾಡಿದ ಹಿನ್ನಲೆ ಗಾಯಕರ ಫೋಟೋಗಳನ್ನ LED ವಾಲ್ ನಲ್ಲಿ ತೋರಿಸಿ ಅನೇಕರಿಗೆ ಕಣಗಾಲ್ ಪ್ರಭಾಕರ್ ಶಾಸ್ತ್ರಿಯಂತವರ ದರ್ಶನ ಮಾಡಿಸುವಲ್ಲಿ ಯಶಸ್ವಿಯಾದರು.ಬರೆಯಲೇ ಬೇಕಾದ ಪ್ರಮುಖ ವಿಷಯವೆಂದರೆ ಆಯ್ಕೆ ಮಾಡಿಕೊಂಡ ಹಾಡುಗಳು. ನನ್ನ ಆಲ್ ಟೈಮ್ ಫೇವರಿಟ್ ಹಾಡಾದ ಗೆಳತೀ ಓ ಗೆಳತೀ.., ಕವಿ ಕಂಡ ಕಾವ್ಯಗಳಂತೆ ಇರುವ ವರಕವಿಯ ಮೂಡಲ ಮನೆಯ ಮುತ್ತಿನ ನೀರಿನ… ಗಗನವು ಎಲ್ಲೋ ಭೂಮಿಯು ಎಲ್ಲೋ, ಹದಿನಾಲ್ಕು ವರ್ಷ ವನವಾಸದಿಂದ…. ನಾಗರಹಾವಿನ ಹಾವಿನ ದ್ವೇಷ ಹನ್ನೆರಡು ವರುಷ, ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ, ನೀನೇ ಸಾಕಿದಾ ಗಿಣಿ, ವಿರಹಿಗಳ ಧ್ಯೇಯಗೀತೆಯಾದ ಅಥವಾ ಮನದಾಳದ ಮಾತಿನಂತಾದ ವಿರಹ ನೋವು ನೂರು ತರಹ…. ಮನಸಿನ ಅಭಿರುಚಿಯನ್ನು ಉದ್ದೀಪನಗೊಳಿಸಿ ಪ್ರೇರೇಪಣೆ ಕೊಡುವ ಹಾಡಾದ ಪಂಚಮ ವೇದ ಪ್ರೇಮದ ನಾದವೇ ಮೊದಲಾದ ಹಾಡುಗಳು ಒಂದಾದ ಮೇಲೊಂದು ಸಂಗೀತ ರಸಿಕರನ್ನು ತಮ್ಮ ಕಳೆದ ಬಾಲ್ಯ, ಯೌವನದ ದಿನಗಳಿಗೆ ಕೊಂಡೋಯ್ದದ್ದಂತೂ ನಿಜ. ಈ ಸಂಗೀತ ಸುಧೆ ಹರಿಸಲು ಕಾರಣೀಭೂತರಾದ ಆಯೋಜಕ, ಪ್ರಾಯೋಜಕರೆಲ್ಲರಿಗೂ ಎಲ್ಲ ಸಂಗೀತಾಸಕ್ತ ರಸಿಕ ಮನಸುಗಳ ಪರವಾಗಿ ಅನಂತಾನಂತ ಧನ್ಯವಾದಗಳು.
ಚಿತ್ರಕೃಪೆ : ಆದಿತ್ಯಪ್ರಸಾದ್ ಎಂ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteLatest News KannadaLocal NewsMalnad NewsShimogaShivamoggaShivamogga Newsಅಭಿರುಚಿದತ್ತರಾಜಬೆಳ್ಳಿಮೋಡಮೈತ್ರೇಯಿ ಆದಿತ್ಯಪ್ರಸಾದ್ಶಿವಮೊಗ್ಗಶ್ರೀಧರ ಭಗವಾನಸಂಗೀತಸಾಹಿತ್ಯ ಲೋಕ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭಾರತದ ಆರ್ಥಿಕತೆಯ ಪರಿವರ್ತನೆಯಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ: ಸಿಎಂ

Next Post

ಬೆರಳತುದಿಯಲ್ಲಿ 30 ಇಲಾಖೆಗಳ 150 ಸೇವೆ | ಏಕಗವಾಕ್ಷಿ ಪೋರ್ಟಲ್ ಗೆ ಸಿಎಂ ಚಾಲನೆ

kalpa News

kalpa News

Next Post
ಬೆರಳತುದಿಯಲ್ಲಿ 30 ಇಲಾಖೆಗಳ 150 ಸೇವೆ | ಏಕಗವಾಕ್ಷಿ ಪೋರ್ಟಲ್ ಗೆ ಸಿಎಂ ಚಾಲನೆ

ಬೆರಳತುದಿಯಲ್ಲಿ 30 ಇಲಾಖೆಗಳ 150 ಸೇವೆ | ಏಕಗವಾಕ್ಷಿ ಪೋರ್ಟಲ್ ಗೆ ಸಿಎಂ ಚಾಲನೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL