ಕುಮಾರಿ ಪೂರ್ಣಿಮಾ ಬಂಟ್ವಾಳ ಅವರು ಬಿ. ರತ್ನಾಕರ ಸಾಲಿಯಾನ್ ಮತ್ತು ಶಾಲಿನಿ ಇವರ ದ್ವಿತೀಯ ಮಗಳು. ಕಲೆ ಅನ್ನೋದು ಇವರ ಕುಟುಂಬದಲ್ಲಿ ರಕ್ತಗತವಾಗಿದೆ. ಇವರ ಇಡೀ ಕುಟುಂಬವೇ ಕಲಾವಿದರು.
ಇವರ ತಂದೆ ತುಳುನಾಡಿನ ಪ್ರಸಿದ್ಧ ಜನಪದ ಕಲೆಯಾದ ಹುಲಿವೇಷವನ್ನು ಸತತವಾಗಿ 38 ವರ್ಷಗಳ ಕಾಲ ಗೆಳೆಯರ ಬಳಗ ತಂಡವನ್ನು ಕಟ್ಟಿಕೊಂಡು ಇಂದಿಗೂ ಹುಲಿವೇಷ ಕುಣಿತವನ್ನು ಮುಂದುವರೆಸುತ್ತಿದ್ದಾರೆ.
ತಂದೆಯ ಕಲೆಯನ್ನು ಹುಟ್ಟಿನಿಂದ ನೋಡುತ್ತಾ ಬೆಳೆದ ಇವರು ತಾನೂ ಕಲಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನುವ ಛಲ ಮೈಗೂಡಿಸಿಕೊಂಡರು. ತಾಯಿಯ ಸಂಗೀತದ ವಿದ್ಯೆ, ತಂದೆಯ ಕ್ರೀಡೆ, ಜನಪದ ಕಲೆಯ ಜೊತೆಗೆ ಇಬ್ಬರ ಪ್ರೋತ್ಸಾಹದೊಂದಿಗೆ ಬಾಲ್ಯದಿಂದಲೇ ಹಲವಾರು ನೃತ್ಯ, ಸಂಗೀತ, ಅಭಿನಯ, ಕ್ರೀಡೆ, ಭಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಪ್ರಶಸ್ತಿ ಪಡೆಯುತ್ತಾ ಬಂದಿದ್ದಾರೆ.
ಅವಕಾಶಗಳು ನೃತ್ಯ ಕ್ಷೇತ್ರ ಮತ್ತು ಸಂಗೀತ ಕ್ಷೇತ್ರದಲ್ಲಿ ಕಾಲ ಬುಡಕ್ಕೆ ಬಂದರೂ ತನ್ನ ಶಿಕ್ಷಕಿ ವೃತ್ತಿ ಬಿಡಬಾರದು ಅದರಲ್ಲಿಯೇ ಏನನ್ನಾದರೂ ಸಾಧಿಸಬೇಕು ಅನ್ನುವ ಉದ್ದೇಶದಿಂದ ಎಲ್ಲವನ್ನು ಕೈ ಬಿಟ್ಟು ತಮ್ಮ ಕ್ಷೇತ್ರದಲ್ಲಿಯೇ ಸಾಧನೆ ಮಾಡುತ್ತಿದ್ದಾರೆ.
ತನ್ನ ಪ್ರಾಥಮಿಕ, ಪ್ರೌಢಶಾಲೆ, ಬಂಟ್ವಾಳದ ಕಾಲೇಜು ಶಿಕ್ಷಣವನ್ನು ಎಸ್.ವಿ.ಎಸ್ ವಿದ್ಯಾಸಂಸ್ಥೆಯಲ್ಲಿ ಮುಗಿಸಿ ಮುಂದೆ ಶಿಕ್ಷಕಿ ಆಗಬೇಕೆಂಬ ಕನಸಿನೊಂದಿಗೆ ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ತರಬೇತಿ ಶಿಕ್ಷಣ ಮುಗಿಸಿದ್ದಾರೆ.
ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಅದರ ಜೊತೆಗೆ ಶಿಕ್ಷಕಿಯಾಗಿ ತಾನೂ ಕಲಿತ ವಿದ್ಯಾಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾ, ತಾನೂ ಕಲಿತ ನೃತ್ಯ ಸಂಗೀತ ವಿದ್ಯೆಯನ್ನು ಇತರರಿಗೂ ನೀಡಬೇಕೆಂಬ ಕನಸಿನೊಂದಿಗೆ ತನ್ನದೇ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ.
ಗೆಳೆಯರ ಬಳಗ ಕಲಾ ತಂಡ, ಮತ್ತು ಗೆಳೆಯರ ಬಳಗ ಸಂಗೀತ ಕಲಾ ಕೇಂದ್ರವನ್ನು ಸ್ಥಾಪಿಸಿ ಹಲವಾರು ಬಡ ವಿದ್ಯಾರ್ಥಿಗಳಿಗೆ ನೃತ್ಯ, ಸಂಗೀತ ತರಬೇತಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಹಾಗೂ ತಾನೂ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ವಿದ್ಯಾಸಂಸ್ಥೆಯಲ್ಲಿಯೂ ವಿದ್ಯಾರ್ಥಿಗಳಿಗೆ ನೃತ್ಯ, ಸಂಗೀತ, ಚಿತ್ರಕಲೆ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ.
ಇವರೆಲ್ಲಾ ಪೂರ್ಣಿಮಾ ಅವರ ಗುರುಗಳು:
ಹೇಮಾ ಪುರಂದರ – ಸಂಗೀತ
ವೆಂಕಟೇಶ್ ಚಿಪ್ಳುಣ್ ಕರ್ – ಸಂಗೀತ
ವೆಂಕಟ್ ಕೃಷ್ಣ ಭಟ್ – ಸಂಗೀತ
ಧನುಷ್ ಕೋಟ್ಯಾನ್ – ಫಿಲ್ಮ್ ಡ್ಯಾನ್ಸ್
ಲೀಲಾರ್ಧ ಆಳ್ವಾಸ್ – ಜನಪದ ನೃತ್ಯ (ಆಳ್ವಾಸ್ ವಿದ್ಯಾಸಂಸ್ಥೆ)
ಪುನೀತ್ ಉದ್ಯಾವರ – ಜನಪದ ನೃತ್ಯ (ಶ್ರೀರಾಮ್ ಡ್ಯಾನ್ಸ್ ಅಕಾಡೆಮಿ ಉಡುಪಿ) (Full Team)
ಗುರು ಚರಣ್ ಕಾಪು – ಜನಪದ ನೃತ್ಯ (ನಿತ್ಯಶ್ರೀ ಜಾನಪದ ಕಲಾ ತಂಡ ಕಾಪು ಉಡುಪಿ) (Full Team)
ಅರುಣ್ ಎರ್ಮಳ್ – ಜನಪದ ನೃತ್ಯ
ಯಶೋರ್ಧ ಎರ್ಮಳ್ – ಜನಪದ ನೃತ್ಯ (ಸನಾ ಜಾನಪದ ಕಲಾ ತಂಡ ಎರ್ಮಳ್ ) (Full Team)
ದೇವದಾಸ್ ಪ್ರಭು – ತಬಲ ಹಾರ್ಮೋನಿಯಂ
ಇವೆಲ್ಲಾ ಈಕೆ ಸಾಧನೆಯ ಗರಿಗಳು:
1) ಇಸ್ಕಾನ್ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನ ಮಂಗಳೂರು ಇವರಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ
ಸನ್ಮಾನ-2019
2) ವಲಯ ಮಟ್ಟದ ಕಲಾ ಪ್ರತಿಭೋತ್ಸವ -2016(ಮೈಸೂರು) 3ನೆಯ ಸ್ಥಾನ (ನೃತ್ಯ)
3) ಪ್ರಗತಿಪರ ಸೇವಾ ಸಂಸ್ಥೆ ಮಂಡ್ಯ ಇವರಿಂದ ರಾಜ್ಯ ಮಟ್ಟದಲ್ಲಿ ಉತ್ತಮ ಕಲಾ ಸೇವಾ ಶಿಕ್ಷಕಿ ಪ್ರಶಸ್ತಿ 2018
4) ಜಿಲ್ಲಾ ಮಟ್ಟದ ಯುವಜನೋತ್ಸವ ಸಂಯುಕ್ತ 2010-11ರಲ್ಲಿ ಜಾನಪದ ನೃತ್ಯದಲ್ಲಿ ದ್ವಿತೀಯ
5) ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಡ್ಯಾರ್’ನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಸಂವತ 2009-10ರಲ್ಲಿ
ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ
6) ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಡ್ಯಾರ್ ಇಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಸಂವತ 2009-10 ರಲ್ಲಿ
ಜಾನಪದ ನೃತ್ಯದಲ್ಲಿ ದ್ವಿತೀಯ
7) ಜಾನಪದ ಕಲೋತ್ಸವ ಬಂಟ್ವಾಳ 2017ರಲ್ಲಿ ಸನ್ಮಾನ
8) ರಾಷ್ಟ್ರ ಮಟ್ಟದ ಶೋಧನ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದಕ್ಕೆ ಬೆಸ್ಟ್ ಗೈಡ್ ಟೀಚರ್ ಪ್ರಶಸ್ತಿ
2017-18
9) ಕರಾವಳಿ ಉತ್ಸವ 2008-09
10) 2011ರಲ್ಲಿ ಹಿಮಾಲಯನ್ ಮೌಂಟೈನೀರಿಂಗ್ ಇನ್ಸ್ಟಿಟ್ಯೂಟ್ ಡಾರ್ಜೀಲಿಂಗ್ ಇಲ್ಲಿ HMI special
adventure courseನ್ನು ಪೂರ್ಣ
11) ಹಾಸನದಲ್ಲಿ 2010-11ರಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಯುವಜನೋತ್ಸವದಲ್ಲಿ ಜಾನಪದಯಲ್ಲಿ
ಗೀತೆ ಪ್ರಥಮ
12) 2014ರಲ್ಲಿ ಮಂಗಳೂರಿನ ಪಿಲಿಕುಳದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ ಇದರಲ್ಲಿ Flock Leader
ತರಬೇತಿ
13) ಜಿಲ್ಲಾ ಮಟ್ಟದ ಯುವಜನೋತ್ಸವ ಸಂಯುಕ್ತ 2010-11 ರಲ್ಲಿ ದೇಶಭಕ್ತಿ ಗೀತೆಯಲ್ಲಿ ಪ್ರಥಮ
14) ಜಿಲ್ಲಾಮಟ್ಟದ ಯುವಜನೋತ್ಸವ ಸಂಯುಕ್ತ 2010-11ರಲ್ಲಿ ಜಾನಪದ ಗೀತೆ ಪ್ರಥಮ
15) ರಾಮನಗರದಲ್ಲಿ ನಡೆದ ಬುಡಕಟ್ಟು ಉತ್ಸವದಲ್ಲಿ ಭಾಗಿ
16) 2008ರಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಬಾಲಕಿಯರ NSS ಶಿಬಿರದಲ್ಲಿ ಭಾಗಿ
17) ಆಳ್ವಾಸ್ ಶಿಕ್ಷಣ ಸಂಸ್ಥೆ ಯಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ
18) ಜಿಲ್ಲಾ ಮಟ್ಟದ ಸತ್ಯ ಸಾಯಿ ಸೇವಾ ಸಂಸ್ಥೆ ಬಾಲವಿಕಾಸ ಪರೀಕ್ಷೆಯಲ್ಲಿ ಅ ಗ್ರೇಡ್ -2002
19) ಮೈಸೂರು ವಿಭಾಗ ಮಟ್ಟದ ಯುವಜನ ಮೇಳದಲ್ಲಿ ದೇಶಭಕ್ತಿಗೀತೆ ಯಲ್ಲಿ ದ್ವಿತೀಯ -2009-2010
20) ಬಂಟ್ವಾಳ ತಾಲೂಕು ಯುವಜನ ಮೇಳದಲ್ಲಿ ತುಳು ಗೀತೆಯಲ್ಲಿ ಪ್ರಥಮ 2012-13
21) ಕರ್ನಾಟಕ ಶಾಸ್ತ್ರಿಯ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣ
22) ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ 2010ರಲ್ಲಿ ನೃತ್ಯದಲ್ಲಿ ಭಾಗಿ
23) ಮೈಸೂರು ದಸರಾ ಮಹೋತ್ಸವ 2013ರಲ್ಲಿ ನೃತ್ಯದಲ್ಲಿ ಭಾಗಿ
24) ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸಮಾರಂಭ
25) ವಾಲಿಬಾಲ್, ಖೋ ಖೋ ಥ್ರೋ ಬಾಲ್ ಕ್ರೀಡೆಗಳಲ್ಲಿ ಪ್ರಶಸ್ತಿ
26) ಜೈಸಿ ವೀಕ್ 2010 – ಸಂಗೀತ ದ್ವಿತೀಯ
27) ಎಸ್.ಡಿ.ಎಮ್ ಕಾಲೇಜು ಉಜಿರೆ ನಾಯಕತ್ವ ಶಿಬಿರ ಭಾಗಿ
28) ಗಡಿನಾಡು ಜಾನಪದ ಕಲಾ ಉತ್ಸವ – ನೃತ್ಯ
ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ತನ್ನ ಗೆಳೆಯರ ಬಳಗ ತಂಡ ಕಟ್ಟಿಕೊಂಡು ಹಲವಾರು ಕಡೆ ತಂಡ ಪ್ರಶಸ್ತಿ ಪಡೆಯುತ್ತಾ ಬಂದಿದೆ. ಇವರ ತಂಡಕ್ಕೆ ಇವರ ಕುಟುಂಬವೇ ಬೆನ್ನೆಲುಬು. ತಂಗಿ ನೃತ್ಯಗಾರ್ತಿ, ಅಣ್ಣ ಮೇಕಪ್ ಹೀಗೆ ಅಣ್ಣ ತಮ್ಮ ತಂಗಿ ತಂದೆ ತಾಯಿ ಎಲ್ಲರ ಶ್ರಮದಿಂದ ಇವರು ತಂಡವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ತಂಡ ವಿದ್ಯಾರ್ಥಿಗಳಿಗೆ ನೃತ್ಯಕ್ಕೆ ನೀಡಿದ ತರಬೇತಿಯಿಂದ 2018ರಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆಯುವಂತಾಯಿತು. ಇವರ ತಂಡದಲ್ಲಿ ವಿಶೇಷ ಮಗುವಿಗೆ ಅವಕಾಶ ನೀಡಿ ಇಂದು ಆ ವಿದ್ಯಾರ್ಥಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದು ಇಂದು ಹತ್ತು ಹಲವಾರು ಕಡೆ ನೃತ್ಯ ಪ್ರದರ್ಶನ ಮಾಡಿ ಪ್ರಶಸ್ತಿಯನ್ನು ಪಡೆಯುವಂತಾಗಿದೆ.
ಯಾವುದೇ ವಿದ್ಯಾರ್ಥಿಗಳಿಂದ ಅಪೇಕ್ಷೆಯನ್ನು ಇಟ್ಟುಕೊಳ್ಳದೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೃತ್ಯ ಮತ್ತು ಸಂಗೀತಕ್ಕೆ ತರಬೇತಿಗೊಳಿಸಿ ಗೆಳೆಯರ ಬಳಗ ತಂಡ ಹಲವಾರು ಕಡೆ ಕಾರ್ಯಕ್ರಮಗಳನ್ನು ನೀಡುತ್ತಾ ಇದೆ.
ಲೇಖನ, ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post