ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭಾನ್ವಿತ ನವರಸ ನಾಯಕ ಜಗ್ಗೇಶ್ #ActorJaggesh ತಮ್ಮ ಜೀವನದ ಪಯಣದ ನೆನಪಿನ ಬುತ್ತಿಗಳನ್ನು ಹಂಚಿಕೊಂಡಿದ್ದು, ಹಳ್ಳಿಯಿಂದ ಡೆಲ್ಲಿಯವರೆಗಿನ ತಮ್ಮ ಸಾಧನೆಯ ಹಾದಿಯನ್ನು ಬಿಚ್ಚಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ #SocialMedia ತಮ್ಮ ಹಳೆಯ ಫೋಟೋಗಳನ್ನು ಹಂಚಿಕೊಂಡಿರುವ ಜಗ್ಗೇಶ್, ತಮ್ಮೊಳಗಿನ ಭಾವನೆಗಳನ್ನು ಪದಗಳ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ.

ಈ ಚಿತ್ರಗಳ ಮೆಲುಕು ಹಾಕಿ ಮತ್ತೊಮ್ಮೆ ನೋಡಿ ನನಗನ್ನಿಸಿದ್ದು ಇವನು ಇಲ್ಲಿಂದ ಬೆಳೆದವ ಎಂದರೆ ಸಿನಿಮಾ ಕಥೆ ಒಕೆ ಆದರೆ ನಿಜಜೀವನದಲ್ಲಿ ಯಾರು ನಂಬರು ಬೇರೆಯವರು ಯಾಕೆ ನನಗೆ ಅನುಮಾನ ಬಂತು!
ನಾನು ಹುಟ್ಟಿದ್ದು ಸಣ್ಣ ಕುಟುಂಬ ಆದರೆ ದೊಡ್ಡ ಕನಸು. ನಟನಾಗಬೇಕು ಅದು ಅತಿರಥರ 1980ರ ಕಾಲದಲ್ಲಿ! ನೀವೇ ಹೇಳಿ ಯಾವ ಅಪ್ಪ ಒಪ್ಪುತ್ತಾನೆ ಮಗನ ಈ ಕನಸ್ಸು? ಹಾಗಾಗಿ ಬೂಟಿನ ಏಟು ಬಾಲ್ಯದ ನಿತ್ಯ ಪೂಜೆಯಾಗಿತ್ತು.

ಶ್ರೇಷ್ಟ ಚಿಂತನೆಯ ಮನಸಿದ್ದರೆ ಮಾರ್ಗ, ಎಲ್ಲಾ ಸಾಧಿಸಿದ ನನಗೆ ಒಂದು ದುಃಖವಿದೆ, ಅಂದು ಹಟಮಾಡಿದ ಮಗ ಈಗ ಸಾಧಿಸಿದ್ದಾನೆ ನೋಡಲು ಅಪ್ಪ ಅಮ್ಮ ಇಲ್ಲವೆ ಎಂದು. ಇಂದಿನ ಸಮಯಕ್ಕೆ ಸಾಧನೆ ಶ್ರಮ ತಪಸ್ಸು, ಯಶಸು ಕಾಮಿಡಿ ಪೀಸು ಅಂದರೆ ಫಾರ್ ಗ್ರಾಂಡ್!
ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ! ಮನಸ್ಸು ಎಂಬ ಮೊಸರನ್ನ ರಾಯರು ಎಂಬ ಕಡುಗೋಲಿನಿಂದ ಕಡೆದು ತಿಳಿಯಾದ ಮಜ್ಜಿಗೆ ಮಾಡಿಕೊಂಡು ಪ್ರಶಾಂತವೆಂಬ ಸರೋವರ ಮಾಡಿಕೊಂಡಿರುವೆ ಚಂಚಲ ಮನಸ್ಸನ್ನ!

ಇಂದು ಶ್ರಮಕ್ಕೆ ಬೆಲೆಯಿಲ್ಲಾ ಬೆಳಿಗ್ಗೆ ಹುಟ್ಟಿ, ಮಧ್ಯಾಹ್ನ ಬೆಳೆದು ರಾತ್ರಿ ಸಾಯುವ ಕಾಲಘಟ್ಟ! ಬೆವರು ಸುರಿಸದೆ ಬೆಳೆಯದೆ ಅನುಭವ ಹಂಚುವ ಜಗತ್ತು
ಏನೇ ಆಗಲಿ ನನ್ನ 40 ವರ್ಷದ ಬೆಳವಣಿಗೆ ಬಳಕೆಗೆ ಉಪಯುಕ್ತ ಅನ್ನಿಸಿದರೆ ಅನುಸರಿಸಿ ಬೆಳೆಯಿರಿ ಉಳಿಯಿರಿ. ಜನ್ಮಕೊಟ್ಟವರ ಸಮಾಜದ ಮುತ್ತು ರತ್ನ ಹವಳ ಪಚ್ಚೆ ವಜ್ರವಾಗಿ, ಹಳ್ಳಿಯಿಂದ ಡೆಲ್ಲಿಯ ಬೆವರಿನ ಪ್ರಯಾಣದ ನಿಮ್ಮ ಮನೆಯ ಬಂಧುವಿಗೆ, ಹರಸುತ್ತಿರಿ, ಶುಭದಿನ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post