“ವಿಶ್ವ ಕುಂದಾಪ್ರ ಕನ್ನಡ ದಿನ”
ಕುಂದಾಪುರ ಇದು ಉಡುಪಿ ಜಿಲ್ಲೆಯಲ್ಲಿ ಬರುವ ಸುತ್ತಲೂ ನೀರಿನಿಂದ ಸುತ್ತುವರಿದ ಕುಂದಾಪ್ರ ಕನ್ನಡ ಮಾತನಾಡುವ ಕುಂದಗನ್ನಡಿಗರ ತವರು. ಇದು ಭಾಷೆಯಲ್ಲ ಬದುಕು ಎನ್ನುವ ಹಾಗೆ ಜೀವನ ಮೌಲ್ಯವನ್ನು ಸಾರುವ ಸಾವಿರ-ಸಾವಿರ ಗಾದೆ ಮಾತುಗಳನ್ನು, ಜಾನಪದ ಗೀತೆಗಳನ್ನು ಕುಂದಾಪುರ ಭಾಗದ ಹಿರಿಯರು ಹುಟ್ಟು ಹಾಕಿದ್ದಾರೆ.
ಮೂಲ ಭಾಷೆ ಕನ್ನಡವಾಗಿದ್ದರು ಮಂಗಳೂರಿನ ಜನರು ಬಳಸುವ ಕನ್ನಡವನ್ನು ಮಂಗಳೂರು ಕನ್ನಡವೆಂತನು ಹುಬ್ಳ ಧಾರವಾಡ ಮಂದಿ ಮಾತನಾಡುವ ಕನ್ನಡವನ್ನು ಹುಬ್ಬಳ್ಳಿ ಕನ್ನಡವೆಂದು ಕುಂದಾಪುರ ಭಾಗದ ಜನರು ಬಳಸುವ ಕನ್ನಡದ ಶೈಲಿಗೆ ಕುಂದಗನ್ನಡವೆಂದು ಕರೆಯುತ್ತಾರೆ.
ಕನ್ನಡ ಭಾಷೆಯನ್ನು ಆಯಾಯ ಪ್ರದೇಶದ ಜನರು ಅವರವರ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿದ್ದಾರೆ. ಒಂದೊಂದು ಭಾಗದ ಜನರು ಕನ್ನಡವನ್ನು ಒಂದೊಂದು ರೀತಿಯಾಗಿ ಬಳಸುವ ವಾಡಿಕೆ ಬೆಳೆದು ಬಂದಿದೆ.
ಸಹೃದಯಿ ಸ್ನೇಹಿತರೆಲ್ಲಾ ಒಂದಾಗಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯನ್ನು ಆಗಸ್ಟ್ ಒಂದನೇ ತಾರೀಕಿನಂದು ಆಚರಿಸುತಿರುವುದು ನಮಗೆಲ್ಲಾ ಅತ್ಯಂತ ಖುಷಿಯ ವಿಷಯ. ಪ್ರತಿಯೊಬ್ಬ ವ್ಯಕ್ತಿಗೂ ಅವರು ಹುಟ್ಟಿದ ಸ್ಥಳ ಹಾಗೂ ಮಾತೃಭಾಷೆ ಮನಸ್ಸಿಗೆ ಅಪಾರವಾದ ಆನಂದವನ್ನು ನೀಡುತ್ತವೆ. ಕುಂದಾಪುರ ಭಾಗದ ಜನರು ಕನ್ನಡ ಮಾತನಾಡುವಾಗ ಪದಗಳನ್ನು ಶಾರ್ಟ್ ಆಗಿ ಬಳಸುತ್ತಾರೆ.
ಕುಂದಗನ್ನಡ ಕಂಪು ನಾಡಿನಾ ದ್ಯಂತ ಪಸರಿಸುತ್ತಿದೆ. ಕುಂದಾಪುರದ ಆಡುಭಾಷೆ ನಾಡಿನಾಧ್ಯಂತ ಗಮಗುಟ್ಟುತಿದೆ. ಆಷಾಢ ಮಾಸದ ಅಮಾವಾಸೆಯ ಸುದಿನದಂದು ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಆಚರಣೆಗೆ ಮುನ್ನುಡಿ ಬರೆಯಲಾಗುತ್ತದೆ. ರಾಜ್ಯ ದೇಶ ವಿದೇಶದಲ್ಲಿ ನೆಲೆಸಿರುವ ಕುಂದಗನ್ನಡಿಗರು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಅಭೂತಪೂರ್ವ ಬೆಂಬಲವನ್ನು ಸೂಚಿಸಿದ್ದಾರೆ. ಈಗಾಗಲೇ ಕುಂದಾಪ್ರ ಕನ್ನಡ ದಿನದ ಅಧಿಕೃತ ಲೋಗೊ ಬಿಡುಗಡೆ ಮಾಡಲಾಗಿದೆ.
ವಾಂಡರ್ ಕಂಬ್ಲ ನೋಡುಕ್ ಚಂದ ಕುಂದಾಪ್ರ ಕನ್ನಡ ಭಾಷಿ ಮಾತಾಡುಕ್ ಚಂದ. ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಎಲ್ಲರೂ ಜೊತೆಯಾಗಿ ಆಚರಿಸೋಣ. ಕುಂದಾಪ್ರ ಕನ್ನಡ ಕೇವಲ ಕುಂದಾಪ್ರ ಭಾಗಕ್ಕೆ ಸೀಮಿತವಾಗದೆ ರಾಜ್ಯದಾದ್ಯಂತ ಪಸರಿಸುವಂತೆ ಮಾಡೋಣ.
ಲೇಖನ: ಗೌರೀಶ್ ಆವರ್ಸೆ
ಚಿತ್ರಕೃಪೆ/ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post