ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಾಗರ ಹಾವಿನ ಜೊತೆ ಸರಸ ಆಡಲು ಹೋದ ಯುವಕನೊಬ್ಬ ಅದರಿಂದ ತುಟಿಗೆ ಕಚ್ಚಿಸಿಕೊಂಡು ಪ್ರಾಣಕ್ಕೆ ಕುತ್ತು ತಂದು ಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೊಸಮನೆ ತಮ್ಮಣ್ಣ ಕಾಲೋನಿ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಮನೆ ತಮ್ಮಣ್ಣ ಕಾಲೋನಿಯ ನಿವಾಸಿ ಡ್ಯಾನಿ ಎಂಬಾತ ಮನೆಯ ಆವರಣದಲ್ಲಿದ್ದ ನಾಗರಹಾವನ್ನು ಹಿಡಿದು ಅದರ ಬಾಯಿಗೆ ಮುತ್ತಿಡುವ ಸಾಹಸಕ್ಕೆ ಮುಂದಾದಾಗ ಹಾವು ಅವನ ತುಟಿಗೆ ಕಚ್ಚಿದೆ, ಇದರಿಂದ ಆತನ ತುಟಿಯಿಂದ ತೀವ್ರ ರಕ್ತಸ್ರಾವ ಆಗುವುದರ ಜೊತೆಗೆ ತುಟಿ ಊದಿಕೊಂಡಿತು. ನೆರೆದಿದ್ದ ಸಾರ್ವಜನಿಕರು ಕೂಡಲೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ ಮೇರೆಗೆ ಮನೆಯವರು ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಆತ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಡ್ಯಾನಿ ಹಾವಿಗೆ ಮುತ್ತಿಕ್ಕುವ ಹಾಗೂ ಅದು ಅವನ ತುಟಿಗೆ ಕಚ್ಚುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ. ಹಾವಿಗೆ ಮುತ್ತಿಕ್ಕಲು ಹೋಗಿ ಅದರಿಂದ ತುಟಿಗೆ ಕಚ್ಚಿಸಿಕೊಳ್ಳುವ ಮೂಲಕ ಯುವಕ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ ಪರಿಣಾಮವಾಗಿ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
















