ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಮೇಗರವಳ್ಳಿಯ ಶಾಲೆ ಎದುರು ಎರಡು ಕಾರುಗಳ #Car ನಡುವೆ ಅಪಘಾತ ಸಂಭವಿಸಿದ್ದು ಹಿಂದಿನಿಂದ ಕೆಂಪು ಕಾರಿಗೆ ನೀಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೆಂಪು ಕಾರು ಸಂಪೂರ್ಣ ಜಖಂಗೊಂಡಿದೆ.
ಕೆಂಪು ಕಾರಿನಲ್ಲಿ ಇದ್ದಂತಹ ಮೇಗರವಳ್ಳಿಯ ಅಶೋಕ್ ದಂಪತಿಗಳಿಗೆ ಭಾರಿ ಪೆಟ್ಟಾಗಿದ್ದು ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ #ManipalHospital ರವಾನೆ ಮಾಡಲಾಗಿದೆ.
ಇಬ್ಬರು ತೀರ್ಥಹಳ್ಳಿಗೆ #Thirthahalli ಹೊರಟಿದ್ದರು. ಹಿಂದಿನಿಂದ ಬಂದಂತಹ ನೀಲಿ ಕಾರು ಕೆಂಪು ಕಾರಿಗೆ ಡಿಕ್ಕಿ ಹೊಡೆದಿದ್ದು ಕೆಂಪು ಕಾರು ಆನಂತರದಲ್ಲಿ ಪಕ್ಕದಲ್ಲಿದ್ದ ಹಲಸಿನ ಮರಕ್ಕೆ ಹೊಡೆದ ಪರಿಣಾಮವಾಗಿ ಕೆಂಪು ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಅತಿ ವೇಗವಾಗಿ ಬಂದಂತಹ ನೀಲಿ ಕಾರಿನಿಂದಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆಲವೇ ನಿಮಿಷಗಳ ಮುಂಚೆ ಶಾಲಾ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲೆಗೆ ತೆರಳಿದ್ದರು. ಮಕ್ಕಳು ಶಾಲೆಗೆ ಒಳಹೋದ ಕೆಲವೇ ಕ್ಷಣಗಳಲ್ಲಿ ಈ ಅವಘಡ ಸಂಭವಿಸಿದೆ.
ಶಾಲೆಯ ಎದುರು ಬ್ಯಾರಿಕೇಟ್ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















