ಬೆಂಗಳೂರು: ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸುವ ಮೂಲಕ ಇಡಿಯ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ದೇಶದ ನಿಜವಾದ ಹೀರೋ ಆಗಿದ್ದಾರೆ. ಮಾತ್ರವಲ್ಲ, ಅವರ ಮೀಸೆಯ ಶೈಲಿ ಈಗ ಟ್ರೆಂಡ್ ಆಗಿದ್ದು, ದೇಶದಲ್ಲಿ ಸಾವಿರಾರು ಮಂದಿ ಇದಕ್ಕೆ ಮಾರುಹೋಗಿ, ತಾವೂ ಸಹ ಅದೇ ರೀತಿ ಸ್ಟೈಲ್ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಕೋರಮಂಗಲದ 6ನೆಯ ಹಂತದ ನಾನೇಶ್ ಅಡ್ವಾನ್ಸ್ ಹೇರ್ ಸ್ಟುಡಿಯೋದಲ್ಲಿ ವಿಶೇಷವಾಗಿ ಉಚಿತವಾಗಿ ಹೇರ್ ಕಟ್ ಆಯೋಜಿಸಲಾಗಿತ್ತು. ಅದರಂತೆ ನೂರಾರು ಸಂಖ್ಯೆಯಲ್ಲಿ ಜನರು ಬಂದು ತಮ್ಮ ದೇಶಪ್ರೇಮವನ್ನು ಏರೋ ಕಮಾಂಡರ್ ಅಭಿನಂದನ್ ಅವರ ರೀತಿಯಲ್ಲಿ ತಮ್ಮ ಮುಡಿ ಹಾಗೂ ಮೀಸೆಯನ್ನು ಕಟ್ ಮಾಡಿಸುವುದರ ಮೂಲಕ ದೇಶ ಪ್ರೇಮವನ್ನು ಮೆರೆದರು.


ಇದಲ್ಲದೇ, ಬೆಂಗಳೂರಿನ ಮೊಹಮದ್ ಚಾಂದ್ ಎಂಬ ವ್ಯಕ್ತಿಯೊಬ್ಬರು ಅಭಿನಂದನ್ ಅವರ ಮೀಸೆಯ ರೀತಿಯಲ್ಲೆ ತಾವೂ ಸಹ ಸ್ಟೈಲ್ ಮಾಡಿಸಿಕೊಂಡಿದ್ದಾರೆ.
ನಾನು ಅವರ ಅಭಿಮಾನಿ, ಅವರ ಆದರ್ಶ ಹಾಗೂ ಸಾಹಸವನ್ನು ಅನುಸರಿಸುತ್ತೇನೆ. ಈ ದೇಶದ ನಿಜವಾದ ಹೀರೋ ಆಗಿರುವ ಅವರ ಸ್ಟೈಲ್ ಇಷ್ಟವಾಗಿ ಅದೇ ರೀತಿ ಮಾಡಿಸಿಕೊಂಡಿದ್ದೇನೆ ಎಂದಿದ್ದಾರೆ.
ಅಲ್ಲದೇ, ಪೊಲೀಸ್ ಪೇದೆಯೊಬ್ಬರು ಅಭಿನಂದನ್ ಅವರ ರೀತಿಯಲ್ಲಿಯೇ ಮೀಸೆ ಸ್ಟೈಲ್ ಮಾಡಿಸಿಕೊಂಡಿರುವ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.













Discussion about this post