ಶಿವಮೊಗ್ಗ: ಕಳೆದ ಐದು ತಿಂಗಳ ಹಿಂದೆ ಶಿವಮೊಗ್ಗದ ಮೊಟ್ಟಮೊದಲ ಮಹಿಳಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ್ದ ಡಾ.ಎಂ. ಅಶ್ವಿನಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಕೆ.ಎಂ. ಕಾಂತರಾಜು ಅವರನ್ನು ನೂತನ ಎಸ್’ಪಿ ಆಗಿ ನೇಮಿಸಿದೆ.
ಗುಪ್ತಚರ ಇಲಾಖೆಯಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 2015ರ ಬ್ಯಾಚ್ ಐಪಿಎಸ್ ಅಧಿಕಾರಿ ಕೆ.ಎಂ. ಶಾಂತರಾಜ್ ಅವರು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸುತ್ತಿದ್ದಾರೆ.
ಶಿವಮೊಗ್ಗದ ಮೊಟ್ಟ ಮೊದಲ ಮಹಿಳಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐದು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದ ಅಶ್ವಿನಿ ಅವರು, ಆಡಳಿತಾತ್ಮಕ ಹಾಗೂ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಗಳಿಸಿದ್ದರು.
ರೌಡಿ ಚಟುವಟಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದ ಅವರು, ಜಿಲ್ಲೆಯ ಭದ್ರತೆ ಹಾಗೂ ಪೊಲೀಸ್ ಇಲಾಖೆಯನ್ನು ಜನಪರಗೊಳಿಸುವಲ್ಲಿ ಹೆಸರುವಾಸಿಯಾಗಿದ್ದರು.
Discussion about this post